October 14, 2026
Wednesday, October 14, 2026
spot_img

ಸಿಜೆಪಿ ನಾಯಕರನ್ನು ಬಂಧನ ಹೇಡಿತನದ ಕೃತ್ಯ, ಜಂತರ್‌ ಮಂತರ್‌ ವಾಪಸ್‌ ಪಡೆಯುತ್ತೇವೆ : ರಾಗಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ತ್ರಿವರ್ಣ ಧ್ವಜ ಹಾರಿಸಿದ ಕಾಕ್ರೋಚ್‌ ಜನತಾ ಪಾರ್ಟಿಯ ನಾಯಕರನ್ನು ಜೈಲಿಗೆ ಕಳುಹಿಸಿರುವುದು ಹೇಡಿತನದ ಕೃತ್ಯ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಸಿಜೆಪಿ ನಾಯಕರಾದ ಸೌರವ್‌ ದಾಸ್‌ ಮತ್ತು ಅಶುತೋಷ್‌ ರಂಕಾ ಅವರ ಬಂಧನದ ಬಗ್ಗೆ ಮಾತನಾಡಿ, ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಗೆ ಯಾಕೆ ಅವಕಾಶ ಇಲ್ಲ. ನಾವು ಅದನ್ನು ಮರಳಿ ಪಡೆಯುತ್ತೇವೆ. ಅಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ತ್ರಿವರ್ಣ ಧ್ವಜ ಹಾರಿಸಿದ್ದರಲ್ಲಿ ತಪ್ಪೇನಿದೆ? ಈ ಕಾರಣಕ್ಕೆ ಯುವಕರನ್ನು ಜೈಲಿಗೆ ಅಟ್ಟುವುದು ಹೇಡಿತನದ ಕೃತ್ಯ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು ಮತ್ತು ಇಂಡಿಯಾ ಬ್ಲಾಕ್‌—ಬೇರೆ ಬೇರೆ ಬ್ಯಾನರ್‌ಗಳಿದ್ದರೂ ಎಲ್ಲರೂ ಒಂದೇ ಕಾರಣಕ್ಕಾಗಿ ನಿಂತಿದ್ದಾರೆ. ನಾಗರಿಕರು ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ. ಜಂತರ್ ಮಂತರ್ ಭಾರತೀಯರಿಗೆಲ್ಲರಿಗೂ ಸೇರಿದ್ದು, ಅದನ್ನು ಮರಳಿ ಪಡೆಯುತ್ತೇವೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.

ಒಂದು ವರ್ಷದವರೆಗೆ ಯಾವುದೇ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದಿಲ್ಲ ಎನ್ನುವ ಬಾಂಡ್‌ಗೆ ಸಹಿ ಹಾಕಿದ ನಂತರವೂ ನಿಷೇಧಿತ ಜಂತರ್‌ ಮಂತರ್‌ ಗೋಡೆ ಹಾರಿ ಪ್ರತಿಭಟನೆ ನಡೆಸಲಾಗಿತ್ತು. ಕಾಕ್ರೋಚ್‌ ಜನತಾ ಪಾರ್ಟಿಯ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ಇಬ್ಬರನ್ನೂ ಮಂದಿರ ಮಾರ್ಗದಲ್ಲಿರುವ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ಬಳಿಕ ನ್ಯಾಯಾಲಯವು ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

Must Read