August 28, 2026
Friday, August 28, 2026
spot_img

ಪ್ಯಾರಿಸ್‌ಗೆ ಗುಡ್‌ಬೈ ಹೇಳೋ ಟೈಮ್ ಬಂತು: ಡಿ.24ಕ್ಕೆ ಬರ್ತಿದೆ ‘ಎಮಿಲಿ ಇನ್ ಪ್ಯಾರಿಸ್’ ಸೀಸನ್ 6

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ಲಾಮರಸ್ ಫ್ಯಾಷನ್, ರೋಮ್ಯಾಂಟಿಕ್ ಟ್ವಿಸ್ಟ್ ಹಾಗೂ ಕಾಂಪ್ಲಿಕೇಟೆಡ್ ರಿಲೇಶನ್‌ಷಿಪ್‌ಗಳ ಮೂಲಕ ಮಿಂಚಿದ್ದ ‘ಎಮಿಲಿ ಇನ್ ಪ್ಯಾರಿಸ್’ ವೆಬ್ ಸರಣಿ ಈಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಪ್ರೇಕ್ಷಕರ ನೆಚ್ಚಿನ ಎಮಿಲಿ ಕೂಪರ್ ಪಾತ್ರದಲ್ಲಿ ಲಿಲಿ ಕಾಲಿನ್ಸ್ ಮತ್ತೊಮ್ಮೆ ಕಮಾಲ್ ಮಾಡಲು ರೆಡಿಯಾಗಿದ್ದು, ಮೇಕರ್ಸ್ ಸೀಸನ್ 6ರ ಅಧಿಕೃತ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.

ನೆಟ್‌ಫ್ಲಿಕ್ಸ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೊದಲ ಲುಕ್ ಚಿತ್ರಗಳನ್ನು ಹಂಚಿಕೊಳ್ಳುತ್ತಾ, “ಇದು ನಿಮಗಾಗಿ! ‘ಎಮಿಲಿ ಇನ್ ಪ್ಯಾರಿಸ್’ ಸೀಸನ್ 6ರ ಮೊದಲ ನೋಟ ಇಲ್ಲಿದೆ. ಡಿಸೆಂಬರ್ 24, 2026 ರಂದು ಸರಣಿ ಬರಲಿದೆ” ಎಂದು ಶೀರ್ಷಿಕೆ ನೀಡಿದೆ. ಹಬ್ಬದ ವಾತಾವರಣದಲ್ಲಿ ಬಿಡುಗಡೆಯಾಗುತ್ತಿರುವ ಈ ಸೀಸನ್, ಅಭಿಮಾನಿಗಳಿಗೆ ಅತ್ಯುತ್ತಮ ರಜಾದಿನದ ಉಡುಗೊರೆಯಾಗಲಿದೆ.

https://www.instagram.com/p/DcgYKFrkYai/?utm_source=ig_web_button_share_sheet

ಬಿಡುಗಡೆಯಾಗಿರುವ ಚಿತ್ರಗಳಲ್ಲಿ ಲಿಲಿ ಕಾಲಿನ್ಸ್ ತಮ್ಮ ಫ್ಯಾಷನ್ ಹಾಗೂ ಉತ್ಸಾಹಭರಿತ ಅಭಿನಯದೊಂದಿಗೆ ಮಿಂಚಿದ್ದಾರೆ. ಎಮಿಲಿ ಮತ್ತು ಗೇಬ್ರಿಯಲ್ ಹೂವಿನ ಮಳಿಗೆಯೊಂದರ ಬಳಿ ಸುಂದರ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವುದು, ಎಮಿಲಿ ಮತ್ತು ಮಿಂಡಿ ಪ್ಯಾರಿಸ್ ಉದ್ಯಾನವನದಲ್ಲಿ ಒಟ್ಟಿಗೆ ಕಾಲ ಕಳೆಯುತ್ತಿರುವ ದೃಶ್ಯಗಳು ಅಭಿಮಾನಿಗಳ ಮನಗೆದ್ದಿವೆ.

ಈ ಅಂತಿಮ ಸೀಸನ್‌ನಲ್ಲಿ ಲಿಲಿ ಕಾಲಿನ್ಸ್ ಅವರೊಂದಿಗೆ ಫಿಲಿಪೈನ್ ಲೆರಾಯ್-ಬ್ಯೂಲಿಯು, ಆಶ್ಲಿ ಪಾರ್ಕ್, ಲೂಕಾಸ್ ಬ್ರಾವೋ, ಲೂಸಿಯನ್ ಲಾವಿಸ್ಕೌಂಟ್, ಮಿನ್ನಿ ಡ್ರೈವರ್ ಹಾಗೂ ಬ್ರಯಾನ್ ಗ್ರೀನ್‌ಬರ್ಗ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಎಮಿಲಿಯ ಉದ್ಯೋಗ, ಆಕೆಯ ಸ್ನೇಹ ಮತ್ತು ಭಾವನಾತ್ಮಕ ಪ್ರೇಮ ಜೀವನ ಹೇಗೆ ಒಂದು ಸುಂದರ ತೀರವನ್ನು ತಲುಪಲಿದೆ ಎಂಬುದನ್ನು ವೀಕ್ಷಿಸಲು ವಿಶ್ವದಾದ್ಯಂತ ಅಭಿಮಾನಿಗಳು ಕಾತರರಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !