August 27, 2026
Thursday, August 27, 2026
spot_img

WEATHER | ರಾಜ್ಯಾದ್ಯಂತ ಕೂಲ್-ಕೂಲ್ ವಾತಾವರಣ: ನಿಮ್ಮ ಊರಲ್ಲಿ ಹೇಗಿರಲಿದೆ ವೆದರ್? ಎಲ್ಲೆಲ್ಲಿ ಮಳೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ 7 ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಥಂಡಿ ವಾತಾವರಣ ಇರಲಿದೆ. ಅಲ್ಲಲ್ಲಿ ತಂಪು ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಳನಾಡಿನಲ್ಲಿ ಬಿಸಿಲು-ಮೋಡ ಕಣ್ಣಾಮುಚ್ಚಾಲೆ

ಒಳನಾಡು ಜಿಲ್ಲೆಗಳಲ್ಲಿ ಬಿಸಿಲು ಮತ್ತು ಮೋಡ ಮುಸುಕಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು, ಮಡಿಕೇರಿ ಫುಲ್ ಕೂಲ್-ಕೂಲ್

ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ತಾಪಮಾನ 29°C ಹಾಗೂ ಕನಿಷ್ಠ ತಾಪಮಾನ 21°C ದಾಖಲಾಗುವ ಸಾಧ್ಯತೆಯಿದ್ದು, ನಗರದಲ್ಲಿ ತಂಪಾದ ವಾತಾವರಣ ಇರಲಿದೆ.

ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24°C ಮತ್ತು ಕನಿಷ್ಠ 21°C ಇರಲಿದ್ದು, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಮುದ ನೀಡುವ ವಾತಾವರಣ ನೀಡಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !