ಪ್ರತಿದಿನ ಅದೇ ಬೇಳೆ ಸಾರು ತಿಂದು ಬೇಸರವಾಗಿದ್ಯಾ? ಇವತ್ತು ನಿಮಗಾಗಿ ಒಂದು ಡಿಫರೆಂಟ್, ಹೆಲ್ತಿ ಮತ್ತು ಸಕ್ಕತ್ ಟೇಸ್ಟಿ ಅಡುಗೆಯ ಪರಿಚಯ ಮಾಡಿಕೊಡ್ತೀವಿ. ಅದೇ “ಹರಿಯಾಲಿ ಮಟಕಿ ಖಿಚಡಿ”:
ಅಕ್ಕಿ
ಮೊಳಕೆ ಬಂದ ಮಟಕಿ (ಮಡಿಕೆ ಕಾಳು)
ಪಾಲಕ್ ಸೊಪ್ಪು
ಕೊತ್ತಂಬರಿ ಸೊಪ್ಪು & ಪುದೀನಾ
ಹಸಿಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ
ಟೊಮೆಟೊ
ಜೀರಿಗೆ, ಸಾಸಿವೆ, ಪಲಾವ್ ಎಲೆ, ಲವಂಗ, ಏಲಕ್ಕಿ
ಅರಿಶಿನ, ಗರಂ ಮಸಾಲೆ, ಇಂಗು
ಎಣ್ಣೆ, ಉಪ್ಪು
ಮೊದಲಿಗೆ ಪಾಲಕ್, ಕೊತ್ತಂಬರಿ, ಪುದೀನಾ ಮತ್ತು ಹಸಿಮೆಣಸಿನಕಾಯಿಯನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಸ್ಮೂತ್ ಆಗಿ ರುಬ್ಬಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ.
ಈಗ ಕುಕ್ಕರ್ ಒಲೆ ಮೇಲೆ ಇಟ್ಟು, 2 ಚಮಚ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಪಲಾವ್ ಎಲೆ, ಲವಂಗ ಹಾಕಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಕೈಯಾಡಿಸಿ. ನಂತರ ಮೊಳಕೆ ಬಂದ ಮಟಕಿ (ಮಡಿಕೆ ಕಾಳು) ಹಾಕಿ 2 ನಿಮಿಷ ಮಸಾಲೆಯೊಂದಿಗೆ ಮಿಕ್ಸ್ ಮಾಡಿ. ಈಗ ಅರಿಶಿನ, ಗರಂ ಮಸಾಲೆ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಿಸಿ. ತೊಳೆದು ಇಟ್ಟುಕೊಂಡ ಅಕ್ಕಿಯನ್ನು ಕುಕ್ಕರ್ಗೆ ಹಾಕಿ. ಅದರ ಜೊತೆಗೆ ಮೊದಲು ರುಬ್ಬಿಟ್ಟುಕೊಂಡ ಪಾಲಕ್-ಕೊತ್ತಂಬರಿ ಹರಿಯಾಲಿ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಮಸಾಲೆ ಅಕ್ಕಿಗೆ ಹಿಡಿಯುವಂತೆ ತಿರುಗಿಸಿ. 1 ಕಪ್ ಅಕ್ಕಿಗೆ ಅಂದಾಜು 3-4 ಕಪ್ ನೀರು ಹಾಕಿ. ಕುಕ್ಕರ್ ಮುಚ್ಚಳ ಮುಚ್ಚಿ 3-4 ವಿಸಿಲ್ ಕೂಗಿಸಿ.
ಕುಕ್ಕರ್ ಪ್ರೆಷರ್ ಇಳಿದ ಮೇಲೆ ಮುಚ್ಚಳ ತೆಗೆದು ನೋಡಿ, ಘಮಘಮಿಸುವ, ಹರಿಯಾಲಿ ಮಟಕಿ ಖಿಚಡಿ ರೆಡಿಯಿರುತ್ತೆ!



