ಸಾಮಾಗ್ರಿಗಳು
ರವೆ
ಟೊಮ್ಯಾಟೊ
ಶುಂಠಿ
ಒಣಮೆಣಸು
ಜೀರಿಗೆ
ಮೊಸರು
ಬೇಕಿಂಗ್ ಸೋಡಾ
ಗೋಧಿಹಿಟ್ಟು
ಮಾಡುವ ವಿಧಾನ
ಮಿಕ್ಸಿಗೆ ಎರಡು ಕಪ್ ರವೆ ಹಾಕಿ, ಮೇಲೆ ಮುಕ್ಕಾಲು ಕಪ್ ಗೋಧಿಹಿಟ್ಟು ಹಾಕಿ, ಆನಂತರ ಎರಡು ಟೊಮ್ಯಾಟೊ ಹಾಕಿ
ಉಪ್ಪು, ಜೀರಿಗೆ, ಮೊಸರು, ಶುಂಠಿ ಹಾಗೂ ಒಣಮೆಣಸು ಹಾಕಿ. ನೀರು ಹಾಕಿ ರುಬ್ಬಿದ್ರೆ ಹಿಟ್ಟು ರೆಡಿ
ಇನ್ನೇನು ದೋಸೆ ಹೆಂಚಿನ ಮೇಲೆ ಹಾಕಬೇಕು ಎನ್ನುವಾಗ ಬೇಕಿಂಗ್ ಸೋಡಾ ಹಾಕಿ ಮಿಕ್ಸ್ ಮಾಡಿ. ಕಾದ ತವಾ ಮೇಲೆ ಒಂದು ಸೌಟು ಹಿಟ್ಟು ಹಾಕಿ
ಆದರೆ ಇದನ್ನು ಹರಡಬೇಡಿ. ಹಾಗೆಯೇ ದಪ್ಪವಾಗಿಯೇ ಇರಲು ಬಿಡಿ. ಆಗ ಸೆಟ್ ದೋಸೆಯಂತಹ ಸೂಪರ್ ದೋಸೆ ರೆಡಿಯಾಗುತ್ತದೆ. ಇದಕ್ಕೆ ಚಟ್ನಿ ಪುಡಿ ಹಾಕಿ ತುಪ್ಪ ಹಾಕಿ
ಅಥವಾ ಕಾಯಿ ಚಟ್ನಿ ಜೊತೆ ತಿನ್ನಿ



