ಹೊರಗಡೆ ರೆಸ್ಟೋರೆಂಟ್‌ಗಳಲ್ಲಿ ದುಬಾರಿ ಬೆಲೆ ಕೊಟ್ಟು ಕುಡಿಯುವ ಈ ಪಂಪ್‌ಕಿನ್ ಸೂಪ್ ಅನ್ನು ಮನೆಯಲ್ಲೇ ಸರಳವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದು.
ಸಿಹಿ ಕುಂಬಳಕಾಯಿ
ಈರುಳ್ಳಿ
ಬೆಳ್ಳುಳ್ಳಿ
ಬೆಣ್ಣೆ
ಕಾಳುಮೆಣಸಿನ ಪುಡಿ
ಫ್ರೆಶ್ ಕ್ರೀಮ್
ಉಪ್ಪು
ನೀರು ಅಥವಾ ತರಕಾರಿ ಸ್ಟಾಕ್
ಒಂದು ಪಾತ್ರೆ ಅಥವಾ ಕುಕ್ಕರ್‌ನಲ್ಲಿ ಬಟರ್ ಹಾಕಿ ಕರಗಿಸಿ. ಅದಕ್ಕೆ ಜಜ್ಜಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ, ಹಸಿ ವಾಸನೆ ಹೋಗಿ ತಿಳಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಈಗ ಇದಕ್ಕೆ ಹೆಚ್ಚಿದ ಕುಂಬಳಕಾಯಿ ತುಂಡುಗಳನ್ನು ಸೇರಿಸಿ 2 ನಿಮಿಷ ಕೈಯಾಡಿಸಿ. ನಂತರ 1 ಕಪ್ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ, ಕುಕ್ಕರ್‌ನಲ್ಲಿ 2 ವಿಷಲ್ ಕೂಗಿಸಿ. ಬೆಂದ ಕುಂಬಳಕಾಯಿ ಮಿಶ್ರಣವನ್ನು ಪೂರ್ತಿಯಾಗಿ ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರ್‌ಗೆ ಹಾಕಿ ಪೇಸ್ಟ್‌ನಂತೆ ರುಬ್ಬಿಕೊಳ್ಳಿ.
ಈಗ ಈ ಪೇಸ್ಟ್ ಅನ್ನು ಮತ್ತೆ ಪಾತ್ರೆಗೆ ಹಾಕಿ, ನಿಮಗೆಷ್ಟು ತೆಳ್ಳಗೆ ಬೇಕೋ ಅಷ್ಟು ನೀರು ಸೇರಿಸಿ. ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಅಗತ್ಯವಿದ್ದರೆ ಇನ್ನು ಸ್ವಲ್ಪ ಉಪ್ಪು ಹಾಕಿ 3-4 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಒಲೆಯಿಂದ ಇಳಿಸುವ ಮುನ್ನ ಫ್ರೆಶ್ ಕ್ರೀಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಬಿಸಿ ಬಿಸಿಯಾದ, ಹೊಟೇಲ್ ಶೈಲಿಯ ಕ್ರೀಮಿ ಪಂಪ್‌ಕಿನ್ ಸೂಪ್ ರೆಡಿ!



