September 4, 2026
Friday, September 4, 2026
spot_img

Food | ರೆಸ್ಟೋರೆಂಟ್ ಶೈಲಿಯ ಪನೀರ್ ಪಾಲಕ್ ರೈಸ್.. ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕು ಅನ್ಸುತ್ತೆ!

ದಿನಾ ಅದೇ ಅನ್ನ ಸಾಂಬಾರ್, ರಸಂ ತಿಂದು ಬೇಸರವಾಗಿದ್ಯಾ? ರಾತ್ರಿ ಡಿನ್ನರ್‌ಗೆ ಅಥವಾ ಮಧ್ಯಾಹ್ನದ ಲಂಚ್‌ಬಾಕ್ಸ್‌ಗೆ ಏನಾದ್ರೂ ಸ್ಪೆಷಲ್ ಹಾಗೂ ಹೆಲ್ತಿಯಾಗಿ ಮಾಡ್ಬೇಕು ಎಂದು ಯೋಚನೆ ಮಾಡ್ತಿದ್ರೆ, ಈ ಪನೀರ್ ಪಾಲಕ್ ರೈಸ್ ಬೆಸ್ಟ್ ಆಪ್ಷನ್:

ಅನ್ನ

ಪನೀರ್

ಪಾಲಕ್ ಸೊಪ್ಪು

ಈರುಳ್ಳಿ

ಹಸಿಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಖಾರದ ಪುಡಿ

ಗರಂ ಮಸಾಲ

ಜೀರಿಗೆ ಹಾಗೂ ಸಾಸಿವೆ

ಎಣ್ಣೆ ಅಥವಾ ತುಪ್ಪ

ಉಪ್ಪು

ಲಿಂಬೆರಸ

ಮೊದಲು ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದಕ್ಕೆ ತೊಳೆದ ಪಾಲಕ್ ಸೊಪ್ಪು ಹಾಕಿ 2 ನಿಮಿಷ ಬೇಯಿಸಿ. ತಕ್ಷಣ ಅದನ್ನು ತಣ್ಣೀರಿಗೆ ಹಾಕಿ. ನಂತರ ನೀರು ಬಸೇದು, ಹಸಿಮೆಣಸಿನಕಾಯಿ ಜೊತೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಬಾಣಲೆಯಲ್ಲಿ 1 ಚಮಚ ತುಪ್ಪ ಅಥವಾ ಎಣ್ಣೆ ಹಾಕಿ, ಕಟ್ ಮಾಡಿದ ಪನೀರ್ ತುಂಡುಗಳನ್ನು ಗೋಲ್ಡನ್ ಕಲರ್ ಬರೋವರೆಗೆ ಫ್ರೈ ಮಾಡಿ ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ಅದೇ ಬಾಣಲೆಗೆ ಇನ್ನಷ್ಟು ಎಣ್ಣೆ ಹಾಕಿ, ಜೀರಿಗೆ, ಸಾಸಿವೆ ಹಾಕಿ ಸಿಡಿಸಿ. ನಂತರ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗೋವರೆಗೆ ಬಾಡಿಸಿ. ಈಗ ರುಬ್ಬಿಟ್ಟುಕೊಂಡ ಪಾಲಕ್ ಪೇಸ್ಟ್, ಖಾರದ ಪುಡಿ, ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎಣ್ಣೆ ಬಿಟ್ಟುಕೊಳ್ಳುವವರೆಗೆ 3-4 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
ಈಗ ಫ್ರೈ ಮಾಡಿಟ್ಟುಕೊಂಡ ಪನೀರ್ ತುಂಡುಗಳು ಮತ್ತು ಮುಂಚೆಯೇ ಮಾಡಿಟ್ಟುಕೊಂಡ ಅನ್ನವನ್ನು ಹಾಕಿ, ಮಸಾಲಾ ಅನ್ನಕ್ಕೆ ಚೆನ್ನಾಗಿ ಹಿಡಿಯುವಂತೆ ಮಿಕ್ಸ್ ಮಾಡಿ. ಕೊನೆಯಲ್ಲಿ ಮೇಲಿಂದ ಸ್ವಲ್ಪ ನಿಂಬೆರಸ ಹಿಂಡಿ, ಬಿಸಿಯಾಗಿರುವಾಗಲೇ ರೈತಾ ಜೊತೆ ಸರ್ವ್ ಮಾಡಿ.

ಬಿಸಿಬಿಸಿಯಾದ, ಹೋಟೆಲ್ ಶೈಲಿಯ ಪನೀರ್ ಪಾಲಕ್ ರೈಸ್ ಈಗ ಸವಿಯಲು ಸಿದ್ಧ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !