August 29, 2026
Saturday, August 29, 2026
spot_img

43.81 ಲಕ್ಷ ಮತದಾರರಿಗೆ ನೋಟಿಸ್: ದಾಖಲೆ ಪರಿಶೀಲನೆಗೆ ಚುನಾವಣಾ ಆಯೋಗದಿಂದ ಮಹತ್ವದ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದ್ಯ ಈಗ ರಾಜ್ಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿರುವ ವಿಷಯ ಅಂದ್ರೆ ಅದು SIR. ಈ ಬಗ್ಗೆ ಹಲವರಿಗೆ ಹಲವು ನಮೂನೆಯ ಕನ್ಫ್ಯೂಷನ್ ಇದೆ. ಕೆಲವರ ಹೆಸರು ಮತದಾರರ ಪಟ್ಟಿಯಲ್ಲಿ ಮ್ಯಾಚ್ ಆಗ್ತಿಲ್ಲ ಇನ್ನು ಕೆಲವರದ್ದು ಮ್ಯಾಪಿಂಗ್ ಸಿಕ್ತಿಲ್ಲ ಹೀಗಾಗಿ ಈ ಎಲ್ಲಾ ಸಮಸ್ಯೆ ಇರುವ 43.81 ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಈಗ ಶುರುವಾಗಿದೆ.

ನೋಟಿಸ್ ಸಿಕ್ಕಿದ್ರೆ ಏನು ಮಾಡಬೇಕು

ನೋಟಿಸ್ ಗಳನ್ನ ಮತದಾರರ ಮನೆಗೆ ಬೂತ್ ಮಟ್ಟದ ಅಧಿಕಾರಿಗಳು ತಲುಪಿಸುತ್ತಾರೆ. ನೋಟಿಸ್ ಪಡೆದವರು ಅದಕ್ಕೆ ಬೇಕಾಗಿರುವ ದಾಖಲೆಗಳೊಂದಿಗೆ ಚುನಾವಣೆ ನೋಂದಣಿ ಅಧಿಕಾರಿ ಅಥವಾ ಸಹಾಯಕ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿ ಪರಿಶೀಲಿಸಿಕೊಳ್ಳಬೇಕು.

ಒಂದು ವೇಳೆ ನೀವು ಕೊಟ್ಟಿರುವ ವಿವರಗಳು ಮ್ಯಾಚ್ ಆಗದಿದ್ದರೆ ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಕೈಬಿಡುವ ಸಾಧ್ಯತೆ ಹೆಚ್ಚು. ಹೀಗಾಗಿ ಇದನ್ನ ಸರಿ ಮಾಡೋಕೆ ಮತ್ತೊಮ್ಮೆ ಫಾರ್ಮ್ 6 ರ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ:

ಸೆಪ್ಟೆಂಬರ್ 23ರವರೆಗೆ ನಿಮಗೆ ಟೈಮ್ ಇದೆ

SIR ಅಡಿಯಲ್ಲಿ ಆಗಸ್ಟ್ 24 ರಿಂದ ಸೆಪ್ಟೆಂಬರ್ 23ರ ತನಕ ಮತದಾರರ ಹಕ್ಕು ಆಕ್ಷೇಪಣೆಗಳನ್ನು ಸಲ್ಲಿಸೋಕೆ ಅವಕಾಶ ಇದ್ದು, ಕೊನೆಯ ಮತದಾರರ ಪಟ್ಟಿ ಅಕ್ಟೋಬರ್ 27ಕ್ಕೆ ಬಿಡುಗಡೆಯಾಗಲಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ನೋಟಿಸ್

ಬೆಂಗಳೂರು ನಗರ ಜಿಲ್ಲೆಯಲ್ಲಿ 9,45,798 ನೋಟಿಸ್ ನೀಡಲಾಗುತ್ತಿದ್ದು. ದಾವಣಗೆರೆಯಲ್ಲಿ 7, 085 ನೋಟಿಸ್ ಗಳನ್ನು ಅಂದ್ರೆ ಅತಿ ಕಡಿಮೆ ನೋಟಿಸ್ ಗಳನ್ನು ನೀಡಲಾಗುತ್ತಿದೆ.

ಇನ್ನು ಹೊಸದಾಗಿ ನೋಂದಾಯಿಸಿಕೊಳ್ಳುವರಿಗೆ ಫಾರ್ಮ 6, ಮತದಾರ ಪಟ್ಟಿಯಲ್ಲಿ ಹೆಸರು ವಿಳಾಸ ತಿದ್ದುಪಡಿ ಮಾಡೋಕೆ ಫಾರ್ಮ್ 8, ಹಾಗೂ ಹೆಸರು ಅಳಿಸಿ ಹಾಕೋಕೆ ಫಾರ್ಮ್ 7, ಸಲ್ಲಿಸೋಕೆ ಅವಕಾಶ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !