September 2, 2026
Wednesday, September 2, 2026
spot_img

ಕಿಚ್ಚನ ಹುಟ್ಟುಹಬ್ಬಕ್ಕೆ ಮಾಸ್ ಗಿಫ್ಟ್: ‘ಬಿಲ್ಲ ರಂಗ ಬಾಷಾ’ ಪೋಸ್ಟರ್‌ ನೋಡಿ ಫ್ಯಾನ್ಸ್‌ ಫುಲ್‌ ಖುಷ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬರ್ತ್‌ಡೇ ಅಂದರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಈ ಸಂಭ್ರಮದ ವೇಳೆಯಲ್ಲೇ ಒಂದು ಸಿಹಿ ಸುದ್ದಿ ಹೊರಬಿದ್ದಿದೆ. ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷಾ’ ಸಿನಿಮಾದ ಪವರ್‌ಫುಲ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.

‘ವಿಕ್ರಾಂತ್ ರೋಣ’ ನಂತರ ಮತ್ತೆ ಒಂದಾಗಿರೋ ಅನೂಪ್ ಭಂಡಾರಿ ಮತ್ತು ಸುದೀಪ್ ಕಾಂಬಿನೇಷನ್ ಅಂದಮೇಲೆ ನಿರೀಕ್ಷೆ ಮುಗಿಲು ಮುಟ್ಟುವುದು ಸಹಜ. ಈಗ ಹೊರಬಿದ್ದಿರೋ ಪೋಸ್ಟರ್‌ನಲ್ಲಿ ಸುದೀಪ್ ಅವರ ರಗಡ್ ಮತ್ತು ಮಾಸ್ ಲುಕ್ ನೋಡಿದ್ರೆನೇ ಮೈ ರೋಮಾಂಚನಗೊಳ್ಳುತ್ತೆ. ಅನೂಪ್ ಭಂಡಾರಿ ಈ ಬಾರಿ ಯಾವುದೋ ಬೇರೆನೇ ಲೆವೆಲ್‌ನ ಫ್ಯಾಂಟಸಿ ವರ್ಲ್ಡ್ ಸೃಷ್ಟಿ ಮಾಡಿರೋ ಹಾಗೆ ಕಾಣ್ತಿದೆ.

ಬೃಹತ್ ಬಜೆಟ್‌ನಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿರೋ ಈ ಸಿನಿಮಾ ಮುಂದಿನ ವರುಷ ಬೆಳ್ಳಿಪರದೆಗೆ ಅಪ್ಪಳಿಸಲಿದೆ.

ಸುದೀಪ್‌ ಅವರ ಈ ಹೊಸ ಅವತಾರ ನೋಡಿದ ಮೇಲೆ ಅಭಿಮಾನಿಗಳಂತೂ ಖುಷಿಯಿಂದ ತೇಲಾಡ್ತಿದ್ದು, ಥಿಯೇಟರ್‌ನಲ್ಲಿ ಹಬ್ಬ ಮಾಡೋಕೆ ಈಗಿನಿಂದಲೇ ಕೌಂಟ್‌ಡೌನ್ ಶುರು ಮಾಡಿದ್ದಾರೆ.

ಇನ್ನೂ ಬಾಕಿ ಇದೆ ಸರ್ಪ್ರೈಸ್

ಇದಷ್ಟೇ ಅಲ್ಲ, ಸುದೀಪ್ ಬರ್ತ್‌ಡೇ ಪ್ರಯುಕ್ತ ಅಭಿಮಾನಿಗಳಿಗೆ ಸಾಲು ಸಾಲು ಸಿನಿಮಾಗಳ ಸರ್ಪ್ರೈಸ್ ಸಿಗ್ತಿದೆ. ಇಂದು ಒಟ್ಟು ನಾಲ್ಕು ಹೊಸ ಸಿನಿಮಾಗಳ ಅಧಿಕೃತ ಘೋಷಣೆಯಾಗಲಿದೆ. ಲೆನಿನ್ ಕ್ರಿಯೇಷನ್ಸ್ ಹಾಗೂ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಚಿತ್ರ ಮತ್ತು ಖ್ಯಾತ ನಟ-ನಿರ್ದೇಶಕ ಸಮುದ್ರಖಣಿ ನಿರ್ದೇಶನದ ಸಿನಿಮಾದ ಅನೌನ್ಸ್‌ಮೆಂಟ್ ಕೂಡ ಇಂದೇ ನಡೆಯಲಿದೆ. ಆದರೆ, ಈ ಸಿನಿಮಾಗಳಲ್ಲಿ ಸುದೀಪ್ ಅವರ ಪಾತ್ರವೇನು ಎಂಬುದನ್ನು ಚಿತ್ರತಂಡ ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಟ್ಟಿದೆ.

ಅಭಿಮಾನಿಗಳಿಗೆ ಸುದೀಪ್ ಮನವಿ

ಇಷ್ಟೆಲ್ಲಾ ಸಪ್ರೈಸ್ ಸಿಕ್ಕಿದ್ರೂ, ಅಭಿಮಾನಿಗಳಿಗೆ ಸಣ್ಣದೊಂದು ಬೇಸರದ ಸುದ್ದಿಯಿದೆ. ಈ ವರ್ಷ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರೋ ಅವರು, “ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಸಂಭ್ರಮಗಳನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ ಅದು ಸಂಭ್ರಮವೇ ಅಲ್ಲ. ಮನೆಯ ಬಳಿಯೂ ಯಾರಿಗೆ ಸಿಗಲು ಸಾಧ್ಯವಾಗುತ್ತಿಲ್ಲ,” ಎಂದು ಭಾವುಕರಾಗಿ ಹೇಳಿದ್ದಾರೆ.

ಜೊತೆಗೆ, “ನಿಮ್ಮ ನಿಮ್ಮ ಊರುಗಳಲ್ಲಿ ಮಾಡುವ ನಿಸ್ವಾರ್ಥ ಕಾರ್ಯಕ್ರಮಗಳೇ ನನಗೆ ನಿಜವಾದ ಆಶೀರ್ವಾದ. ನೀವು ತರೋ ಉಡುಗೊರೆಗಳು ಸಮಾಜದ ಒಳ್ಳೆಯ ಕೆಲಸಗಳಿಗೆ ಬಳಕೆಯಾಗಲಿ,” ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !