September 3, 2026
Thursday, September 3, 2026
spot_img

Food | ಬಿಸಿ ಬಿಸಿ ಅನ್ನಕ್ಕೆ ಖಾರ-ಖಾರವಾದ ಮೆಣಸಿನ ಸಾರು.. ಹಳ್ಳಿ ಶೈಲಿಯ ಸಿಂಪಲ್ ರೆಸಿಪಿ!

ಅಜ್ಜಿ ಕಾಲದ ಅಸಲಿ ರುಚಿಯಲ್ಲಿ ಮೆಣಸಿನ ಸಾರು ಮಾಡೋದು ಹೇಗೆ ಎಂದು ಇವತ್ತು ನೋಡೋಣ. ಊಟದ ಜೊತೆ ಈ ಸಾರು ಇದ್ರೆ, ಹೊಟ್ಟೆ ತುಂಬಾ ಅನ್ನ ತಿನ್ನಬಹುದು. ಜೊತೆಗೆ ಶೀತ, ಕೆಮ್ಮು, ತಲೆನೋವು ಇದ್ರೆ ಕ್ಷಣದಲ್ಲಿ ಗಾಯಬ್!

ಕಾಳುಮೆಣಸು

ಜೀರಿಗೆ

ಬೆಳ್ಳುಳ್ಳಿ

ಟೊಮೆಟೊ

ಹುಣಸೆಹಣ್ಣು

ಸಾಸಿವೆ, ಇಂಗು, ಕರಿಬೇವು, 2 ಒಣಮೆಣಸಿನಕಾಯಿ, ಎಣ್ಣೆ

ಕೊತ್ತಂಬರಿ ಸೊಪ್ಪು

ಉಪ್ಪು

ಮೊದಲು ಮಿಕ್ಸಿ ಜಾರ್‌ಗೆ ಕಾಳುಮೆಣಸು ಮತ್ತು ಜೀರಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಬಾಯಿಗೆ ಸಿಗೋ ಹಾಗೆ ತರಿತರಿಯಾಗಿದ್ರೆನೇ ಸಾರಿಗೆ ಅಸಲಿ ಮಜಾ. ನಂತರ ಜಜ್ಜಿದ ಬೆಳ್ಳುಳ್ಳಿ ಹಾಕಿ ಒಂದೇ ಒಂದು ರೌಂಡ್ ತಿರುಗಿಸಿ ತೆಗೆದಿಟ್ಟುಕೊಳ್ಳಿ. ಒಂದು ಪಾತ್ರೆಗೆ ಹುಣಸೆಹಣ್ಣಿನ ರಸ, ಹೆಚ್ಚಿದ ಟೊಮೆಟೊ, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಕರಿಬೇವು ಹಾಕಿ. ಟೊಮೆಟೊ ಚೆನ್ನಾಗಿ ಮೆತ್ತಗಾಗುವವರೆಗೆ ಹಾಗೂ ಹುಣಸೆಹಣ್ಣಿನ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಕುದಿಸಿ. ಟೊಮೆಟೊ ನೀರು ಕುದಿ ಬಂದ ಮೇಲೆ, ನಾವು ಮಿಕ್ಸಿಯಲ್ಲಿ ರುಬ್ಬಿಟ್ಟುಕೊಂಡ ಮೆಣಸು-ಜೀರಿಗೆ-ಬೆಳ್ಳುಳ್ಳಿ ಮಿಶ್ರಣವನ್ನು ಅದಕ್ಕೆ ಹಾಕಿ. ಬೇಕಾಗುವಷ್ಟು ನೀರು ಸೇರಿಸಿ.

ಸಾರನ್ನು ತುಂಬಾ ಹೊತ್ತು ಕುದಿಸಬೇಡಿ. ಮೇಲ್ಗಡೆ ನೊರೆ ಬಂದು, ಒಂದು ಕುದಿ ಬರ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ಮೆಣಸಿನ ಸಾರನ್ನು ಜಾಸ್ತಿ ಕುದಿಸಿದ್ರೆ ಕಹಿ ಬಂದುಬಿಡುತ್ತದೆ. ಸಣ್ಣ ಬಾಣಲೆಯಲ್ಲಿ 1-2 ಚಮಚ ಎಣ್ಣೆ ಬಿಸಿ ಮಾಡಿ. ಸಾಸಿವೆ, ಒಣಮೆಣಸಿನಕಾಯಿ, ಇಂಗು ಮತ್ತು ಕರಿಬೇವು ಹಾಕಿ. ಈ ಒಗ್ಗರಣೆಯನ್ನು ತಕ್ಷಣ ಸಾರಿಗೆ ಹಾಕಿ, ಮುಚ್ಚಳ ಮುಚ್ಚಿ. ಕೊನೆಯಲ್ಲಿ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿದ್ರೆ, ಘಮ ಘಮಿಸೋ ಮೆಣಸಿನ ಸಾರು ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !