September 6, 2026
Sunday, September 6, 2026
spot_img

ಕ್ಲಬ್‌ನ ಕಿಚನ್‌ನಲ್ಲಿ ಫುಡ್ ಸೇಫ್ಟಿ ರೂಲ್ಸ್‌ಗೆ ಕೊಕ್: ಎಕ್ಸ್‌ಪೈರಿ ಡ್ರಿಂಕ್ಸ್‌, ಲೇಬಲ್‌ ಇಲ್ಲದ ಸೋಡಾ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಆಹಾರದ ಸುರಕ್ಷತೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಆಹಾರದ ಕಲಬೆರಕೆ, ಕೃತಕ ಬಣ್ಣದ ಬಳಕೆ, ಅವಧಿಮೀರಿದ ಆಹಾರಪದಾರ್ಥಗಳ ಬಳಕೆ ಹೀಗೆ ಹತ್ತು ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ, ಇದರ ನಡುವೆ ಬೆಂಗಳೂರಿನ ವಿವೇಕನಗರ ಹಾಕಿ ಕ್ಲಬ್‌ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು ಅಲ್ಲಿನ ಪರಿಸ್ಥಿತಿ ಕಂಡು ಶಾಕ್ ಆಗಿದ್ದಾರೆ.

ಕರ್ನಾಟಕ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ನಡೆಸಿದ ವಿಶೇಷ ತಪಾಸಣೆ ವೇಳೆ ಅವಧಿ ಮೀರಿದ ತಂಪು ಪಾನೀಯಗಳು, ಸರಿಯಾದ ಲೇಬಲ್‌ ಇಲ್ಲದ ಸೋಡಾ ಬಾಟಲಿಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಪಾಸಣೆ ವೇಳೆ ಕ್ಲಬ್‌ನ ಅಡುಗೆಮನೆ ಸ್ವಚ್ಛತೆಯ ಕೊರತೆಯಿಂದ ಕೂಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಇದನ್ನೂ ಓದಿ:

ಅಧಿಕಾರಿಗಳ ಪ್ರಕಾರ, ತಪಾಸಣೆ ವೇಳೆ ಒಟ್ಟು 40 ಬಾಟಲಿ ಅವಧಿ ಮೀರಿದ ತಂಪು ಪಾನೀಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ, ಕಡ್ಡಾಯ FSSAI ಮಾನದಂಡಗಳಿಗೆ ಅನುಗುಣವಾದ ಲೇಬಲ್‌ಗಳಿಲ್ಲದ ಸೋಡಾ ಬಾಟಲಿಗಳೂ ಪತ್ತೆಯಾಗಿವೆ.

ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದ ಹಿನ್ನೆಲೆಯಲ್ಲಿ ಈ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ಬೆಂಗಳೂರಿನ ಸಹಕಾರನಗರದಲ್ಲಿರುವ ಚೇರ್ಮನ್ಸ್ ಕ್ಲಬ್‌ನ ಅಡುಗೆಮನೆಯ ಮೇಲೂ ಆಹಾರ ಸುರಕ್ಷತಾ ವಿಭಾಗ ತಪಾಸಣೆ ನಡೆಸಿತ್ತು. ಅಲ್ಲಿಯೂ ಕೂಡ ಸರಿಯಾದ ಲೇಬಲ್ ಇಲ್ಲದ, ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !