ಕೇವಲ ಎರಡೇ ಎರಡು ಮೇನ್ ಐಟಂ ಬಳಸಿ, ಅಂಗಡಿಯಲ್ಲಿ ಸಿಗೋ ಥರಾನೇ ಗರಿಗರಿಯಾಗಿ ಮನೆಯಲ್ಲೇ ಮಾಡ್ಬೋದು ಶೇಂಗಾ ಮಿಠಾಯಿ.
ಶೇಂಗಾ (ಕಡಲೆಕಾಯಿ)
ಬೆಲ್ಲ
ತುಪ್ಪ
ಏಲಕ್ಕಿ ಪುಡಿ
ಮೊದಲು ಗ್ಯಾಸ್ ಸ್ಟವ್ ಮೇಲೆ ಬಾಣಲೆ ಇಟ್ಟು, ಶೇಂಗಾವನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಸಿಪ್ಪೆ ಸುಲಭವಾಗಿ ಬರೋವರೆಗೆ ಹುರಿದು, ಆರಿದ ಮೇಲೆ ಸಿಪ್ಪೆ ತೆಗೆದಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಹೆಚ್ಚಿದ ಬೆಲ್ಲ ಮತ್ತು 1 ಚಮಚ ನೀರು ಹಾಕಿ ಕರಗಿಸಿ. ಪಾಕ ಆದ ತಕ್ಷಣ ಗ್ಯಾಸ್ ಸಿಮ್‌ನಲ್ಲಿಟ್ಟು, ತುಪ್ಪ, ಏಲಕ್ಕಿ ಪುಡಿ ಮತ್ತು ಹುರಿದ ಶೇಂಗಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮುಂಚಿತವಾಗಿಯೇ ತುಪ್ಪ ಸವರಿದ ಪ್ಲೇಟ್ ಅಥವಾ ಚಪಾತಿ ಮಣೆ ಮೇಲೆ ಈ ಬಿಸಿ ಮಿಶ್ರಣವನ್ನು ಹಾಕಿ. ಬಿಸಿ ಇರುವಾಗಲೇ ನಿಮಗಿಷ್ಟವಾಗುವ ಶೇಪ್‌ಗೆ ಚಾಕುವಿನಿಂದ ಕಟ್ ಮಾಡಿ.
ಈಗ ಗರಿಗರಿಯಾದ, ಬಾಯಲ್ಲಿ ನೀರೂರಿಸೋ ಶೇಂಗಾ ಮಿಠಾಯಿ ರೆಡಿ!



