September 6, 2026
Sunday, September 6, 2026
spot_img

30 ದಿನ ಆದ್ರೂ ತಗ್ಗಿಲ್ಲ ಕ್ರೇಜ್: 115 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟ ‘ಹನುಮಾನ್ ಅಂಶ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ಈಗ ಎಲ್ಲಿ ನೋಡಿದ್ರೂ ಒಂದೇ ಸೌಂಡು… ಅದೇ ‘ಹನುಮಾನ್ ಅಂಶ್’. ಥಿಯೇಟರ್‌ಗೆ ಬಂದು ತಿಂಗಳು ಕಳೆಯುತ್ತಾ ಬಂದ್ರೂ ಈ ಭಕ್ತಿ ಪ್ರಧಾನ ಸಿನಿಮಾದ ಕ್ರೇಜ್ ಮಾತ್ರ ಎಳ್ಳಷ್ಟೂ ಕಮ್ಮಿಯಾಗಿಲ್ಲ. ದಿನ ಹೋದಾಗೆಲ್ಲಾ ಜನರ ಕ್ರೇಜ್ ಮತ್ತು ಕಲೆಕ್ಷನ್ ಎರಡು ಡಬಲ್ ಆಗ್ತಿದೆ ಹೊರತು ಎಲ್ಲೂ ಕಮ್ಮಿಯಾಗೋ ಸೂಚನೆಯೇ ಕಾಣಿಸ್ತಿಲ್ಲ.

ನಿನ್ನೆ, 5ನೇ ಶನಿವಾರ ಈ ಸಿನಿಮಾ ಮಾಡಿದ ಕಲೆಕ್ಷನ್ ನೋಡಿ ಇಡೀ ಗಾಂಧಿನಗರವೇ ಶಾಕ್ ಆಗಿದೆ. ಒಂದೇ ದಿನದಲ್ಲಿ ಬರೋಬ್ಬರಿ 16 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿ ತನ್ನದೇ ಹಳೆಯ ರೆಕಾರ್ಡ್ ಬ್ರೇಕ್ ಮಾಡಿದೆ. ಕಳೆದ ಭಾನುವಾರ ಬಂದಿದ್ದ 12 ಕೋಟಿಯನ್ನ ಲೀಲಾಜಾಲವಾಗಿ ದಾಟಿ ಮುನ್ನುಗ್ಗಿದೆ. ಇನ್ನು ಇವತ್ತು ಭಾನುವಾರ ಅಡ್ವಾನ್ಸ್ ಬುಕಿಂಗ್ ನೋಡ್ತಿದ್ರೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಹೌಸ್‌ಫುಲ್ ಬೋರ್ಡ್‌ಗಳು ಎಲ್ಲೆಲ್ಲೂ ರಾರಾಜಿಸುತ್ತಿದ್ದು, ಇವತ್ತೊಂದೇ ದಿನ ಬರೋಬ್ಬರಿ 20 ಕೋಟಿ ಬಾಚಿದ್ರೂ ಅಚ್ಚರಿಯಿಲ್ಲ.

30 ದಿನಗಳ ಯಶಸ್ವಿ ಪ್ರದರ್ಶನ ಮುಗಿಸಿರೋ ಈ ಸಿನಿಮಾ, ಈಗಾಗಲೇ 95.85 ಕೋಟಿ ಜೇಬಿಗೆ ಇಳಿಸಿಕೊಂಡಿದೆ. ಇವತ್ತಿನ ಭಾನುವಾರದ ಕಲೆಕ್ಷನ್ ಸೇರಿದ್ರೆ ಈ ವೀಕೆಂಡ್ ಮುಗಿಯೋದ್ರಲ್ಲಿ ಸಿನಿಮಾ 115 ಕೋಟಿ ಗಡಿ ದಾಟೋದು ಪಕ್ಕಾ.

ಇತ್ತೀಚೆಗೆ ದೊಡ್ಡ ಮಟ್ಟದ ಹೈಪ್ ಜೊತೆ ‘ಮಿರ್ಜಾಪುರ್’ ಸಿನಿಮಾ ಥಿಯೇಟರ್‌ಗೆ ಬಂದಾಗ, ಹನುಮಾನ್ ಅನ್ಶ್ ಕಲೆಕ್ಷನ್ ಸ್ವಲ್ಪ ಡೌನ್ ಆಗಬಹುದು ಅನ್ಕೊಂಡಿದ್ರು. ಆದ್ರೆ ಭಕ್ತರ ಮುಂದೆ ಯಾವ ಗ್ಯಾಂಗ್‌ಸ್ಟರ್ ಆಟನೂ ನಡೆಯಲಿಲ್ಲ. ಮಿರ್ಜಾಪುರ್‌ಗೆ ಕಾಂಪಟೀಷನ್ ಕೊಟ್ಟು, ಈಗ ಹನುಮಾನ್ ಸಿನಿಮಾನೇ ಬಾಕ್ಸ್ ಆಫೀಸ್‌ನಲ್ಲಿ ಕಿಂಗ್ ಆಗಿ ಮೆರೆಯುತ್ತಿದೆ.

ಸಾಮಾನ್ಯವಾಗಿ ಸಿನಿಮಾಗಳು ಮೊದಲ ವಾರದಲ್ಲಿ ಓಡ್ತಾವೆ, ಆಮೇಲೆ ತಣ್ಣಗಾಗ್ತಾವೆ. ಆದ್ರೆ ಈ ಸಿನಿಮಾ ಉಲ್ಟಾ. ದಿನದಿಂದ ದಿನಕ್ಕೆ ಪಿಕ್‌ಅಪ್ ಆಗ್ತಿರೋ ರೀತಿ ನೋಡಿದ್ರೆ, ಬರೀ ಸೂಪರ್ ಹಿಟ್ ಅಲ್ಲ, ‘ಸೂಪರ್ ಬ್ಲಾಕ್‌ಬಸ್ಟರ್’ ಪಟ್ಟಕ್ಕೇರೋದು ಗ್ಯಾರಂಟಿ. ಇದೇ ಹವಾ ಮುಂದುವರಿದ್ರೆ, ಥಿಯೇಟರ್ ರನ್ ಮುಗಿಯೋದ್ರಲ್ಲಿ 200 ಕೋಟಿಯ ಗಡಿ ದಾಟಿದ್ರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ, ‘ಹನುಮಾನ್ ಅಂಶ್’ ಬಾಕ್ಸ್ ಆಫೀಸ್‌ನಲ್ಲಿ ನಿಜವಾದ ಪವಾಡವನ್ನೇ ಸೃಷ್ಟಿಸುತ್ತಿದೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !