ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನ ಕ್ಯೂಟ್ ಬೆಡಗಿ ಸಮಂತಾ ರುತ್ ಪ್ರಭು ಸದ್ಯ ಸಿನಿಮಾಗಳಿಂದ ಗ್ಯಾಪ್ ತಗೊಂಡು, ತಮ್ಮ ಲೈಫ್‌ನ ಹೊಸ ಚಾಪ್ಟರ್ ಅಂದ್ರೆ ಪ್ರೆಗ್ನೆನ್ಸಿ ಲೈಫ್ ಅನ್ನು ಎಂಜಾಯ್ ಮಾಡ್ತಿದ್ದಾರೆ. ಪ್ರತಿಯೊಂದು ಗಳಿಗೆಯನ್ನು ಖುಷಿಯಿಂದ ಕಳೆಯುತ್ತಿರೋ ಸ್ಯಾಮ್, ತಮ್ಮ ಪ್ರೆಗ್ನೆನ್ಸಿ ಜರ್ನಿಯ ಒಂದಿಷ್ಟು ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಫ್ಯಾನ್ಸ್‌ಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ.

ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಡಂಪ್ ಮಾಡಿರೋ ಸಮಂತಾ, ತಮ್ಮ ಬೇಬಿ ಬಂಪ್ ಪ್ರದರ್ಶಿಸುತ್ತಾ ಮುಖದಲ್ಲಿನ ಪ್ರೆಗ್ನೆನ್ಸಿ ಗ್ಲೋ ಜೊತೆ ಮಿಂಚಿದ್ದಾರೆ. ಮಿರರ್ ಸೆಲ್ಫಿ, ಫ್ಲೈಟ್‌ನಲ್ಲಿ ಕೂತು ತಗೊಂಡ ಟಾಪ್ ಆಂಗಲ್ ಫೋಟೋಗಳಲ್ಲಿ ಸಮಂತಾ ನಗು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಫೋಟೋಗಳಿಗೆ ಸಮಂತಾ ಯಾವುದೇ ಉದ್ದದ ಕ್ಯಾಪ್ಷನ್ ಬರೆಯದೇ, ಬರೀ ಎರಡು ಹಾರ್ಟ್ ಎಮೋಜಿ ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ.

https://www.instagram.com/p/DcqBLu2Dizb/?utm_source=ig_web_button_share_sheet
ಮಗುವಿನ ಹೆಸರು ಏನಿಡೋದು?
ಇತ್ತೀಚೆಗೆ ಸಮಂತಾ ‘ಆಸ್ಕ್ ಮಿ ಎನಿಥಿಂಗ್’ ಸೆಷನ್‌ನಲ್ಲಿ ‘ಮಗುಗೆ ಏನ್ ಹೆಸರಿಡಲಿ, ನೀವೇ ಸೂಕ್ತವಾದ ಹೆಸರು ಸಜೆಸ್ಟ್ ಮಾಡಿ’ ಅಂತ ಫ್ಯಾನ್ಸ್ ಹತ್ತಿರ ಕೇಳಿದ್ರು. ಅದಕ್ಕೆ ಒಬ್ಬ ಅಭಿಮಾನಿ ‘ಹೆಣ್ಣು ಮಗು ಆದ್ರೆ ‘ಸಮೈರಾ’, ಗಂಡು ಮಗು ಆದ್ರೆ ‘ಸಾಮ್ರಾಜ್’ ಅಂತ ಇಡಿ. ಸಮಂತಾ ಮತ್ತೆ ರಾಜ್ ಹೆಸರುಗಳ ಪರ್ಫೆಕ್ಟ್ ಮಿಕ್ಸ್ ಇದು!’ ಅಂತ ಕಾಮೆಂಟ್ ಮಾಡಿದ್ರು.

ಇದಕ್ಕೆ ರಿಪ್ಲೈ ಕೊಟ್ಟ ನಟಿ ಸಮಂತಾ “ಸಾಮ್ರಾಜ್ ಅಂತಾನಾ? ಅಬ್ಬಾ.. ನಮ್ ಹೆಸರೇ ನಾವಿಟ್ಟುಕೊಂಡ್ರೆ ಸ್ವಲ್ಪ ಅಹಂಕಾರ ಅನ್ಸಲ್ವಾ?” ಅಂತ ತಮಾಷೆಯಾಗಿ ರಿಪ್ಲೈ ಮಾಡಿದ್ದಾರೆ.
ಸಮಂತಾ ಅವರ ಈ ಕ್ಯೂಟ್ ಅವತಾರ ನೋಡಿದ ಫ್ಯಾನ್ಸ್ ಅಂತೂ, ‘ನಮ್ಮ ಪುಟಾಣಿ ದಿನದಿಂದ ದಿನಕ್ಕೆ ಚೆನ್ನಾಗಿ ಬೆಳಿತಿದೆ’, ‘ಎಷ್ಟು ಮುದ್ದಾಗಿದ್ದೀರಾ ಮೇಡಂ’, ‘ವರ್ಲ್ಡ್ ಮೋಸ್ಟ್ ಬ್ಯೂಟಿಫುಲ್ ಮಮ್ಮಿ-ಟು-ಬೀ’ ಅಂತ ಕಾಮೆಂಟ್‌ಗಳ ಮಳೆಯನ್ನೇ ಹರಿಸ್ತಿದ್ದಾರೆ.



