October 15, 2026
Thursday, October 15, 2026
spot_img

ಸೆಪ್ಟೆಂಬರ್‌ನಿಂದ ದುಬಾರಿಯಾಗಲಿದೆ ಹಾಲು: ಲೀಟರ್‌ಗೆ 9 ರೂಪಾಯಿ ಹೆಚ್ಚಾಗುತ್ತಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಬ್ಬದ ಸಂಭ್ರಮಕ್ಕೆ ರೆಡಿಯಾಗುತ್ತಿರುವ ಮುಂಬೈನ ನಿವಾಸಿಗಳಿಗೆ ಈಗ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಹೌದು! ಸೆಪ್ಟೆಂಬರ್ 1 ರಿಂದ ನಗರದಲ್ಲಿ ಟೇಬಲ್ ಹಾಲಿನ ದರ ಲೀಟರ್ ಗೆ 9 ರೂಪಾಯಿ ಹೆಚ್ಚಾಗಲಿದ್ದು, 93 ರೂ.ಗೆ ಸಿಗುತ್ತಿದ್ದ ಹಾಲು ಇನ್ಮುಂದೆ 102 ರೂಪಾಯಿಗೆ ಸಿಗಲಿದೆ.

ಮುಂದಿನ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಆರಂಭವಾಗುತ್ತಿರುವ ಟೈಮ್ ನಲ್ಲಿ ಹಾಲಿನ ದರ ಏರಿಕೆ ಆಗಿರೋದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ. ಹಾಲಿನ ದರ ಏರಿಕೆ ಆಗಿರೋದ್ರಿಂದ ಹಾಲು ಸೇರಿದಂತೆ ಚಹಾ ಕಾಫಿ ಸಿಹಿ ತಿಂಡಿ ಹಾಗೂ ಹಾಲಿನ ಉತ್ಪನ್ನಗಳ ಮೇಲು ಪರೋಕ್ಷವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ:

ಪಶು ಆಹಾರ ಮೇವಿನ ಹೆಚ್ಚಳ ಜಾನುವಾರುಗಳ ಬೆಲೆ ಏರಿಕೆ ಈ ಹಾಲಿನ ದರ ಹೆಚ್ಚಾಗಲು ಕಾರಣ ಎಂದು ನಗರ ಹಾಲು ಉತ್ಪಾದಕರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ, ಸೆಪ್ಟೆಂಬರ್ 1ರಿಂದ ಮುಂಬೈನಲ್ಲಿ ಟೇಬಲ್ ಹಾಲು 102ಕ್ಕೆ ಲಭ್ಯವಾಗಲಿದ್ದು, ಹಬ್ಬದ ಸಂದರ್ಭದಲ್ಲಿ ಈ ದರ ಏರಿಕೆ ಸಾಮಾನ್ಯ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬೀರುವ ನಿರೀಕ್ಷೆಯಿದೆ.

Must Read