September 3, 2026
Thursday, September 3, 2026
spot_img

ಹೊಸ ಸೀಸನ್, ಹೊಸ ಹ್ಯಾರಿ: ಕ್ರಿಸ್ಮಸ್ ಹಬ್ಬಕ್ಕೆ ‘HBO Max’ ಕಡೆಯಿಂದ ಬಂಪರ್ ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮ್ಯಾಜಿಕ್ ಪ್ರಪಂಚದ ಕಿಂಗ್, ನಮ್ಮೆಲ್ಲರ ನೆಚ್ಚಿನ ಹ್ಯಾರಿ ಪಾಟರ್ ಮತ್ತೆ ತನ್ನ ಜಾದೂ ಕೋಲು ಹಿಡಿದು ಬರೋಕೆ ರೆಡಿಯಾಗಿದ್ದಾನೆ. ಹ್ಯಾರಿ ಪಾಟರ್ ಅಂದ್ರೆ ಸಾಕು 90s ಕಿಡ್ಸ್‌ನಿಂದ ಹಿಡಿದು ಇವತ್ತಿನ Gen Z ಫ್ಯಾನ್ಸ್ ವರೆಗೆ ಪ್ರತಿಯೊಬ್ಬರ ಫೇವರೆಟ್‌. ಈಗ ಅದೇ ‘ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್’ ಕಥೆ, ಸಂಪೂರ್ಣವಾಗಿ ಹೊಸ ರೂಪದಲ್ಲಿ, ಹೊಸ ಪಾತ್ರಗಳೊಂದಿಗೆ ಬರ್ತಿದೆ.

ಇತ್ತೀಚೆಗೆ ರಿಲೀಸ್ ಆಗಿರೋ 2 ನಿಮಿಷ 38 ಸೆಕೆಂಡ್‌ನ ಟೀಸರ್ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದೆ. ಈ ಹೊಸ ಸೀರೀಸ್‌ನಲ್ಲಿ ಹ್ಯಾರಿ ಪಾಟರ್ ಪಾತ್ರದಲ್ಲಿ ಡೊಮಿನಿಕ್ ಮೆಕ್ಲಾಫ್ಲಿನ್ ಅನ್ನೋ ಹೊಸ ಹುಡುಗ ಕಾಣಿಸಿಕೊಂಡಿದ್ದಾನೆ. ಈ ಸೀಸನ್ ಪೂರ್ತಿ ನಮಗೆ ಮೊದಲ ಪುಸ್ತಕ ‘ಫಿಲಾಸಫರ್ಸ್ ಸ್ಟೋನ್’ ಕಥೆಯನ್ನು ನೆನಪಿಸಲಿದೆ. ಆ ಗಾಡ್ರಿಕ್ ಹೊಲೊದಿಂದ ಶುರುವಾಗಿ ಹಾಗ್‌ವರ್ಟ್ಸ್ ಮ್ಯಾಜಿಕ್ ಶಾಲೆವರೆಗೆ ಹ್ಯಾರಿಯ ಜರ್ನಿ ಹೇಗಿರುತ್ತೆ ಅನ್ನೋದನ್ನ ಕಣ್ಣಿಗೆ ಕಟ್ಟೋಹಾಗೆ ತೋರಿಸಲಿದ್ದಾರೆ. ಟೀಸರ್‌ನಲ್ಲಂತೂ ಆ ಐಕಾನಿಕ್ ಸಾಕ್ಸಿಂಗ್ ಹ್ಯಾಟ್ ಸೆರೆಮನಿ ಮತ್ತು ಕ್ವಿಡಿಚ್ ಟೂರ್ನಮೆಂಟ್ ನೋಡ್ತಿದ್ರೆ ಹಳೆಯ ನೆನಪುಗಳೆಲ್ಲಾ ಕಣ್ಣ ಮುಂದೆ ಬಂದು ಗೂಸ್‌ಬಂಪ್ಸ್ ಬರೋದು ಗ್ಯಾರಂಟಿ.

ಹ್ಯಾರಿ ಜೊತೆಗೆ ಆತನ ಬೆಸ್ಟ್ ಫ್ರೆಂಡ್ಸ್ ರೋನ್ ವೀಸ್ಲಿ ಆಗಿ ಅಲಾಸ್ಟೇರ್ ಸ್ಟೌಟ್ ಮತ್ತು ಹೆರ್ಮಿಯೋನಿ ಗ್ರೇಂಜರ್ ಆಗಿ ಅರಾಬೆಲ್ಲಾ ಸ್ಟ್ಯಾಂಟನ್ ಕ್ಯೂಟ್ ಆಗಿ ಮಿಂಚಿದ್ದಾರೆ. ಇವರಷ್ಟೇ ಅಲ್ಲದೆ ಲೋಕ್ಸ್ ಪ್ರಾಟ್, ರೋರಿ ವಿಲ್ಮಾಟ್, ಬೆಲ್ ಪೌಲಿ ನಂತಹ ಸೂಪರ್ ಕಲಾವಿದರು ಸಾಥ್ ಕೊಟ್ಟಿದ್ದಾರೆ.

ಈ ಸೀರೀಸ್‌ಗೆ ಮಾರ್ಕ್ ಮೈಲೋಡ್, ಜೆಸ್ಸಿಕಾ ಹೊಬ್ಸ್ ನಂತಹ ಡೈರೆಕ್ಟರ್ಸ್ ನಿರ್ದೇಶನ ಮಾಡಿದ್ದಾರೆ. ಫ್ರಾಂಚೆಸ್ಕಾ ಗಾರ್ಡಿನರ್ ಮತ್ತು ಜಾನ್ ಬ್ರೌನ್ ಸೀರೀಸ್‌ನ ಶೋರನ್ನರ್ಸ್, ಬ್ಯಾಕ್‌ಗ್ರೌಂಡ್ ಸ್ಕೋರ್‌ಗೆ ಮ್ಯೂಸಿಕ್ ಮಾಂತ್ರಿಕ ಹ್ಯಾನ್ಸ್ ಝಿಮ್ಮರ್ ಅವರೇ ಸಾಥ್ ಕೊಟ್ಟಿದ್ದಾರೆ. ಅಂದಮೇಲೆ ಮ್ಯೂಸಿಕ್ ವಿಚಾರದಲ್ಲಿ ಧೂಳ್ ಎಬ್ಬಿಸೋದು ಪಕ್ಕಾ.

ಮೊದಲ ಸೀಸನ್‌ನಲ್ಲಿ ಒಟ್ಟು 8 ಎಪಿಸೋಡ್‌ಗಳು ಇರಲಿದ್ದು, ಇದೇ 2026ರ ಕ್ರಿಸ್‌ಮಸ್ ಹಬ್ಬಕ್ಕೆ ಎಚ್‌ಬಿಒ ಮತ್ತು ಎಚ್‌ಬಿಒ ಮ್ಯಾಕ್ಸ್‌ನಲ್ಲಿ ರಿಲೀಸ್ ಆಗ್ತಿದೆ. ಅದಕ್ಕಿಂತ ಖುಷಿ ವಿಚಾರ ಏನಂದ್ರೆ, ಆಗಲೇ ಸೀಸನ್ 2ಗೆ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿಬಿಟ್ಟಿದೆ. ‘ಚೇಂಬರ್ ಆಫ್ ಸೀಕ್ರೆಟ್ಸ್’ ಕಥೆಯಿರುವ ಸೀಸನ್ 2ನಲ್ಲಿ ಗಿಲ್ಡೆರಾಯ್ ಲಾಕ್‌ಹಾರ್ಟ್ ಪಾತ್ರದಲ್ಲಿ ‘ಗೇಮ್ ಆಫ್ ಥ್ರೋನ್ಸ್’ ಖ್ಯಾತಿಯ ಕಿಟ್ ಹ್ಯಾರಿಂಗ್ಟನ್ ಕಾಣಿಸಿಕೊಳ್ಳಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !