August 30, 2026
Sunday, August 30, 2026
spot_img

ಅಬ್ಬಬ್ಬಾ…. ಮೈಸೂರು ದಸರಾ ಗಜಪಡೆಯ ತೂಕ ಕೇಳಿದ್ರಾ? ಟಾಪ್ ನಲ್ಲಿರೋದು ಇವನೇ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿಯ ಸಿದ್ಧತೆ ಶುರುವಾಗಿದ್ದು ಮೊದಲ ಹಂತದಲ್ಲಿ ಆಗಮಿಸಿದ ಗಜಪಡೆಗಳು ಅರಮನೆಯ ಆವರಣ ತಲುಪಿ ತಾಲೀಮು ಶುರುವಿಟ್ಟುಕೊಂಡಿವೆ. ಇದರ ಬೆನ್ನಲ್ಲೇ ಆನೆಗಳ ತೂಕ ಪರೀಕ್ಷೆ ಕಾರ್ಯ ನಡೆಸಲಾಗಿದ್ದು ಈ ಗಜಪಡೆಗಳ ತೂಕ ಕೇಳಿದ್ರೆ ನೀವು ಶಾಕ್ ಆಗೋದಂತೂ ಗ್ಯಾರಂಟಿ….

ಯಾವ ಆನೆ ಎಷ್ಟು ಕೆ.ಜಿ?

ತೂಕದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಲ್ಲಿರೋದು ಶ್ರೀಕಂಠ- 5,790 ಕೆ.ಜಿ.
ಏಕಲವ್ಯ- 5,600 ಕೆ.ಜಿ
ಧನಂಜಯ- 5,530 ಕೆ.ಜಿ.
ಮಹೇಂದ್ರ- 5,490 ಕೆ.ಜಿ.
ಪ್ರಶಾಂತ- 5,205 ಕೆ.ಜಿ.
ಗೋಪಿ- 5,170 ಕೆ.ಜಿ

ಈ 6 ಗಂಡಾನೆಗಳು 5 ಟನ್‌ಗಿಂತ ಹೆಚ್ಚಿನ ತೂಕ ಹೊಂದಿವೆ. ಇನ್ನು ಉಳಿದಂತೆ ಶ್ರೀರಾಮ ಆನೆ 4,820 ಕೆ.ಜಿ. ತೂಕ ಹೊಂದಿದ್ದಾನೆ.

ಹೆಣ್ಣಾನೆಗಳಲ್ಲಿ ಟಾಪ್ ನಲ್ಲಿರೋದು ಯಾರು ಗೊತ್ತಾ?

ಗಜಪಡೆಯ ಹೆಣ್ಣಾನೆಗಳ ಪೈಕಿ ಲಕ್ಷ್ಮೀ 3,990 ಕೆ.ಜಿ. ತೂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕಾವೇರಿ- 3,075 ಕೆ.ಜಿ ತೂಕದೊಂದಿಗೆ ಅತೀ ಕಡಿಮೆ ತೂಗುವ ಆನೆಯಾಗಿ ಎರಡನೇ ಸ್ಥಾನದಲ್ಲಿದೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯ ಏನು ಅಂದ್ರೆ ಈ ಕಾವೇರಿ ಆನೆಗೂ ಶ್ರೀಕಂಠನಿಗೂ ಬರೋಬ್ಬರಿ 2,715 ಕೆ.ಜಿ. ಅಂತರವಿದೆ.

9 ಆನೆಗಳ ಟೋಟಲ್ ತೂಕ ಎಷ್ಟು ಗೊತ್ತಾ?

ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳ ಒಟ್ಟು ತೂಕ ಬರೋಬ್ಬರಿ 42.67 ಟನ್. ಪ್ರತಿ ಆನೆಯ ಸರಾಸರಿ ತೂಕ ಸುಮಾರು 4,741 ಕೆ.ಜಿ. ಆಗಿದೆ. ಹೀಗಾಗಿ ಈ ಬಾರಿಯ ದಸರಾ ಗಜಪಡೆಯ ತೂಕವೇ 40 ಟನ್‌ ಗಡಿ ದಾಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar