September 3, 2026
Thursday, September 3, 2026
spot_img

ರೆಫ್ರಿಜಿರೇಟರ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಹೊತ್ತಿ ಉರಿದ ಐಷಾರಾಮಿ ಮನೆ, ಮನೆಮಂದಿ ಪವಾಡ ಸದೃಶ ರೀತಿಯಲ್ಲಿ ಪಾರು

ಹೊಸದಿಗಂತ ವರದಿ ದಾವಣಗೆರೆ:

ರೆಫ್ರಿಜಿರೇಟರ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇಡೀ ಐಷಾರಾಮಿ ಮನೆಯೇ ಹೊತ್ತಿ ಉರಿದು, ಸುಮಾರು 70 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಪೀಠೋಪಕರಣ, ವಿದ್ಯುತ್ ಉಪಕರಣ, ದುಬಾರಿ ವಸ್ತು, ಬಟ್ಟೆಗಳು ಸುಟ್ಟು ಕರಕಲಾದ ಘಟನೆ ನಗರದ ಬಸವೇಶ್ವರ ಬಡಾವಣೆಯಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ 7 ಜನ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೇಣುಗೋಪಾಲ ಎಂಬುವರಿಗೆ ಸೇರಿದ ನೂತನ ಹಾಗೂ ಐಷಾರಾಮಿ ಮನೆಯಲ್ಲಿ ರೆಫ್ರಿಜಿರೇಟರ್ ನಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡು, ವೈರ್ ಗಳ ಮೂಲಕ ಸಮೀಪದಲ್ಲಿದ್ದ ವಸ್ತುಗಳಿಗೆಲ್ಲಾ ಹಬ್ಬಿದೆ. ಸುಟ್ಟ ವಾಸನೆ, ಹೊಗೆ ಬಂದಂತಾಗಿದ್ದರಿಂದ ನಿದ್ದೆಯಿಂದ ಎದ್ದ ಕೆಲವರು ಉಳಿದವರನ್ನೂ ಎಬ್ಬಿಸಿ, ಮನೆಯಿಂದ ಹೊರಗೆ ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ.

ಇದನ್ನೂ ಓದಿ:

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು, ಬೆಂಕಿ ನಂದಿಸುವಷ್ಟರಲ್ಲಿ ವೇಣುಗೋಪಾಲರಿಗೆ ಸೇರಿದ ಐಷಾರಾಮಿ ಮನೆಯ ಬೆಲೆಬಾಳುವ ವಸ್ತುಗಳು, ಟಿವಿ, ರೆಫ್ರಿಜಿರೇಟರ್, ವಾಷಿಂಗ್ ಮಷಿನ್, ಟೇಬಲ್, ಕುರ್ಚಿ, ಕರ್ಟನ್ ಸೇರಿದಂತೆ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿದ್ದವು. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !