September 4, 2026
Friday, September 4, 2026
spot_img

ಭಾರತ ನಮಗೆ ನೆರವು ನೀಡಿದೆ ಆದರೆ ನಾವು ಯಾವುದೇ ರೀತಿಯ ಪರಿಹಾರ ಕೇಳಿಲ್ಲ : ನೇಪಾಳ ಸರ್ಕಾರದಿಂದ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭೀಕರ ಪ್ರಳಯಕ್ಕೆ ತತ್ತರಿಸಿದ್ದ ನೇಪಾಳಕ್ಕೆ ಭಾರತ ನೆರವು ನೀಡಿದೆ. ಆದರೆ ಹಾನಿ ತುಂಬಿಕೊಡುವಂತೆ, ಪರಿಹಾರ ನೀಡುವಂತೆ ಯಾವುದೇ ದೇಶದ ಬಳಿ ನಾವು ಆರ್ಥಿಕ ಪರಿಹಾರವನ್ನು ಕೇಳಿಲ್ಲ ಎಂದು ನೇಪಾಳ ಸರ್ಕಾರ ಸ್ಪಷ್ಟಪಡಿಸಿದೆ.

ಭಾರತ, ಚೀನಾ, ಅಮೆರಿಕದಂತಹ ದೊಡ್ಡ ದೇಶಗಳಿಂದ ನೇಪಾಳ ಹವಾಮಾನ ಪರಿಹಾರ ಕೇಳಿದೆ ಎನ್ನುವ ಸುದ್ದಿಗಳು ಹರಿದಾಡಿದ್ದು, ಇದಕ್ಕೆ ನೇಪಾಳದ ವಿದೇಶಾಂಗ ಸಚಿವ ಶಿಸಿರ್‌ ಖನಾಲ್‌ ಸ್ಪಷ್ಟನೆ ನೀಡಿದ್ದಾರೆ. ನಾನಾಗಲಿ ನಮ್ಮ ದೇಶದೇ ಯಾರೇ ಆಗಲಿ, ಸರ್ಕಾರವೇ ಆಗಲಿ ಯಾರ ಬಳಿಯೂ ಪರಿಹಾರ ಕೊಡಿ ಎಂದು ಕೇಳಿಲ್ಲ ಎಂದು ಹೇಳಿದ್ದಾರೆ.

ಪರಿಹಾರ ಧನ ಕೊಡಿ ಎಂದು ಕೇಳಿಲ್ಲ

ನೇಪಾಳ ಸರ್ಕಾರದಿಂದ ಯಾವುದೇ ದೇಶಕ್ಕೆ ಪರಿಹಾರ ಕೊಡುವಂತೆ ಮನವಿ ಮಾಡಿದ್ದಕ್ಕೆ ದಾಖಲೆ ಇದೆಯೇ? ನಾವು ಆ ಕೆಲಸ ಮಾಡಿಯೇ ಇಲ್ಲ. ಈ ಸುದ್ದಿಗಳು ಆಧಾರರಹಿತವಾಗಿದೆ. ನಾವು ಈ ದುರಂತವನ್ನು ಹವಾಮಾನ ಬದಲಾವಣೆ ಹಾಗೂ ಅದರ ಪರಿಣಾಮದ ದೃಷ್ಟಿಕೋನದಿಂದ ಜಾಗತಿಕ ಸಮುದಾಯ ನೋಡಬೇಕು ಎಂದಷ್ಟೇ ಹೇಳಿದ್ದೇವೆ ಎಂದಿದ್ದಾರೆ. ಇದು ಕಷ್ಟದ ಸಮಯ. ಈಗ ರಾಜತಾಂತ್ರಿಕ ಭಿನ್ನಾಭಿಪ್ರಾಯಗಳಿಗಿಂತ ಒಟ್ಟಾಗಿರುವುದು ಮುಖ್ಯ ಎಂದಿದ್ದಾರೆ.

ಹಿಮಾಲಯ ಪ್ರದೇಶದ ದೇಶಗಳ ಗಮನಕ್ಕೆ..

ಹಿಮಾಲಯ ಪ್ರದೇಶದ ದೇಶಗಳು ಒಂದೇ ರೀತಿಯ ಪರಿಸರ ವ್ಯವಸ್ಥೆಯನ್ನು ಹಂಚಿಕೊಂಡಿವೆ. ಹೀಗಾಗಿ ಬೇರೆ ವಿಷಯಗಳಿಗಿಂತ ಮುಂಜಾಗ್ರತಾ ಕ್ರಮಗಳು ಹಾಗೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಬಗ್ಗೆ ಗಮನ ನೀಡುವುದು ಉತ್ತಮವಾಗಿದೆ. ಚೀನಾ, ಭಾರತ ಹಾಗೂ ನೇಪಾಳದಲ್ಲಿ ಒಂದೇ ರೀತಿಯ ಪರಿಸರ ವ್ಯವಸ್ಥೆ ಇದೆ. ಹವಾಮಾನ ಬದಲಾವಣೆಯ ಪರಿಣಾಮವನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ನೂರೂ ದೇಶಗಳಲ್ಲಿ ಒಗ್ಗಟ್ಟಿರಬೇಕು ಎಂದಿದ್ದಾರೆ.

ಭಾರತಕ್ಕೆ ಧನ್ಯವಾದ

ಪ್ರವಾಹದಿಂದ ನೇಪಾಳ ಜರ್ಜರಿತವಾದ ಬೆನ್ನಲ್ಲೇ ಭಾರತ ತಕ್ಷಣವೇ ಪರಿಹಾರ ಹಾಗೂ ರಕ್ಷಣಾ ನೆರವು ನೀಡಿದೆ. ಇದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಹಿಮಾಲಯ ಪ್ರದೇಶ ಎದುರಿಸುತ್ತಿರುವ ಹವಾಮಾನ ಸವಾಲುಗಳನ್ನು ಎದುರಿಸಲು ಪ್ರಾದೇಶಿಕ ಸಹಕಾರ ಅಗತ್ಯವಿದೆ. ನಮ್ಮ ನಾಗರಿಕತೆ, ಪರಂಪರೆ, ಸಂಸ್ಕೃತಿ ಮತ್ತು ಭವಿಷ್ಯವನ್ನು ಒಟ್ಟಾಗಿ ರಕ್ಷಿಸಲು ನಾವು ಸಹಕರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !