August 30, 2026
Sunday, August 30, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 74 | ಇಡೀ ದಿನ ಎನರ್ಜಿ ಕೊಡುವ ಬೆಸ್ಟ್ ತಿಂಡಿ ಈ ರಾಗಿ ಉಪ್ಪಿಟ್ಟು: ಒಮ್ಮೆ ಟ್ರೈ ಮಾಡಿ

ಬೆಳಗ್ಗೆ ತಿನ್ನೋ ತಿಂಡಿ ಹೇಗಿರಬೇಕು ಅಂದ್ರೆ ಇಡೀ ದಿನ ಎನರ್ಜಿ ನೀಡೋದ್ರ ಜತೆಗೆ ಹೊಟ್ಟೆ ತುಂಬಿಸಿ ಆರೋಗ್ಯವನ್ನು ಚನ್ನಾಗಿಡುವಂತಹ ತಿಂಡಿ ತಿನ್ಬೇಕು. ಇಷ್ಟೆಲ್ಲಾ ಗುಣ ಇರುವ ಆ ತಿಂಡಿ ಯಾವ್ದು ಅಂತೀರಾ? ಅದೇ ರಾಗಿ ಅದ್ರಿಂದ ಮಾಡೋ ಉಪ್ಪಿಟ್ಟು. ಬನ್ನಿ ಮಾಡೋದು ಹೇಗೆ ಅಂತ ನೋಡೋಣ……

ಏನೆಲ್ಲಾ ಬೇಕು

ರಾಗಿ ಉಪ್ಪಿಟ್ಟು ರೆಡಿ ಮಾಡೋಕೆ ಒಂದು ಕಪ್ ರಾಗಿ ಹಿಟ್ಟು, ಒಂದು ಈರುಳ್ಳಿ, 2-3 ಹಸಿಮೆಣಸಿನಕಾಯಿ, ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಸ್ವಲ್ಪ ಕರಿಬೇವು, 2.5 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಎರಡು ಚಮಚ ಎಣ್ಣೆ ಬೇಕಾಗುತ್ತದೆ.

ಮಾಡೋದು ಹೇಗೆ?

ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಗೂ ಜೀರಿಗೆ ಹಾಕಿ ಸಿಡಿದ ಬಳಿಕ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ.

ಈಗ ಬಾಣಲೆಗೆ 2.5 ಕಪ್ ನೀರು ಹಾಗೂ ಬೇಕಾಗುವಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಈಗ ಉರಿಯನ್ನು ಸಣ್ಣಗೆ ಮಾಡಿ, ರಾಗಿ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ನಿರಂತರವಾಗಿ ಕೈಯಾಡಿಸಬೇಕು. ಹೀಗೆ ಮಾಡುವುದರಿಂದ ರಾಗಿ ಹಿಟ್ಟು ಗಂಟಾಗದೆ ಮಿಶ್ರಣವಾಗುತ್ತದೆ.

ರಾಗಿ ಹಿಟ್ಟು ನೀರಿನೊಂದಿಗೆ ಚೆನ್ನಾಗಿ ಬೆರೆತ ಬಳಿಕ ಪಾತ್ರೆಯ ಮುಚ್ಚಳವನ್ನು ಮುಚ್ಚಿ, ಕಡಿಮೆ ಉರಿಯಲ್ಲಿ ಸುಮಾರು 2 ನಿಮಿಷ ಬೇಯಿಸಬೇಕು. ನಂತರ ಮುಚ್ಚಳ ತೆಗೆದು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿದರೆ ಬಿಸಿಬಿಸಿಯಾದ ರಾಗಿ ಉಪ್ಪಿಟ್ಟು ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !