September 2, 2026
Wednesday, September 2, 2026
spot_img

ಲ್ಯಾಪ್‌ಟಾಪ್‌ ಸ್ಲೋ ಆಗಿದೆಯಾ? ಚಿಂತೆ ಬೇಡ, ಯಾವುದೇ ಖರ್ಚಿಲ್ಲದೆ ಸೂಪರ್ ಫಾಸ್ಟ್ ಮಾಡಲಿದೆ ಈ ʼಜಿಯೋಪಿಸಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಿಮ್ಮ ಹಳೆಯ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಸ್ಲೋ ಆಗಿದ್ದರೆ ಅಥವಾ ಹ್ಯಾಂಗ್‌ ಆಗುತ್ತಿದ್ದರೆ, ತಕ್ಷಣ ಹೊಸದನ್ನು ಖರೀದಿಸುವ ಅಗತ್ಯವಿಲ್ಲ. ಈ ರಿಲಯನ್ಸ್ ಜಿಯೋಪಿಸಿ (JioPC) ನಿಮ್ಮ ಹಳೆಯ ಕಂಪ್ಯೂಟರ್ ಅನ್ನು ಕ್ಲೌಡ್‌ನ ಶಕ್ತಿಯೊಂದಿಗೆ ಹೆಚ್ಚು ಶಕ್ತಿಯುತವಾಗಿಸುತ್ತದೆ. ಬಳಕೆದಾರರು ತಮ್ಮ ಹಳೇ ಕಂಪ್ಯೂಟರ್‌ನಲ್ಲೇ ಯಾವುದೇ ಹೊಸ ಹಾರ್ಡ್‌ವೇರ್ ಅಳವಡಿಸದೆ 16 GB RAM ಮತ್ತು 1 TB ವರೆಗಿನ ಸ್ಟೋರೇಜ್ ವೇಗವನ್ನು ಸುಲಭವಾಗಿ ಖರೀದಿಸಬಹುದು.

ಏನಿದು ಜಿಯೋಪಿಸಿ?

ಜಿಯೋಪಿಸಿಯ ಸೇವೆಯನ್ನು ಯಾವುದೇ ಇಂಟರ್ನೆಟ್ ಬಳಕೆದಾರರು ಸ್ವತಂತ್ರ ಚಂದಾದಾರಿಕೆಯಾಗಿ ತೆಗೆದುಕೊಳ್ಳಬಹುದು. ಅಂದರೆ, ಇಂಟರ್ನೆಟ್ ಸಂಪರ್ಕವು ಯಾವುದೇ ಟೆಲಿಕಾಂ ಅಥವಾ ಬ್ರಾಡ್‌ಬ್ಯಾಂಡ್ ಕಂಪನಿಗೆ ಸೇರಿದ್ದರೂ ಜಿಯೋಪಿಸಿಯನ್ನು ಬಳಸಬಹುದು.  ಇದನ್ನು ಐದು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ರನ್‌ ಮಾಡಬಹುದು. ಡೇಟಾ ಮೈಗ್ರೇಷನ್ ಅಥವಾ ಹೊಸ ಹಾರ್ಡ್‌ವೇರ್ ಅಳವಡಿಸುವ ಅಗತ್ಯವಿಲ್ಲ. ಈ ಹಿಂದೆ ಜಿಯೋ ಹೋಮ್ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಮಾತ್ರ ಜಿಯೋಪಿಸಿ ಸೀಮಿತವಾಗಿತ್ತು.

ಜಿಯೋಪಿಸಿ, ಹಳೆಯ ಕಂಪ್ಯೂಟರ್‌ಗಳನ್ನು ಎಷ್ಟು ಶಕ್ತಿಯುತವಾಗಿಸಬಲ್ಲದು ಎಂದರೆ ಎಐಗೆ ಸಂಬಂಧಿಸಿದ ಭಾರಿ ಸ್ಟೋರೇಜ್‌ ಅಗತ್ಯಗಳನ್ನು ಸಹ ಸುಲಭವಾಗಿ ಪೂರೈಸಬಹುದು. ಹೀಗಾಗಿ ಕಂಪ್ಯೂಟರ್‌ನ ಪ್ರೊಸೆಸಿಂಗ್ ಮತ್ತು ಸ್ಟೋರೇಜ್‌ನ ಬಹುಭಾಗವು ಜಿಯೋ ಕ್ಲೌಡ್‌ನಲ್ಲಿ ನಡೆಯುವುದರಿಂದ, 8 ವರ್ಷ ಹಳೆಯ ಕಂಪ್ಯೂಟರ್ ಕೂಡ ಇಂದಿನ ಅತ್ಯಾಧುನಿಕ ಎಐ ಆಧಾರಿತ ಅಪ್ಲಿಕೇಶನ್‌ಗಳನ್ನು ಅತ್ಯಂತ ವೇಗವಾಗಿ ರನ್ ಮಾಡಬಲ್ಲ ಸಾಮರ್ಥ್ಯ ಪಡೆದುಕೊಳ್ಳುತ್ತದೆ.

ಜಿಯೋಪಿಸಿಯ ಯೋಜನೆ

ಜಿಯೋಪಿಸಿಯ ಯೋಜನೆಗಳು 1,000 ರೂ.ಗಳಿಂದ ಪ್ರಾರಂಭವಾಗಲಿವೆ. 8 ಜಿಬಿ RAM ಮತ್ತು 500 ಜಿಬಿ ಸ್ಟೋರೇಜ್ ಹೊಂದಿರುವ ಎರಡು ತಿಂಗಳ ಯೋಜನೆಯು 1,000 ರೂ.ಗೆ ಲಭ್ಯವಿರುತ್ತದೆ. ಆದರೆ 16 ಜಿಬಿ RAM ಮತ್ತು 1 ಟಿಬಿ ಸ್ಟೋರೇಜ್ ಹೊಂದಿರುವ ಜಿಯೋಪಿಸಿ ಅಲ್ಟ್ರಾ ಎರಡು ತಿಂಗಳವರೆಗೆ 1,200 ರೂ. ಐದು ತಿಂಗಳ ಯೋಜನೆಗಳು ಕ್ರಮವಾಗಿ 2,000 ಮತ್ತು 2,500 ರೂ.ಗೆ ಲಭ್ಯವಿರುತ್ತವೆ. ಅಲ್ಲದೆ, 12 ತಿಂಗಳ ಅಂದರೆ 10+2 ತಿಂಗಳ ಯೋಜನೆಯ ಬೆಲೆ ₹4,000 ಮತ್ತು ₹5,000 ಆಗಿದೆ. ಎಲ್ಲಾ ಬೆಲೆಗಳು ಜಿಎಸ್‌ಟಿಯನ್ನು ಒಳಗೊಂಡಿವೆ.

ಜಿಯೋಪಿಸಿ ಕ್ಲೌಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಉತ್ತಮ ಇಂಟರ್ನೆಟ್ ಸಂಪರ್ಕ ಅತ್ಯಗತ್ಯ. ಬ್ರಾಡ್ ಬ್ಯಾಂಡ್ ಹೊರತಾಗಿ, ಇದನ್ನು 4G ಅಥವಾ 5G ಸಂಪರ್ಕದಲ್ಲಿಯೂ ಬಳಸಬಹುದಾಗಿದೆ. ಕಡಿಮೆ ಬಜೆಟ್‌ನಲ್ಲಿ ತಮ್ಮ ಹಳೆಯ ಕಂಪ್ಯೂಟರ್‌ಗಳನ್ನೇ ಅತ್ಯಾಧುನಿಕ ಸಿಸ್ಟಮ್‌ಗಳಾಗಿ ಬದಲಾಯಿಸಿಕೊಳ್ಳಲು ಬಯಸುವವರಿಗೆ ಜಿಯೋದ ಈ ಹೊಸ ತಂತ್ರಜ್ಞಾನ ಒಂದು ವರದಾನವೇ ಸರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !