ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಅಮೆರಿಕ ಯುದ್ಧ ಯಾವುದೇ ಕಾರಣಕ್ಕೂ ಮುಗಿಯುವ ಸೂಚನೆ ಸಿಗುತ್ತಿಲ್ಲ. ಈಗ ಮತ್ತೆ ಇರಾನ್ ನ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪದ ಪಕ್ಕದಲ್ಲೇ ತೈಲ ಟ್ಯಾಂಕರ್‌ವೊಂದರ ಮೇಲೆ ಅಮೆರಿಕ ಕ್ಷಿಪಣಿ ದಾಳಿ ಮಾಡಿದೆ ಎನ್ನಲಾಗಿದೆ.
ಇರಾನ್‌ನ ಸ್ಟೂಡೆಂಟ್ ನ್ಯೂಸ್ ಏಜೆನ್ಸಿ ಅರೆ-ಅಧಿಕೃತ ತಸ್ನೀಮ್ ಸುದ್ದಿ ಸಂಸ್ಥೆ ಟ್ಯಾಂಕರ್‌ಗೆ ನಾಲ್ಕು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ವರದಿ ಮಾಡಿದೆ. ಖಾರ್ಗ್ ದ್ವೀಪದ ಲಂಗರು ಹಾಕುವ ಪ್ರದೇಶದಲ್ಲೇ ದಾಳಿ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇರಾನ್ ನಿಂದ ಅಧಿಕೃತ ಹೇಳಿಕೆ ಬಂದಿಲ್ಲ
ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇರಾನ್ ಸರ್ಕಾರ ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ. ಅಮೆರಿಕದ ಸೆಂಟ್ರಲ್ ಕಮಾಂಡ್ ಕೂಡ ವರದಿಗಳ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ:
ಖಾರ್ಗ್ ದ್ವೀಪದಲ್ಲಿ ಸಂಘರ್ಷದ ಭೀತಿ
ಖಾರ್ಗ್ ದ್ವೀಪದ ಸಮೀಪದ ಈ ದಾಳಿ ನಿಜವಾಗಿದ್ದರೆ, ಈಗಾಗಲೇ ಉದ್ವಿಗ್ನವಾಗಿರುವ ಪ್ರದೇಶದಲ್ಲಿ ಮತ್ತಷ್ಟು ಸಂಘರ್ಷದ ಭೀತಿ ಹೆಚ್ಚಿಸುವ ಸಾಧ್ಯತೆಯಿದೆ.
ಫೆಬ್ರವರಿಯಿಂದ ಅಮೆರಿಕ–ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಿದ್ದು ಎರಡೂ ಕಡೆಗಳಿಂದಲೂ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ನಡೆಯುತ್ತಿವೆ. ಈ ದಾಳಿಗಳು ದೇಶವನ್ನು ಮುಂದೆ ಯಾವ ಪರಿಸ್ಥಿತಿಯಲ್ಲಿ ಕೊಂಡೊಯ್ದು ನಿಲ್ಲಿಸಲಿವೆ ಅನ್ನೋದನ್ನು ಕಾದುನೋಡಬೇಕಷ್ಟೇ.



