August 26, 2026
Wednesday, August 26, 2026
spot_img

ಈಗಲೇ ಚಳಿಗಾಲದ ಟ್ರಿಪ್ ಪ್ಲಾನ್‌ ಮಾಡ್ತಿದ್ದೀರಾ? ಈ ಉಪಯುಕ್ತ ಮಾಹಿತಿ ತಿಳಿದುಕೊಳ್ಳಿ

ಏನೇ ಹೇಳಿ ವರ್ಷದಲ್ಲಿ ಒಂದು ವಿಂಟರ್‌ ಟ್ರಿಪ್‌ ಮಾಡೋದೇ ಮಜಾ! ಜನರು ತಮ್ಮ ಚಳಿಗಾಲದ ದಿನಗಳಲ್ಲಿ ಟ್ರಿಪ್‌ ಹೋಗೋದಕ್ಕೆ ಇಷ್ಟಪಡುತ್ತಾರೆ. ಕೆಲವೊಂದು ಸ್ಥಳಗಳನ್ನು ಚಳಿಗಾಲದಲ್ಲಿ ನೋಡೋದೇ ಚಂದ. ಚಳಿಗಾಲದಲ್ಲಿ ಟ್ರಿಪ್‌ ಏನೋ ಹೋಗ್ತೀರಿ ಆದರೆ ಅಲ್ಲಿ ಹೋಗಿ ಅನಾರೋಗ್ಯಕ್ಕೆ ತುತ್ತಾಗಬಾರದು. ಹಾಗೇ ಬಂದಮೇಲೂ ಅನಾರೋಗ್ಯ ಕಾಡಬಾರದು. ನಿಮ್ಮ ಚಳಿಗಾಲದ ಟ್ರಿಪ್‌ನ್ನು ನೆನಪಿನ ಪುಟದಲ್ಲಿ ಉಳಿಸಿಕೊಳ್ಳಬೇಕು ಎಂದರೆ ಈ ಎಲ್ಲ ಟಿಪ್ಸ್‌ಗಳ ಮೇಲೆ ಗಮನ ಇರಲಿ..

ಬಟ್ಟೆ ಪ್ಯಾಕಿಂಗ್‌ ಬಗ್ಗೆ ಗಮನಕೊಡಿ

ಮಾಮೂಲಿ ಬಟ್ಟೆಗಳ ಬದಲು ದಪ್ಪನೆಯ ಬಟ್ಟೆಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಎರಡು ಮೂರು ಲೇಯರ್‌ ಹಾಕಿಕೊಂಡು ಸ್ಟೈಲ್‌ ಮಾಡಬಹುದಾದ ಔಟ್‌ಫಿಟ್‌ಗಳನ್ನು ಮಾತ್ರ ಇಟ್ಟುಕೊಳ್ಳಿ. ಫ್ಯಾನ್ಸಿ ಸ್ವೆಟರ್ಸ್‌ ಹಾಕಿಕೊಳ್ಳಿ.

ಸ್ಕಿನ್‌ ಕೇರ್‌ಗೆ ಎಕ್ಸ್ಟಾ ಪಾಯಿಂಟ್ಸ್‌

ಚಳಿಗಾಲದಲ್ಲಿ ಮನೆಯೊಳಗೆ ಬೆಚ್ಚಗೆ ಕುಳಿತಿದ್ರೂ ಸ್ಕಿನ್‌ಗೆ ಎಕ್ಸ್ಟ್ರಾ ಕೇರ್‌ ಮಾಡಬೇಕಾಗುತ್ತದೆ. ಇನ್ನು ಟ್ರಿಪ್‌ ಮಾಡೋದೇ ಆದರೆ ಸ್ಕಿನ್‌ ಕೇರ್‌ಗೆ ಬೇಕಾದ ಎಲ್ಲವನ್ನೂ ಮೊದಲೇ ಪ್ಯಾಕ್‌ ಮಾಡಿಕೊಳ್ಳಿ. ದಪ್ಪವಾದ ಮಾಯಿಶ್ಚರೈಸರ್‌ ಬಳಕೆ ಮಾಡಿ.

ಚೆನ್ನಾಗಿ ನೀರು ಕುಡಿಯಿರಿ

ಚಳಿಗಾಲದಲ್ಲಿ ಬೀಸುವ ತಣ್ಣನೆಯ ಗಾಳಿಯು ದೇಹದಲ್ಲಿರುವ ಮಾಯಿಶ್ಚರ್‌ ತೆಗೆದುಹಾಕುತ್ತದೆ. ಬೆವರುವುದು ಕಡಿಮೆ ಎಂದು ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ. ತುಸು ಹೆಚ್ಚೇ ನೀರು ಕುಡಿಯುವುದು ಉತ್ತಮ.

ಎಮರ್ಜೆನ್ಸಿಗೆ ತಯಾರಾಗಿ

ನೀವು ಹಿಮ ಅಥವಾ ಅತಿಯಾದ ಚಳಿಯಿರುವ ಕಡೆ ಟ್ರಾವೆಲ್‌ ಮಾಡುತ್ತಿದ್ದರೆ ಎಮರ್ಜೆನ್ಸಿಗೆ ಬೇಕಾಗುವ ಮೆಡಿಸಿನ್‌, ಬ್ಲಾಂಕೆಟ್‌, ಊಟ, ನೀರು ಎಲ್ಲವನ್ನೂ ತಯಾರಾಗಿ ಇಟ್ಟುಕೊಂಡು ಹೋಗಿ. ಯಾವ ಸಮಯದಲ್ಲಿ ಯಾವ ರೀತಿ ಎಮರ್ಜೆನ್ಸಿ ಬರುತ್ತದೆ ಹೇಳೋಕಾಗೋದಿಲ್ಲ.

ಭಾರತದ ಯಾವ ಜಾಗಕ್ಕೆ ಹೋಗ್ಬೋದು?

ಗುಲ್ಮರ್ಗ್‌
ಮನಾಲಿ
ಗೋವಾ
ಕೇರಳ

ಉದಯಪುರ
ಜೈಸಲ್ಮೇರ್
ಕೂರ್ಗ್‌
ಶಿಮ್ಲಾ

ಔಲಿ
ನೈನಿತಾಲ್‌
ಮಸೂರಿ
ಡಾರ್ಜಲಿಂಗ್‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !