August 28, 2026
Friday, August 28, 2026
spot_img

‘ಟಾಕ್ಸಿಕ್’ ದೃಶ್ಯಗಳು ಲೀಕ್: ರಿಲೀಸ್ ಆದ 2ನೇ ದಿನಕ್ಕೆ ಪೈರಸಿ ಕಾಟ ಶುರುವಾಗೋಯ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೀತು ಮೋಹನ್ ದಾಸ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಕೂಡ ಈ ಪೈರಸಿ ಕಾಟದಿಂದ ಹೊರತಾಗಿಲ್ಲ.

ಸಿನಿಮಾ ರಿಲೀಸ್ ಆಗಿ 2 ದಿನ ಆಗಿಲ್ಲ ಅಷ್ಟರಲ್ಲಾಗಲೇ ಚಿತ್ರದ ಹಲವಾರು ದೃಶ್ಯಗಳು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಅನ್ನೋ ಆರೋಪ ಈಗ ಕೇಳಿಬಂದಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಮೊಬೈಲ್‌ನಲ್ಲಿ ತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರೋದು ಈ ಪೈರಸಿಗೆ ಕಾರಣ ಅನ್ನೋ ಮಾತು ಕೇಳಿಬರುತ್ತಿದೆ.

ಮನವಿಗೂ ಕ್ಯಾರೇ ಎನ್ನದ ಪ್ರೇಕ್ಷಕರು

ಚಿತ್ರ ಬಿಡುಗಡೆಗೂ ಮುನ್ನ ನಿರ್ಮಾಪಕರು ಯಾವುದೇ ದೃಶ್ಯಗಳನ್ನು ರೆಕಾರ್ಡ್ ಮಾಡ್ಬೇಡಿ, ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ, ಕಥೆಯ ಬೀಟ್‌ಗಳು ಮತ್ತು ಸ್ಪಾಯ್ಲರ್‌ಗಳನ್ನು ಬಿಟ್ಟುಕೊಡಬೇಡಿ ಎಂದೂ ಹೇಳಿದ್ದರು. ಆದ್ರೆ ಜನ ಇವರ ಮನವಿಗೆ ಕ್ಯಾರೇ ಅನ್ನುತ್ತಿಲ್ಲ. ತಮ್ಮಿಷ್ಟದಂತೆ ಸಿನಿಮಾದ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

ಯಶ್-ಕಿಯಾರಾ ದೃಶ್ಯ ಸೋರಿಕೆ

ಲೀಕ್ ಆಗಿರೋ ವಿಡಿಯೋದಲ್ಲಿ ಯಶ್ ಹಾಗೂ ಕಿಯಾರಾ ಅಭಿನಯದ ಪ್ರಮುಖ ಸನ್ನಿವೇಶಗಳು ಮತ್ತು ದೃಶ್ಯಗಳು ಸೇರಿವೆ ಎಂದು ವರದಿಯಾಗಿದೆ.

ಈಗ ಪೈರಸಿ ಆರೋಪ ಕೇಳಿಬಂದಿರುವುದು ಯಶ್ ಅಭಿಮಾನಿಗಳು ಬೇಸರಗೊಂಡಿದ್ದು, ಸಿನಿಮಾ ದೃಶ್ಯಗಳನ್ನು ರೆಕಾರ್ಡ್ ಮಾಡಿ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸಿನಿಮಾದ ಹಲವು ವರ್ಷಗಳ ಪರಿಶ್ರಮಕ್ಕೆ ಪೈರಸಿಯಿಂದ ಧಕ್ಕೆಯಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಪೈರಸಿ ಆರೋಪದ ಹಿನ್ನೆಲೆಯಲ್ಲಿ ನಿರ್ಮಾಪಕರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !