September 3, 2026
Thursday, September 3, 2026
spot_img

ಬಿಸಿ ಬಿಸಿ ಅನ್ನಕ್ಕೆ ಈ ಟೊಮೆಟೊ ಬೆಳ್ಳುಳ್ಳಿ ಚಟ್ನಿ ಒಂದಿದ್ರೆ ಸಾಕು, ಹೊಟ್ಟೆ ತುಂಬಾ ಊಟ ಪಕ್ಕಾ!

ಬಿಸಿಬಿಸಿ ಅನ್ನ, ಚಪಾತಿ ಅಥವಾ ದೋಸೆಗೆ ಟೊಮೆಟೊ ಬೆಳ್ಳುಳ್ಳಿ ಚಟ್ನಿ ಇದ್ದರೆ ಸಾಕು, ಊಟದ ತಟ್ಟೆ ಖಾಲಿಯಾಗೋದೇ ಗೊತ್ತಾಗಲ್ಲ!

ಟೊಮೆಟೊ

ಬೆಳ್ಳುಳ್ಳಿ

ಒಣ ಮೆಣಸಿನಕಾಯಿ

ಅಡುಗೆ ಎಣ್ಣೆ

ಸಾಸಿವೆ

ಜೀರಿಗೆ

ಕರಿಬೇವು

ಇಂಗು

ಹುಣಸೆಹಣ್ಣು

ಉಪ್ಪು

ಬೆಲ್ಲ

ಮೊದಲು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ. ಅದಕ್ಕೆ ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿ ಮತ್ತು ಒಣ ಮೆಣಸಿನಕಾಯಿ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ಅದೇ ಬಾಣಲೆಗೆ ಹೆಚ್ಚಿದ ಟೊಮೆಟೊ, ಹುಣಸೆಹಣ್ಣು ಮತ್ತು ಸ್ವಲ್ಪ ಉಪ್ಪು ಹಾಕಿ. ಟೊಮೆಟೊ ಮೆತ್ತಗಾಗಿ, ನೀರು ಬಿಟ್ಟುಕೊಳ್ಳುವವರೆಗೆ ಚೆನ್ನಾಗಿ ಬೇಯಿಸಿ ತಣ್ಣಗಾಗಲು ಬಿಡಿ.

ಈಗ ಮಿಕ್ಸಿ ಜಾರ್‌ಗೆ ಹುರಿದಿಟ್ಟುಕೊಂಡ ಬೆಳ್ಳುಳ್ಳಿ, ಮೆಣಸಿನಕಾಯಿ, ಬೇಯಿಸಿದ ಟೊಮೆಟೊ, ಬೆಲ್ಲ ಮತ್ತು ಅಗತ್ಯವಿದ್ದಷ್ಟು ಉಪ್ಪು ಹಾಕಿ. ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಿ.

ಬಾಣಲೆಯಲ್ಲಿ ಮೂರು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ ಹಾಕಿ ಸಿಡಿಸಿ ಆಮೇಲೆ ಜೀರಿಗೆ, ಕರಿಬೇವು ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿ. ಈಗ ರುಬ್ಬಿಟ್ಟುಕೊಂಡ ಚಟ್ನಿಯನ್ನು ಒಗ್ಗರಣೆಗೆ ಹಾಕಿ, ಎಣ್ಣೆ ಮೇಲಕ್ಕೆ ತೇಲುವವರೆಗೆ 3-4 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಕೈಯಾಡಿಸಿ.

ಈಗ ಘಮಘಮಿಸುವ, ನಾಲಿಗೆಗೆ ರುಚಿ ಕೊಡುವ ಟೊಮೆಟೊ ಬೆಳ್ಳುಳ್ಳಿ ಚಟ್ನಿ ರೆಡಿ! ಇದನ್ನು ಬಿಸಿಬಿಸಿ ಅನ್ನಕ್ಕೆ ತುಪ್ಪ ಹಾಕ್ಕೊಂಡು ತಿಂದ್ರಂತೂ ಆಹಾ.. ಬೊಂಬಾಟ್ ಟೇಸ್ಟ್. ಈ ಚಟ್ನಿಯನ್ನು ಗಾಜಿನ ಬಾಟಲಿಯಲ್ಲಿ ಇಟ್ಟರೆ 4-5 ದಿನ ಆರಾಮಾಗಿ ಸ್ಟೋರ್ ಮಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !