ಬರೀ ಮಾವಿನಹಣ್ಣು ತಿಂದು ಬೋರ್ ಆಗಿದ್ರೆ, ಇವತ್ತೇ ಈ ಸೂಪರ್, ಹೆಲ್ದಿ ಮತ್ತೆ ಸಖತ್ ಟೇಸ್ಟಿ ಮ್ಯಾಂಗೋ ಚಿಯಾ ಪುಡಿಂಗ್ ಟ್ರೈ ಮಾಡಿ.
ಚಿಯಾ ಸೀಡ್ಸ್
ಹಾಲು
ಮಾವಿನಹಣ್ಣಿನ ರಸ
ಜೇನುತುಪ್ಪ
ಮಾವಿನಹಣ್ಣು
ಏಲಕ್ಕಿ ಪುಡಿ
ಬಾದಾಮಿ-ಗೋಡಂಬಿ
ಮೊದಲು ಒಂದು ಬೌಲ್ ತಗೊಳ್ಳಿ. ಅದಕ್ಕೆ 4 ಚಮಚ ಚಿಯಾ ಸೀಡ್ಸ್, 1 ಕಪ್ ಹಾಲು, ಮತ್ತೆ ನಿಮ್ಗೆ ಬೇಕಾದಷ್ಟು ಜೇನುತುಪ್ಪ ಹಾಕಿ. ಜೊತೆಗೆ ಒಂದು ಚಿಟಿಕೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಕ್ಸರ್ ಅನ್ನು ಮುಚ್ಚಿಟ್ಟು ಕನಿಷ್ಠ 2 ರಿಂದ 4 ಗಂಟೆ ಫ್ರಿಡ್ಜ್ನಲ್ಲಿಡಿ. ಚಿಯಾ ಸೀಡ್ಸ್ ಹಾಲನ್ನೆಲ್ಲ ಹೀರಿಕೊಂಡು, ದಪ್ಪಗಾಗಿ ಜೆಲ್ಲಿ ಥರ ರೆಡಿಯಾಗುತ್ತೆ. ಒಳ್ಳೆ ಸಿಹಿಯಿರೋ ಮಾವಿನಹಣ್ಣಿನ ಸಿಪ್ಪೆ ತೆಗೆದು, ಮಿಕ್ಸಿ ಜಾರ್ಗೆ ಹಾಕಿ ನೀರು ಹಾಕದೇ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಗಾಜಿನ ಲೋಟ ಅಥವಾ ಬೌಲ್ ತಗೊಳ್ಳಿ. ಕೆಳಗಡೆ ಮೊದಲು ನೆನೆಸಿದ ಚಿಯಾ ಪುಡಿಂಗ್ನ 2-3 ಚಮಚ ಹಾಕಿ. ಅದರ ಮೇಲೆ ರುಬ್ಬಿಟ್ಟಿರೋ ಮಾವಿನ ರಸದ ಲೇಯರ್ ಹಾಕಿ. ಮತ್ತೆ ಅದರ ಮೇಲೆ ಇನ್ನೊಂದು ಲೇಯರ್ ಚಿಯಾ ಪುಡಿಂಗ್ ಹಾಕಿ. ಕೊನೆಯಲ್ಲಿ ಮೇಲೆ ಸಣ್ಣದಾಗಿ ಹೆಚ್ಚಿದ ಮಾವಿನಹಣ್ಣಿನ ಸ್ಲೈಸ್, ಜೊತೆಗೆ ಕಟ್ ಮಾಡಿದ ಬಾದಾಮಿ, ಗೋಡಂಬಿ ಹಾಕಿ.
ಈಗ ಸಖತ್ ಜ್ಯೂಸಿ, ಕ್ರೀಮಿಯಾಗಿರೋ ಮ್ಯಾಂಗೋ ಚಿಯಾ ಪುಡಿಂಗ್ ರೆಡಿ!



