August 29, 2026
Saturday, August 29, 2026
spot_img

ಅದದೇ ಪನೀರ್‌ ಬಟರ್‌ ಮಸಾಲಾ ತಿಂದು ಬೋರ್‌ ಆಗಿಲ್ವಾ? ಇಂದು ವಿಭಿನ್ನವಾದ ಗ್ರೀನ್‌ ಕ್ಯಾಶ್ಯೂ ಗ್ರೇವಿ ಟ್ರೈ ಮಾಡಿ

ಸಾಮಾಗ್ರಿಗಳು
ಚಕ್ಕೆ
ಲವಂಗ
ಏಲಕ್ಕಿ
ಬಾದಾಮಿ
ಗೋಡಂಬಿ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಶುಂಠಿ
ಬೆಳ್ಳುಳ್ಳಿ
ಪನೀರ್‌
ಬೆಣ್ಣೆ
ಸೋಂಪು
ಹಸಿಮೆಣಸು
ಕಸೂರಿ ಮೇಥಿ
ಕೊತ್ತಂಬರಿ ಪುಡಿ
ಗರಂ ಮಸಾಲಾ

ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಶುಂಠಿ, ಬೆಳ್ಳುಳ್ಳಿ ಹಾಕಿ ಬಾಡಿಸಿಕೊಳ್ಳಿ
ಆನಂತರ ಇದಕ್ಕೆ ಗೋಡಂಬಿ, ಬಾದಾಮಿ ಹಾಕಿ ಮಿಕ್ಸ್‌ ಮಾಡಿ. ಜೊತೆಗೆ ಈರುಳ್ಳಿ ಹಾಗೂ ಹಸಿಮೆಣಸು ಹಾಕಿ ಬಾಡಿಸಿ
ನಂತರ ತಣ್ಣಗಾಗಲು ಬಿಟ್ಟು ಮಿಕ್ಸಿಗೆ ಈ ಎಲ್ಲ ಪದಾರ್ಥ ಹಾಕಿ, ಜೊತೆಗೆ ಕೊತ್ತಂಬರಿ ಸೊಪ್ಪು ಹಾಗೂ ಮೊಸರು ಹಾಕಿ ರುಬ್ಬಿ
ನಂತರ ಪ್ಯಾನ್‌ಗೆ ಬೆಣ್ಣೆ ಜೀರಿಗೆ, ಸೋಂಪು ಹಾಕಿ ನಂತರ ಮಿಕ್ಸಿಯ ಮಸಾಲೆಯನ್ನು ಹಾಕಿ, ನೀರು ಹಾಕಿ, ಉಪ್ಪು ಹಾಕಿ
ಆಮೇಲೆ ಸಾಂಬಾರ್‌ ಪುಡಿ, ಗರಂ ಮಸಾಲಾ ಹಾಗೂ ಅರಿಶಿಣ ಪುಡಿ, ಕಸೂರಿ ಮೇಥಿ ಹಾಕಿ. ಮಸಾಲೆ ಕುದಿಯುವ ಹಂತಕ್ಕೆ ಬಂದಮೇಲೆ ಕನ್ಸಿಸ್ಟೆನ್ಸಿ ನೋಡಿಕೊಂಡು ಪನೀರ್‌ ಸೇರಿಸಿ
ನಂತರ ಪಾತ್ರೆಯನ್ನು ಮುಚ್ಚಿ ಐದು ನಿಮಿಷ ಬೇಯಿಸಿದ್ರೆ ಗ್ರೇವಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !