ಕೆಫೆಗೆ ಹೋಗಿ ದುಬಾರಿ ಬೆಲೆ ಕೊಟ್ಟು ತಂಪಾದ ಶೇಕ್ ಕುಡಿಯೋ ಬದಲು, ಮನೆಯಲ್ಲೇ ಪಿಸ್ತಾ ವೆನಿಲ್ಲಾ ಶೇಕ್ ಮಾಡ್ಕೊಂಡು ಕುಡಿದ್ರೆ ಆ ಖುಷಿನೇ ಬೇರೆ!
ಹಾಲು
ಪಿಸ್ತಾ
ವೆನಿಲ್ಲಾ ಐಸ್ಕ್ರೀಮ್
ಸಕ್ಕರೆ
ಏಲಕ್ಕಿ ಪುಡಿ
ಮೊದಲು ನೆನೆಸಿಟ್ಟುಕೊಂಡಿರೋ ಪಿಸ್ತಾನ ಒಂದು ಚಿಕ್ಕ ಮಿಕ್ಸಿ ಜಾರ್ಗೆ ಹಾಕಿ. ಅದಕ್ಕೆ ಸ್ವಲ್ಪ ತಣ್ಣಗಿರೋ ಹಾಲು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈಗ ಜ್ಯೂಸ್ ಮಿಕ್ಸಿ ಜಾರ್ ತಗೊಂಡು, ಅದಕ್ಕೆ ಪಿಸ್ತಾ ಪೇಸ್ಟ್, ಬಾಕಿ ಇರೋ ತಣ್ಣನೆಯ ಹಾಲು, ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಕಿ. ಇದರ ಜೊತೆಗೆ ಮುಖ್ಯವಾಗಿ ವೆನಿಲ್ಲಾ ಐಸ್ಕ್ರೀಮ್ ಸೇರಿಸಿ. ಐಸ್ಕ್ರೀಮ್ ಹಾಕೋದ್ರಿಂದ ಶೇಕ್ಗೆ ಥಿಕ್ನೆಸ್ ಮತ್ತು ಅದ್ಭುತ ರುಚಿ ಸಿಗುತ್ತೆ.
ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ 1-2 ನಿಮಿಷ ಚೆನ್ನಾಗಿ ಬ್ಲೆಂಡ್ ಮಾಡಿ. ಶೇಕ್ ಮೇಲ್ಭಾಗದಲ್ಲಿ ನೊರೆ ಬರೋವರೆಗೆ ಬ್ಲೆಂಡ್ ಮಾಡಿದ್ರೆ ಕುಡಿಯೋಕೆ ಸಖತ್ ಮಜವಾಗಿರುತ್ತೆ.
ಒಂದು ಸರ್ವಿಂಗ್ ಗ್ಲಾಸ್ಗೆ ಈ ತಣ್ಣಗಿನ ಶೇಕ್ ಹಾಕಿ. ಮೇಲಿಂದ ಸ್ವಲ್ಪ ಹೆಚ್ಚಿದ ಪಿಸ್ತಾ, ಬಾದಾಮಿ ಚೂರುಗಳು ಮತ್ತು ಬೇಕಿದ್ದರೆ ಇನ್ನೊಂದು ಸಣ್ಣ ಸ್ಕೂಪ್ ವೆನಿಲ್ಲಾ ಐಸ್ಕ್ರೀಮ್ ಹಾಕಿ ಡೆಕೋರೇಟ್ ಮಾಡಿ.
ಈಗ ರೆಸ್ಟೋರೆಂಟ್ ಶೈಲಿಯ, ಸೂಪರ್ ಟೇಸ್ಟಿ ಪಿಸ್ತಾ ವೆನಿಲ್ಲಾ ಶೇಕ್ ಕುಡಿಯಲು ರೆಡಿ!



