ಹೊಸದಿಗಂತ ವರದಿ ಗಂಗಾವತಿ:
ಸರ್ಕಾರದ ವೈಫಲ್ಯ ಖಂಡಿಸಿ ಆರಂಭಿಸಿದ ಬಳ್ಳಾರಿ ಚಲೋ ಪಾದಯಾತ್ರೆ ಭಾನುವಾರ ಗಂಗಾವತಿ ನಗರಕ್ಕೆ ಆಗಮಿಸಲಿದ್ದು, ನಗರದಲ್ಲಿ ಬ್ಯಾನರ್ ಗಳು ರಾರಾಜಿಸುತ್ತಿವೆ.
ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಸೇರಿ ನಗರದ ಬಿಜೆಪಿ ನಾಯಕರು, ಮುಖಂಡರು ಗಂಗಾವತಿ ತುಂಬೆಲ್ಲ ಬ್ಯಾನರ್ ಮೂಲಕ ಸ್ವಾಗತ ಕೋರಿದ್ದಾರೆ.
ಕುತಿಗಾಯಿಗಳ ಜತೆ ಸಂವಾದ

ಗಂಗಾವತಿಯ ಮರಳಿ ಗ್ರಾಮದಿಂದ 6 ನೇ ದಿನದ ಪಾದಯಾತ್ರೆ ಆರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬೆಳ್ಳಂಬೆಳಗ್ಗೆ ಕುರಿಗಾಯಿಗಳ ಜತೆ ಸಂವಾದ ನಡೆಸಿದರು. ಈ ವೇಳೆ ಕುರಿಗಾರಿಗಳ ಸಮಸ್ಯೆ ಆಲಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಸೇರಿ ಹಲವರಿದ್ದರು.



