ನಿಮಗೂ ದಿನಾ ಒಂದೇ ಥರ ಅಡುಗೆ ತಿಂದು ಬೋರ್ ಆಗಿದ್ಯಾ? ಹಾಗಿದ್ರೆ ತಡ ಯಾಕೆ, ಈ ಹೆಲ್ದಿ ಪಾಲಕ್ ಬಿರಿಯಾನಿ ಟ್ರೈ ಮಾಡಿ ನೋಡಿ. ಮಾಡೋದು ಸುಲಭ, ಟೇಸ್ಟ್ ಮಾತ್ರ ಅಲ್ಟಿಮೇಟ್.

ಅಕ್ಕಿ
ಪಾಲಕ್ ಸೊಪ್ಪು
ಹಸಿಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ
ಟೊಮೆಟೊ
ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ, ಸೋಂಪು
ಗರಂ ಮಸಾಲೆ, ಧನಿಯಾ ಪುಡಿ, ಅರಿಶಿನ
ಮೊಸರು
ಪುದೀನಾ ಮತ್ತು ಕೊತ್ತಂಬರಿ ಸೊಪ್ಪು
ತುಪ್ಪ ಮತ್ತು ಅಡುಗೆ ಎಣ್ಣೆ
ಉಪ್ಪು

ಮೊದಲು ಪಾಲಕ್ ಸೊಪ್ಪನ್ನು ಬಿಸಿ ನೀರಲ್ಲಿ ಒಂದೆರಡು ನಿಮಿಷ ಹಾಕಿ ತೆಗೆದು, ತಣ್ಣಗಿನ ನೀರಿಗೆ ಹಾಕಿ. ಆಮೇಲೆ ಪಾಲಕ್, ಹಸಿಮೆಣಸಿನಕಾಯಿ, ಕೊತ್ತಂಬರಿ, ಪುದೀನಾ ಎಲ್ಲ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿ ಪಕ್ಕಕ್ಕಿಡಿ.
ಈಗ ಕುಕ್ಕರ್ ಗೆ ಎಣ್ಣೆ ಮತ್ತು ತುಪ್ಪ ಹಾಕಿ. ಬಿಸಿಯಾದ್ಮೇಲೆ ಏಲಕ್ಕಿ, ಲವಂಗ, ಚಕ್ಕೆ, ಸೋಂಪು, ಬಿರಿಯಾನಿ ಎಲೆ ಹಾಕಿ ಕೈಯಾಡಿಸಿ. ಆಮೇಲೆ ಉದ್ದಗೆ ಹೆಚ್ಚಿದ ಈರುಳ್ಳಿ ಹಾಕಿ, ಅದು ಚೆನ್ನಾಗಿ ಗೋಲ್ಡನ್ ಬ್ರೌನ್ ಬರೋವರೆಗೂ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗೋವರೆಗೂ ಕೈಯಾಡಿಸಿ. ಈಗ ಟೊಮೇಟೊ, ನಿಮಗಿಷ್ಟವಾದ ತರಕಾರಿಗಳು, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಮತ್ತು ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಬ್ಬಿಟ್ಟಿರೋ ಪಾಲಕ್ ಪೇಸ್ಟ್ ಹಾಕಿ, 3-4 ನಿಮಿಷ ಮಸಾಲೆ ಜೊತೆ ಬೆರೆಯಲು ಬಿಡಿ.
ಈಗ ನೆನೆಸಿದ ಅಕ್ಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. 2 ಕಪ್ ಅಕ್ಕಿಗೆ 3 ಕಪ್ ನೀರು ಹಾಕಿ ಚೆನ್ನಾಗಿ ಕುದಿ ಬರ್ಲಿ. ಆಮೇಲೆ ಕುಕ್ಕರ್ ಮುಚ್ಚಳ ಮುಚ್ಚಿ ಮಿಡಿಯಂ ಉರಿಯಲ್ಲಿ 1 ವಿಸಿಲ್ ಕೂಗಿಸಿ. ವಿಸಿಲ್ ಹೋದಮೇಲೆ ಮೇಲಿಂದ ಸ್ವಲ್ಪ ತುಪ್ಪ ಹಾಕಿ ಮಿಕ್ಸ್ ಮಾಡಿ.
ಈಗ ಬಿಸಿಬಿಸಿಯಾದ, ಹೆಲ್ತಿಯಾದ ಪಾಲಕ್ ಬಿರಿಯಾನಿ ರೆಡಿ! ಇದರ ಜೊತೆ ರೈತಾ ಮಿಕ್ಸ್ ಮಾಡ್ಕೊಂಡ್ರು ತಿಂದ್ರೆ ಪ್ಲೇಟ್ ಖಾಲಿಯಾಗೋದು ಪಕ್ಕಾ.



