August 26, 2026
Wednesday, August 26, 2026
spot_img

ಬೆಂಗಳೂರಿನ 10 ಪ್ರಸಿದ್ಧ ಕ್ಲಬ್‌ಗಳ ಮೇಲೆ ಫುಡ್ ಸೇಫ್ಟಿ ದಾಳಿ: ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಬಿಗಿ ಕ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಸಾರ್ವಜನಿಕರು ಮತ್ತು ಗ್ರಾಹಕರಿಗೆ ಸ್ವಚ್ಛ, ಆರೋಗ್ಯಕರ ಹಾಗೂ ಸುರಕ್ಷಿತ ಆಹಾರ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು, ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯು ‘ಗ್ರೇಟರ್ ಬೆಂಗಳೂರು’ ಅಧಿಕಾರಿಗಳ ಸಹಯೋಗದೊಂದಿಗೆ ನಗರದ ಪ್ರಮುಖ ಕ್ಲಬ್‌ಗಳಲ್ಲಿ ಜಂಟಿ ಪರಿಶೀಲನೆ ನಡೆಸಿತು.

ಟಾಪ್ 10 ಕ್ಲಬ್‌ಗಳ ಲಿಸ್ಟ್ ಬಿಡುಗಡೆ

ಸೆಂಚುರಿ ಕ್ಲಬ್
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ಲಬ್
ಬೆಂಗಳೂರು ರೇಸ್ ಕೋರ್ಸ್ ಕ್ಲಬ್
ಬೌರಿಂಗ್ ಇನ್‌ಸ್ಟಿಟ್ಯೂಟ್
ಕ್ಯಾಥೊಲಿಕ್ ಕ್ಲಬ್
ಬ್ಯಾಡ್ಮಿಂಟನ್ ಕ್ಲಬ್
ಟೆನ್ನಿಸ್ ಕ್ಲಬ್
ವಿಜಯನಗರ ಕ್ಲಬ್
ಮಹಾಲಕ್ಷ್ಮಿ ಲೇಔಟ್ ಕ್ಲಬ್
ಮಲ್ಲೇಶ್ವರಂ ಕ್ಲಬ್

ಅಡುಗೆಮನೆ ನೋಡಿ ಅಧಿಕಾರಿಗಳೇ ಶಾಕ್!

ಅಧಿಕಾರಿಗಳ ತಂಡವೊಂದು ಕ್ಲಬ್‌ಗಳ ಅಡುಗೆಮನೆಗಳು, ದಾಸ್ತಾನು ಕೊಠಡಿಗಳು, ಆಹಾರ ತಯಾರಿಕಾ ವಿಧಾನಗಳು ಮತ್ತು ಒಟ್ಟಾರೆ ನೈರ್ಮಲ್ಯವನ್ನು ಕೂಲಂಕಷವಾಗಿ ಪರಿಶೀಲಿಸಿತು. ಪರಿಶೀಲನೆಯ ಸಮಯದಲ್ಲಿ, ಕೆಲವು ಕ್ಲಬ್‌ಗಳಲ್ಲಿ ಅವಧಿ ಮುಗಿದ ಆಹಾರ ಪದಾರ್ಥಗಳ ಸಂಗ್ರಹಣೆ, ಜಿರಲೆಗಳ ಕಾಟ, ಚರಂಡಿ ವ್ಯವಸ್ಥೆಯಲ್ಲಿನ ಅಡಚಣೆ ಮತ್ತು ಸೂಕ್ತ ನೈರ್ಮಲ್ಯದ ಕೊರತೆಯಂತಹ ಸಮಸ್ಯೆಗಳು ಕಂಡುಬಂದವು.

ಲೀಗಲ್ ನೋಟಿಸ್ ಜಾರಿ

ಸಂಬಂಧಿತ ಕ್ಲಬ್‌ಗಳ ಆಡಳಿತ ಮಂಡಳಿಗಳಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದು, ಈ ಕೊರತೆಗಳನ್ನು ತಕ್ಷಣವೇ ಸರಿಪಡಿಸುವಂತೆ ಹಾಗೂ ಸರ್ಕಾರದ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದ್ದಾರೆ.

ಸಾರ್ವಜನಿಕರ ಆರೋಗ್ಯವೇ ಇಂಪಾರ್ಟೆಂಟ್

ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಸರ್ಕಾರವು ಮೊದಲ ಆದ್ಯತೆ ನೀಡುತ್ತಿದ್ದು, ಯಾವುದೇ ಸಂಸ್ಥೆಯು ಎಷ್ಟೇ ದೊಡ್ಡದಾಗಿರಲಿ ಅಥವಾ ಪ್ರತಿಷ್ಠಿತವಾಗಿರಲಿ, ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತವೆ ಎಂಬುದನ್ನು ಈ ಕ್ರಮವು ತೋರಿಸಿಕೊಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !