September 4, 2026
Friday, September 4, 2026
spot_img

Alert Ladies | ಸ್ಟೈಲಾಗಿ ‘ಹೇರ್ ಕ್ಲಚ್ಚರ್’ ಹಾಕ್ಕೊಂಡು ಡ್ರೈವ್ ಮಾಡ್ತೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು..

ಇತ್ತೀಚೆಗೆ ಹೆಣ್ಣುಮಕ್ಕಳು, ಕಾಲೇಜು ಹುಡುಗಿಯರು ಅಷ್ಟೇ ಯಾಕೆ, ಮನೆಯಲ್ಲಿರೋ ಅಮ್ಮ-ಅಕ್ಕಂದಿರು ಕೂಡ ತಲೆಕೂದಲು ಅಚ್ಚುಕಟ್ಟಾಗಿ ಇರಲಿ ಅಥವಾ ಸರಿಮಾಡಿಕೊಳ್ಳೋಕೆ ಟೈಮ್ ಇಲ್ಲ ಎಂದು ‘ಹೇರ್ ಕ್ಲಚ್ಚರ್’ ಬಳಸುವುದು ಸಾಮಾನ್ಯವಾಗಿದೆ. ಕೂದಲನ್ನು ಸುರುಳಿ ಸುತ್ತಿ, ಒಂದು ಕ್ಲಿಪ್ ಹಾಕಿಬಿಟ್ಟರೆ ಕೆಲಸ ಮುಗಿಯಿತು. ಮನೆ ಕೆಲಸ ಮಾಡುವಾಗ, ಜಿಮ್‌ಗೆ ಹೋಗುವಾಗ, ಆಫೀಸ್‌ಗೆ ಹೊರಡುವಾಗ, ಕೊನೆಗೆ ಮಲಗುವಾಗ ಕೂಡ ತಲೆಗೆ ಕ್ಲಚರ್ ಇರಲೇಬೇಕು.

ನೋಡೋಕೆ ಇದು ತುಂಬಾ ಕಂಫರ್ಟಬಲ್ ಮತ್ತು ಈಜಿ ಅನಿಸಬಹುದು. ಆದರೆ, ಡಾಕ್ಟರ್‌ಗಳು ಈಗ ಇದರ ಬಗ್ಗೆ ದೊಡ್ಡ ಎಚ್ಚರಿಕೆ ಕೊಡ್ತಿದ್ದಾರೆ. ನಾವು ಪ್ರತಿದಿನ ಸಣ್ಣ ವಿಷಯ ಎಂದು ನಿರ್ಲಕ್ಷ್ಯ ಮಾಡೋ ಈ ಅಭ್ಯಾಸ, ಕೂದಲಿಗೆ ಮತ್ತು ಆರೋಗ್ಯಕ್ಕೆ ಎಷ್ಟೊಂದು ತೊಂದರೆ ತರಬಹುದು ಗೊತ್ತಾ?

ಈ ತಪ್ಪು ಮಾಡ್ಲೆ ಬೇಡಿ

ನಾವು ಕ್ಲಚ್ಚರ್ ಹಾಕಿದಾಗ ಕೂದಲನ್ನು ಗಟ್ಟಿಯಾಗಿ ಮೇಲಕ್ಕೆ ಎಳೆದು ಹಿಡಿದು ಕ್ಲಿಪ್ ಹಾಕ್ತೀವಿ. ಇದರಿಂದ ಕೂದಲಿನ ಬೇರುಗಳ ಮೇಲೆ ಸದಾಕಾಲ ಒತ್ತಡ ಬಿದ್ದು, ಅವು ದುರ್ಬಲಗೊಳ್ಳುತ್ತವೆ. ದಿನವಿಡೀ ಹಿಂಗೆ ಎಳೆದು ಕಟ್ಟೋದ್ರಿಂದ ‘ಟ್ರಾಕ್ಷನ್ ಅಲೋಪೆಸಿಯಾ’ ಅನ್ನೋ ಸಮಸ್ಯೆ ಬರುತ್ತೆ. ಅಂದರೆ, ಎದುರು ಭಾಗದ ಹಣೆಯ ಹತ್ತಿರ ಕೂದಲು ಉದುರಿ, ಹಣೆ ಅಗಲವಾಗುತ್ತಾ ಹೋಗುತ್ತದೆ. ಒಮ್ಮೆ ಬೇರುಗಳು ಪೂರ್ತಿ ಹಾಳಾದರೆ ಅಲ್ಲಿ ಮತ್ತೆ ಕೂದಲು ಬರೋದೇ ಇಲ್ಲ.

ಲೋ ಕ್ವಾಲಿಟಿ, ಹೈ ರಿಸ್ಕ್

ನಾವು ಮಾರ್ಕೆಟ್‌ನಲ್ಲಿ ಸಿಗುವ ಅಗ್ಗದ ಪ್ಲಾಸ್ಟಿಕ್ ಅಥವಾ ಫ್ಯಾನ್ಸಿ ಕ್ಲಚರ್‌ಗಳನ್ನು ತಗೊಳ್ತೀವಿ. ಅವುಗಳ ಹಲ್ಲುಗಳು ತುಂಬಾ ಹರಿತವಾಗಿರುತ್ತವೆ. ಕೂದಲಿಗೆ ಗಟ್ಟಿಯಾಗಿ ಹಿಡಿತ ಸಿಗಲಿ ಎಂದು ಅವುಗಳನ್ನು ಹಾಕ್ತೀವಿ. ಆದರೆ ಇವು ಕೂದಲಿನ ಮೇಲಿರುವ ನೈಸರ್ಗಿಕ ರಕ್ಷಣಾ ಪದರವನ್ನು ಹಾಳುಮಾಡುತ್ತವೆ. ಇದರಿಂದ ಕೂದಲು ಮಧ್ಯದಲ್ಲೇ ಮುರಿದು ಬೀಳುವುದು, ತುದಿಯಲ್ಲಿ ಸೀಳಿಕೊಳ್ಳುವುದು ಹೆಚ್ಚಾಗುತ್ತದೆ.

ತಲೆನೋವು ಗ್ಯಾರಂಟಿ

ಬೆಳಗ್ಗಿನಿಂದ ಸಂಜೆಯವರೆಗೆ ತಲೆಗೆ ಕ್ಲಚ್ಚರ್ ಹಾಕ್ಕೊಂಡಿದ್ದರೆ, ತಲೆಯ ನರಗಳು ಮತ್ತು ನೆತ್ತಿಯ ಮೇಲಿರುವ ಚರ್ಮದ ಮೇಲೆ ಸತತ ಒತ್ತಡ ಇರುತ್ತದೆ. ಇದರಿಂದ ಕೆಲವರಿಗೆ ಸಂಜೆಯಾಗುತ್ತಿದ್ದಂತೆ ತಲೆ ಎಳೆದು ಹಿಡಿದಂತಾಗಿ ತಲೆನೋವು ಬರುತ್ತದೆ. ನಿರಂತರವಾಗಿ ಮೈಗ್ರೇನ್‌ನಿಂದ ಬಳಲುವವರಿಗಂತೂ ಇದು ಇನ್ನು ಹೆಚ್ಚಿನ ತೊಂದರೆ ಕೊಡುತ್ತದೆ.

ಆಕ್ಸಿಡೆಂಟ್ ಆದ್ರೆ ಪ್ರಾಣಕ್ಕೇ ಕಂಟಕ

ಇದಂತೂ ಎಲ್ಲರಿಗೂ ಗೊತ್ತಿರಲೇಬೇಕಾದ ಮುಖ್ಯ ವಿಚಾರ. ಕಾರ್‌ನಲ್ಲಿ ಹೋಗುವಾಗ ಅಥವಾ ಹೆಲ್ಮೆಟ್ ಇಲ್ಲದೆ ಸ್ಕೂಟರ್‌ನಲ್ಲಿ ಕೂತಿದ್ದಾಗ, ತಲೆ ಹಿಂಭಾಗದಲ್ಲಿ ಕ್ಲಚ್ಚರ್ ಇದ್ದರೆ ಅಕಸ್ಮಾತ್ ಗಾಡಿ ಸ್ಕಿಡ್ ಆಗಿ ಬಿದ್ದರೆ ಅಥವಾ ಬಂಪ್ ಆದಾಗ, ಆ ಗಟ್ಟಿಯಾದ ಪ್ಲಾಸ್ಟಿಕ್ ಹಲ್ಲುಗಳು ತಲೆಯ ಹಿಂಭಾಗಕ್ಕೆ ಚುಚ್ಚಿ ದೊಡ್ಡ ಗಾಯವಾಗುವ ಅಥವಾ ತಲೆಬುರುಡೆಗೆ ಪೆಟ್ಟಾಗುವ ಅಪಾಯ ಇರುತ್ತದೆ.

ಹಾಗಾದ್ರೆ ಏನು ಮಾಡಬೇಕು?

ಕಾರು, ಬೈಕ್ ಅಥವಾ ಬಸ್ಸಿನಲ್ಲಿ ಪ್ರಯಾಣಿಸುವಾಗ ತಲೆಯ ಹಿಂಭಾಗದಲ್ಲಿ ದಪ್ಪನೆಯ ಪ್ಲಾಸ್ಟಿಕ್/ಮೆಟಲ್ ಕ್ಲಚ್ಚರ್ ಹಾಕಿಕೊಳ್ಳಬೇಡಿ.

ಕ್ಲಚ್ಚರ್ ಬದಲಿಗೆ ಸಾಫ್ಟ್ ಆಗಿರುವ ಕಾಟನ್ ‘ಸ್ಕ್ರಂಚಿ’ ಅಥವಾ ರಬ್ಬರ್ ಬ್ಯಾಂಡ್ ಬಳಸಿ ಸಡಿಲವಾಗಿ ಜುಟ್ಟು ಕಟ್ಟಿಕೊಳ್ಳಿ.

ಮನೆಗೆ ಬಂದ ಮೇಲೆ ಅಥವಾ ನಿದ್ರೆ ಮಾಡುವಾಗ ಕೂದಲನ್ನು ಫ್ರೀಯಾಗಿ ಬಿಡಿ. ತಲೆಚರ್ಮಕ್ಕೂ ಗಾಳಿ-ಬೆಳಕು ಸಿಗಲಿ.

ಫ್ಯಾಷನ್ ಮಾಡುವುದು ತಪ್ಪಲ್ಲ, ಆದರೆ ಅದು ನಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕೆ ಕುತ್ತು ತರಬಾರದು. ಇನ್ಮುಂದೆ ಕ್ಲಚರ್ ಹಾಕೋ ಮುನ್ನ ಸ್ವಲ್ಪ ಎಚ್ಚರಿಕೆಯಿಂದ ಇರಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !