ಹಾಗಲಕಾಯಿ ಎಂದರೆ ಅಬ್ಬಾ ಆ ಕಹಿ ಯಾರು ತಿಂತಾರೆ ಎಂದು ಓಡಿ ಹೋಗುವವರೆ ಜಾಸ್ತಿ ಜನ. ಆದರೆ ಸಿಹಿ, ಖಾರ ಮತ್ತು ಹುಳಿಯನ್ನು ಹದವಾಗಿ ಹಾಕಿ ಮಾಡುವ ಈ ಗೊಜ್ಜು ಎಲ್ಲರಿಗೂ ಇಷ್ಟವಾಗುವುದು ಖಂಡಿತ. ಅದರಲ್ಲೂ ಅನ್ನ, ಚಪಾತಿಗೆ ಇದು ಬೆಸ್ಟ್ ಕಾಂಬಿನೇಷನ್ ಆಗಿದೆ. ಹಾಗಾದ್ರೆ ಈ ಹಾಗಲಕಾಯಿ ಗೊಜ್ಜು ಹೇಗೆ ಮಾಡುವುದೆಂದು ತಿಳಿಯೋಣ ಬನ್ನಿ.
ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ
ಹುಣಸೆಹಣ್ಣು, ಬೆಲ್ಲ
ಒಣ ಕೊಬ್ಬರಿ ತುರಿ
ಕಡಲೆಬೇಳೆ, ಉದ್ದಿನಬೇಳೆ
ಜೀರಿಗೆ ಮತ್ತು ಸಾಸಿವೆ
ಧನಿಯಾ, ಅರಿಶಿನ ಪುಡಿ
ಒಣಮೆಣಸಿನಕಾಯಿ
ಬಿಳಿ ಎಳ್ಳು, ಇಂಗು
ಎಣ್ಣೆ, ಉಪ್ಪು
ಮಾಡುವ ವಿಧಾನ:
ಮೊದಲು ಸಣ್ಣಗೆ ಹೆಚ್ಚಿದ ಹಾಗಲಕಾಯಿಗೆ ಉಪ್ಪು, ಅರಿಶಿನ ಹಾಕಿ 15 ನಿಮಿಷ ಇಟ್ಟು, ನಂತರ ಕೈಯಿಂದ ಚೆನ್ನಾಗಿ ಹಿಂಡಿ ಕಹಿ ನೀರನ್ನು ತೆಗೆಯಬೇಕು. ಬಲಿಕ ಒಂದು ಬಾಣಲೆಯಲ್ಲಿ ಕಡಲೆಬೇಳೆ, ಉದ್ದಿನಬೇಳೆ, ಧನಿಯಾ, ಜೀರಿಗೆ, ಒಣಮೆಣಸಿನಕಾಯಿ, ಎಳ್ಳು ಮತ್ತು ಒಣಕೊಬ್ಬರಿ ಹಾಕಿ ಹುರಿದು, ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಬೇಕು.
ನಂತರ ಅದೇ ಬಾಣಲೆಯಲ್ಲಿ ಸಾಸಿವೆ, ಕರಿಬೇವು ಒಗ್ಗರಣೆ ಮಾಡಿ, ಹಿಂಡಿ ಇಟ್ಟ ಹಾಗಲಕಾಯಿ ಹಾಕಿ ಎಣ್ಣೆಯಲ್ಲೇ 5 ನಿಮಿಷ ಚೆನ್ನಾಗಿ ಹುರಿದು, ಬಳಿಕ ಹುಣಸೆಹಣ್ಣಿನ ರಸ, ಬೆಲ್ಲ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಸಾಫ್ಟ್ ಆಹುವವರೆಗೆ ಬೇಯಲು ಬಿಡಬೇಕು
ಹಾಗಲಕಾಯಿ ಬೆಂದ ಮೇಲೆ ರುಬ್ಬಿದ ಮಸಾಲೆ ಪುಡಿ ಹಾಕಿ, ಗೊಜ್ಜು ಎಣ್ಣೆ ಬಿಡುವವರೆಗೆ 3 ನಿಮಿಷ ಕುದಿಸಿದರೆ ಹಾಗಲಕಾಯಿ ಗೊಜ್ಜು ರೆಡಿ.



