August 28, 2026
Friday, August 28, 2026
spot_img

Ciplaಗೆ FDA ಶಾಕ್: ಪುಣೆಯ C&F ಘಟಕದ ಔಷಧಿ ಮಾರಾಟ ಪರವಾನಗಿ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಔಷಧಿಗಳ ಗುಣಮಟ್ಟ ಹಾಗೂ ಸುರಕ್ಷತೆ ವಿಚಾರದಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಮಂಡಳಿ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಹೌದು ಮಹಾರಾಷ್ಟ್ರದ ಆಹಾರ ಮತ್ತು ಔಷಧಿ ಮಂಡಳಿ Cipla Pharma & Life Sciences Ltd.ನ ಪುಣೆಯ C&F ಘಟಕದ ಔಷದ ಮಾರಾಟದ ಲೈಸೆನ್ಸ್ ಕ್ಯಾನ್ಸಲ್ ಮಾಡಿದೆ.

ಹಲವಾರು ನಿಯಮಗಳ ಉಲ್ಲಂಘನೆ

ಇದಕ್ಕೆ ಕಾರಣ ಕೂಡ ನೀಡಿರುವ FDA ಮಾತ್ರೆಗಳ ತಯಾರಿಕೆಯಲ್ಲಿ ಹಲವಾರು ನಿಯಮಗಳ ಉಲ್ಲಂಘನೆಯಾಗಿದೆ ಜೊತೆಗೆ. ಮಾತ್ರೆಯ ಪ್ಯಾಕೇಜಿಂಗ್‌ನಲ್ಲಿ ಅನುಮತಿಯಿಲ್ಲದ ‘analgesic and antipyretic’ ಹೇಳಿಕೆ ಬಳಸಿರುವುದು ಪರಿಶೀಲನೆಯಲ್ಲಿ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಸುಮಾರು 11.19 ಲಕ್ಷ ಮೌಲ್ಯದ ಔಷಧವನ್ನು ವಶಪಡಿಸಿಕೊಂಡು, ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸೂಚಿಸಲಾಗಿತ್ತು. ಆದರೆ ಕಂಪನಿ ಹಿಂಪಡೆಯುವ ಆದೇಶವನ್ನು ಸಂಪೂರ್ಣವಾಗಿ ಪಾಲಿಸಿಲ್ಲ ಎಂದು FDA ತಿಳಿಸಿದೆ.

ಇದನ್ನೂ ಓದಿ:

ತುಕಾರಾಂ ಮುಂಡೆ ಖಡಕ್ ವಾರ್ನಿಂಗ್

ಮಹಾರಾಷ್ಟ್ರ FDA ಆಯುಕ್ತ ತುಕಾರಾಂ ಮುಂಡೆ, ಔಷಧಿಗಳ ಮಾರಾಟ, ಸಂಗ್ರಹಣೆ ಮತ್ತು ವಿತರಣೆಯಲ್ಲಿ ನಿಯಮ ಉಲ್ಲಂಘಿಸುವ ಯಾವುದೇ ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇತ್ತ Cipla, FDA ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದೆ. ಈ ಆದೇಶವು ತನ್ನ ಔಷಧಿಗಳ ಸುರಕ್ಷತೆ, ಗುಣಮಟ್ಟ ಅಥವಾ ಪರಿಣಾಮಕಾರಿತ್ವದ ಬಗ್ಗೆ ಯಾವುದೇ ಆರೋಪವನ್ನು ಒಳಗೊಂಡಿಲ್ಲ ಮತ್ತು ರೋಗಿಗಳ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಯನ್ನೂ ಸೂಚಿಸುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಒಟ್ಟಿನಲ್ಲಿ, Reactin Plus ಪ್ರಕರಣದ ಬೆನ್ನಲ್ಲೇ ಪುಣೆಯ C&F ಘಟಕದ ಪರವಾನಗಿ ರದ್ದುಗೊಳಿಸಿರುವ ಮಹಾರಾಷ್ಟ್ರ FDA ಕ್ರಮವು ಔಷಧಗಳ ಸಂಗ್ರಹಣೆ ಮತ್ತು ವಿತರಣೆಯಲ್ಲಿನ ನಿಯಮ ಪಾಲನೆಗೆ ನೀಡುತ್ತಿರುವ ಕಟ್ಟುನಿಟ್ಟಿನ ಮಹತ್ವವನ್ನು ಮತ್ತೊಮ್ಮೆ ತೋರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar