August 31, 2026
Monday, August 31, 2026
spot_img

KGFಗೂ ಮುಂಚೆನೇ ಯಶ್ ಹೀರೋ ಕಣ್ರೋ! ಟ್ರೋಲರ್ಸ್‌ಗೆ ಕೌಂಟರ್ ಕೊಟ್ಟ ರಾಕಿ ಭಾಯ್ ತಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಹುಕಾರ್ತಿ ಅಲ್ಲದಿದ್ದರೂ, ಮಗನ ವಿಷಯಕ್ಕೆ ಬಂದ್ರೆ ಯಾವ ಅಮ್ಮನೂ ಸುಮ್ನೆ ಇರಲ್ಲ. ಈಗ ‘ರಾಕಿ ಭಾಯ್’ ಯಶ್ ಅಮ್ಮ ಪುಷ್ಪಾ ಅಮ್ಮ ಕೂಡ ಅದನ್ನೇ ಮಾಡಿದ್ದಾರೆ. ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಸದ್ದು ಮಾಡ್ತಿರೋ ಈ ಟೈಮ್‌ನಲ್ಲಿ, ಹಳೇ ವಿವಾದವೊಂದು ಮತ್ತೆ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಅದೇನ್ ಕಥೆ ಅಂದ್ರೆ, 2023ರಲ್ಲಿ ತೆಲುಗಿನ ಪ್ರೊಡ್ಯೂಸರ್ ಆಲ್ಲು ಅರವಿಂದ್ “KGF ಬರೋಕೂ ಮುಂಚೆ ಯಶ್ ಯಾರಾಗಿದ್ದ?” ಅಂತ ಒಂದು ಮಾತು ಹೇಳಿದ್ರು. ಆ ಮಾತು ಅಂದು ಯಶ್ ಫ್ಯಾನ್ಸ್‌ಗೆ ಸಖತ್ ಕೋಪ ತಂದಿತ್ತು. ಈಗ ‘ಟಾಕ್ಸಿಕ್’ ಸದ್ದು ಜೋರಾಗುತ್ತಿದ್ದಂತೆ ಈ ಹಳೆ ವಿಷ್ಯ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದನ್ನ ನೋಡಿದ್ಮೇಲೂ ಯಶ್ ತಾಯಿ ಸುಮ್ನೆ ಇರೋಕೆ ಸಾಧ್ಯನಾ?

ಇತ್ತೀಚೆಗೆ ನಡೆದ ಪ್ರೆಸ್ ಮೀಟ್‌ನಲ್ಲಿ ಹೆಸರು ಹೇಳದೆ ಆಲ್ಲು ಅರವಿಂದ್‌ಗೆ ಖಡಕ್ ರಿಯಾಕ್ಷನ್ ಕೊಟ್ಟಿರೋ ಪುಷ್ಪಾ ಅಮ್ಮ, “KGF ಬರೋಕೂ ಮುಂಚೆನೇ ನಮ್ಮ ಯಶ್ ಬ್ಯಾಕ್ ಟು ಬ್ಯಾಕ್ 5 ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ. ಅವನು ಏಕಾಏಕಿ ಬಂದವನಲ್ಲ, ವರುಷಗಳ ಕಾಲ ಕಷ್ಟಪಟ್ಟು ತನ್ನದೇ ಆದ ಗುರುತು ಮಾಡಿಕೊಂಡಿದ್ದಾನೆ” ಅಂತ ನೇರವಾಗಿಯೇ ಮಾತನಾಡಿದ್ದಾರೆ.

ಮಗನ ಬೆನ್ನಿಗೆ ನಿಂತು ಸಪೋರ್ಟ್ ಮಾಡಿರೋ ಅವರು, “ಯಶ್ ಸಾಮಾನ್ಯ ವ್ಯಕ್ತಿ ಅಂತೀರಾ, ಹಾಗಾದ್ರೆ ಅವನನ್ನು ನೋಡಿ ಯಾಕೆ ಹೆದರುತ್ತೀರಾ? ಕೆಜಿಎಫ್‌ಗಿಂತ ಮುಂಚೆ ಅವನು ಏನು ಅಂತ ಕೇಳೋ ಅಗತ್ಯವೇ ಇಲ್ಲ. ಅವನು ದೊಡ್ಡ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವನಲ್ಲ. ಒಬ್ಬ ಬಸ್ ಡ್ರೈವರ್ ಮಗನಾಗಿ ಸ್ವಂತ ಶ್ರಮದಿಂದ ಈ ಎತ್ತರಕ್ಕೆ ಬೆಳೆದಿದ್ದಾನೆ. ತಾಯಿಯಾಗಿ ನನಗವನ ಬಗ್ಗೆ ತುಂಬಾನೇ ಹೆಮ್ಮೆ ಇದೆ” ಅಂತ ಖಡಕ್ ಆಗಿ ಟಾಂಗ್ ಕೊಟ್ಟಿದ್ದಾರೆ.

ಯಶ್ ಯಶಸ್ಸು ಒಂದೇ ರಾತ್ರಿಯಲ್ಲಿ ಬಂದಿದ್ದಲ್ಲ, ವರ್ಷಗಟ್ಟಲೆ ಕನ್ನಡ ಚಿತ್ರರಂಗದಲ್ಲಿ ಬೆವರು ಹರಿಸಿ ಸಂಪಾದಿಸಿದ್ದು ಅಂತ ಅಮ್ಮ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ, ಮಗನ ಖ್ಯಾತಿಗೆ ಮಸಿ ಹಾಕೋಕೆ ಬಂದವರಿಗೆ ತಾಯಿ ಕೊಟ್ಟ ಈ ಕೌಂಟರ್ ಈಗ ಎಲ್ಲೆಡೆ ಸಖತ್ ವೈರಲ್ ಆಗಿ ಸೌಂಡ್ ಮಾಡ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !