August 31, 2026
Monday, August 31, 2026
spot_img

ವೀಕೆಂಡ್ ಪ್ಲಾನ್ ಫಿಕ್ಸ್: ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗ್ತಿರೋ ಈ 6 ಸೌತ್ ಸಿನಿಮಾಗಳನ್ನ ಮಿಸ್ಸೇ ಮಾಡ್ಕೋಬೇಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ರೆಂಡ್ಸ್, ಫ್ಯಾಮಿಲಿ ಜೊತೆ ವೀಕೆಂಡ್‌ನಲ್ಲಿ ಥಿಯೇಟರ್‌ಗೆ ಹೋಗಿ ಪಾಪ್‌ಕಾರ್ನ್ ತಿಂತಾ ಸಿನಿಮಾ ನೋಡೋ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ಈ ಸೆಪ್ಟೆಂಬರ್ ತಿಂಗಳು ನಿಮಗೆ ಫುಲ್ ಎಂಟರ್‌ಟೈನ್‌ಮೆಂಟ್ ಗ್ಯಾರಂಟಿ. ಆಕ್ಷನ್, ಹಾರರ್, ಥ್ರಿಲ್ಲರ್ ಅಂತ ಒಂದಕ್ಕಿಂತ ಒಂದು ಸೂಪರ್ ಆಗಿರೋ ಸೌತ್ ಇಂಡಿಯನ್ ಸಿನಿಮಾಗಳು ಬೆಳ್ಳಿ ಪರದೆಯ ಮೇಲೆ ಹಂಗಾಮ ಎಬ್ಬಿಸೋಕೆ ರೆಡಿಯಾಗಿವೆ. ಯಾವ್ಯಾವ ಸಿನಿಮಾ ಯಾವ ಕಥೆ ಹೇಳ್ತಾವೆ? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್:

ದಿ ಪ್ಯಾರಡೈಸ್:

ತನ್ನ ಜನರಿಗೆ, ತನ್ನ ಮಣ್ಣಿಗೆ ಅನ್ಯಾಯ ಆದಾಗ ತೊಡೆ ತಟ್ಟಿ ನಿಲ್ಲೋ ಜಡಾಲ್ ಅನ್ನೋ ಸಾಧಾರಣ ವ್ಯಕ್ತಿಯ ಕಥೆ. ಊರವರನ್ನ ಪೀಡಿಸೋ ರೌಡಿಗಳ ವಿರುದ್ಧ ನಿಂತು, ಮಾಸ್ ಅವತಾರದಲ್ಲಿ ಹೋರಾಡೋ ಈ ಸಿನಿಮಾದಲ್ಲಿ ದೊಡ್ದ ಮಟ್ಟದ ಆಕ್ಷನ್ ಅಂಡ್ ಮಾಸ್ ಡ್ರಾಮಾ ಕಾದಿದೆ.

ಮಂಡಾಡಿ:

ತಮಿಳುನಾಡಿನ ಕಾವಲ್ ತೀರದಲ್ಲಿ ನಡೆಯೋ ಸಾಂಪ್ರದಾಯಿಕ ದೋಣಿ ಸ್ಪರ್ಧೆಯ ಸುತ್ತ ಈ ಕಥೆ ತಿರುಗುತ್ತೆ. ಒಬ್ಬ ಅನುಭವಿ ಕ್ಯಾಪ್ಟನ್ ತನ್ನ ಆರು ಜನರ ಟೀಮ್ ಕಟ್ಟಿಕೊಂಡು, ಬದುಕಿನ ಉಳಿವಿಗಾಗಿ ಮತ್ತು ಗೆಲುವಿಗಾಗಿ ಸಮುದ್ರದ ಅಲೆಗಳ ಜೊತೆ ಹೆಣೆದಾಡೋ ಇಂಟರೆಸ್ಟಿಂಗ್ ಎಮೋಷನಲ್ ಜರ್ನಿ ಇದು.

ಮೀಸಯ ಮುರುಕ್ಕು 2:

ಹಿಪ್‌ಹಾಪ್ ತಮಿಝಾ ಆದಿ ಅವರ ಮ್ಯೂಸಿಕ್ ಜರ್ನಿಯ ಮುಂದುವರಿದ ಭಾಗ. ಅವರ ಇಂಡಿಪೆಂಡೆಂಟ್ ಮ್ಯೂಸಿಕ್ ಜರ್ನಿ, ಪರ್ಸನಲ್ ಲೈಫ್ ಜೊತೆಗೆ 1980ರ ಸುವರ್ಣ ಯುಗದ ಮ್ಯೂಸಿಕ್ ಹಿಸ್ಟರಿಯನ್ನು ಈ ಸಿನಿಮಾದಲ್ಲಿ ಸಕತ್ ಕಲರ್‌ಫುಲ್ ಆಗಿ ತೋರಿಸಿದ್ದಾರೆ.

ಡೊರೊತಿ:

ರಫ್ ಅಂಡ್ ಟಫ್ ಲುಕ್‌ನಲ್ಲಿ ಬರ್ತಿರೋ ಗ್ರಾಮೀಣ ಹಿನ್ನೆಲೆಯ ಥ್ರಿಲ್ಲರ್ ಇದು. ಇಬ್ಬರ ಜೀವನ ಡೊರೊತಿ ಅನ್ನೋ ಹೆಣ್ಣುಮಗಳ ಸುತ್ತ ನಡೆಯುವ ಸಸ್ಪೆನ್ಸ್ ಕಥೆ. ಮೇಕರ್ಸ್ ಸಿನಿಮಾ ಬಗ್ಗೆ ಜಾಸ್ತಿ ವಿಷಯ ಬಿಟ್ಟುಕೊಟ್ಟಿಲ್ಲ, ಆದ್ರೆ ಟೀಸರ್ ನೋಡಿದ್ರೆ ಕಥೆ ಫುಲ್ ಇಂಟರೆಸ್ಟಿಂಗ್ ಆಗಿದೆ.

ಡೆಮೋಂಟೆ ಕಾಲೋನಿ 3 – ದಿ ಎಂಡ್ ಈಸ್ ಟೂ ಫಾರ್:

ಹಾರರ್ ಪ್ರಿಯರಿಗೆ ಭರ್ಜರಿ ಹಬ್ಬ. ಮೊದಲ ಎರಡು ಪಾರ್ಟ್ ಸೂಪರ್ ಹಿಟ್ ಆದ್ಮೇಲೆ, ಈಗ ಮೂರನೇ ಭಾಗದಲ್ಲಿ ಮತ್ತಷ್ಟು ಭಯಾನಕ ರಹಸ್ಯಗಳನ್ನು ಬಿಚ್ಚಿಡಲು ನಿಮ್ಮ ಮುಂದೆ ಬರ್ತಿದೆ.

ಸರ್ದಾರ್ 2:

ಕಾರ್ತಿ ಅಭಿನಯದ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ಮತ್ತೆ ರಿಟರ್ನ್ ಆಗ್ತಿದೆ. ಕಾರ್ತಿ ಅಪ್ಪ-ಮಗನ ಡಬಲ್ ರೋಲ್‌ನಲ್ಲಿ ಅಬ್ಬರಿಸಿದ್ರೆ, ಅವರಿಗೆ ವಿಲನ್ ಆಗಿ ‘ಬ್ಲಾಕ್ ಡ್ಯಾಗರ್’ ಪಾತ್ರದಲ್ಲಿ ಎಸ್.ಜೆ. ಸೂರ್ಯ ಪವರ್‌ಫುಲ್ ಆಗಿ ಅಭಿನಯಿಸಿದ್ದಾರೆ.

ಒಟ್ಟಿನಲ್ಲಿ ಈ ಸೆಪ್ಟೆಂಬರ್‌ ತಿಂಗಳು ಪೂರ್ತಿ ನಿಮಗಂತೂ ಬೋರ್ ಹೊಡೆಯಲ್ಲ. ಕಂಟೆಂಟ್ ಇರೋ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ಪಾಪ್‌ಕಾರ್ನ್ ಹಿಡ್ಕೊಂಡು ಥಿಯೇಟರ್‌ಗೆ ಹೋಗೋಕೆ ರೆಡಿಯಾಗಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !