August 31, 2026
Monday, August 31, 2026
spot_img

ಸ್ವೀಟ್ ಕ್ರೇವಿಂಗ್ಸ್‌ಗೆ ಬೆಸ್ಟ್ ಕಾಂಬಿನೇಶನ್ ಈ ಚಾಕೋ-ಸ್ಟ್ರಾಬೆರಿ ಕೇಕ್.. ರೆಸಿಪಿ ವೆರಿ ಸಿಂಪಲ್

ಏನಾದ್ರೂ ಸ್ವೀಟ್ ತಿನ್ನಬೇಕು ಅಂತ ಅನಿಸ್ತಿದ್ಯಾ? ಹಾಗಿದ್ರೆ ಈ ಚಾಕೋ-ಸ್ಟ್ರಾಬೆರಿ ಕೇಕ್ ಟ್ರೈ ಮಾಡಿ ನೋಡಿ.

ಮೈದಾ ಹಿಟ್ಟು

ಕೋಕೋ ಪೌಡರ್

ಸಕ್ಕರೆ

ಹಾಲು

ಬೆಣ್ಣೆ

ಬೇಕಿಂಗ್ ಪೌಡರ್

ಫ್ರೆಶ್ ಸ್ಟ್ರಾಬೆರಿ

ಡಾರ್ಕ್ ಚಾಕೊಲೇಟ್

ಮೊದಲು ಒಂದು ಬೌಲ್ ತಗೊಂಡು ಅದಕ್ಕೆ ಮೈದಾ, ಕೋಕೋ ಪೌಡರ್, ಬೇಕಿಂಗ್ ಪೌಡರ್ ಮತ್ತು ಪುಡಿ ಮಾಡಿದ ಸಕ್ಕರೆ ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಈಗ ಅದಕ್ಕೆ ಹಾಲು ಮತ್ತು ಬೆಣ್ಣೆ ಹಾಕಿ, ಗಂಟಿಲ್ಲದ ಹಾಗೆ ಕಲಸಿಕೊಳ್ಳಿ. ಈಗ ಬ್ಯಾಟರ್ ಗೆ ಸಣ್ಣಗೆ ಹೆಚ್ಚಿಟ್ಟಿರೋ ಸ್ಟ್ರಾಬೆರಿ ತುಂಡುಗಳನ್ನು ಹಾಕಿ ಮಿಕ್ಸ್ ಮಾಡಿ.

ಒಂದು ಪಾತ್ರೆಗೆ ಸ್ವಲ್ಪ ಬೆಣ್ಣೆ ಸವರಿ, ರೆಡಿ ಮಾಡಿರುವ ಬ್ಯಾಟರ್ ಅನ್ನು ಹಾಕಿ. ಓವನ್ ಇದ್ದರೆ 180°C ನಲ್ಲಿ 30 ನಿಮಿಷ ಬೇಕ್ ಮಾಡಿ. ಓವನ್ ಇಲ್ಲಾ ಅಂದ್ರೆ, ಒಂದು ಕುಕ್ಕರ್‌ಗೆ ಉಪ್ಪು ಹಾಕಿ, ತಳಕ್ಕೆ ಸ್ಟ್ಯಾಂಡ್ ಇಟ್ಟು, ವಿಸಿಲ್ ತೆಗೆದು 35-40 ನಿಮಿಷ ಸಣ್ಣ ಉರಿಯಲ್ಲಿ ಬೇಕ್ ಮಾಡಿ.

ಕೇಕ್ ಬೆಂದ ಮೇಲೆ ಪೂರ್ತಿ ತಣ್ಣಗಾಗಲು ಬಿಡಿ. ನಂತರ ಕೇಕ್ ಮೇಲೆ ಕರಗಿಸಿದ ಚಾಕೊಲೇಟ್ ಸಿರಪ್ ಅನ್ನು ಹರಡಿ, ಉಳಿದ ಸ್ಟ್ರಾಬೆರಿ ತುಂಡುಗಳಿಂದ ಅಲಂಕರಿಸಿದರೆ ಬಿಸಿ ಬಿಸಿ ಚಾಕೋ-ಸ್ಟ್ರಾಬೆರಿ ಕೇಕ್ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !