September 7, 2026
Monday, September 7, 2026
spot_img

ಇದು ಸಿನಿಮಾನೇ ಅಲ್ಲ, ಸಾಕ್ಷಾತ್ ದೈವಲೀಲೆ! ‘ಹನುಮಾನ್ ಅಂಶ್’ ನೋಡಿ ಫಿದಾ ಆದ ವರುಣ್ ಧವನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗ ಬಾಲಿವುಡ್‌ನಲ್ಲಿ ಎಲ್ಲಿ ನೋಡಿದ್ರೂ ಒಂದೇ ಮಾತು, ಒಂದೇ ಹವಾ. ಅದೇ ‘ಹನುಮಾನ್ ಅಂಶ್’. ಯಾವೊಬ್ಬ ದೊಡ್ಡ ಸೂಪರ್ ಸ್ಟಾರೂ ಇಲ್ಲ, ಹೈ-ಫೈ ಗ್ಲಾಮರ್ ಇಲ್ಲ, ಕೋಟಿ ಕೋಟಿ ಸುರಿದು ಮಾಡಿರೋ ಅದ್ದೂರಿ ಸೆಟ್ಟೂ ಇಲ್ಲ. ಬರೀ 2 ಕೋಟಿ ಬಜೆಟ್‌ನಲ್ಲಿ ಸೈಲೆಂಟ್ ಆಗಿ ಬಂದ ಈ ಸಿನಿಮಾ, ಇವತ್ತು ಬಾಕ್ಸಾಫೀಸ್‌ನಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಧೂಳೆಬ್ಬಿಸ್ತಿದೆ.

ಈ ಪವರ್‌ಫುಲ್ ಸಿನಿಮಾದ ಗುಂಗಿನಿಂದ ಬಾಲಿವುಡ್ ಮಂದಿ ಇನ್ನು ಆಚೆ ಬಂದಿಲ್ಲ. ಮೊನ್ನೆ ತಾನೇ ಬಾಲಿವುಡ್ ಹೀರೊ ವರುಣ್ ಧವನ್ ತಮ್ಮ ತಾಯಿಯನ್ನು ಜೊತೆಗ ಕರ್ಕೊಂಡು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡ್ಕೊಂಡು ಬಂದಿದ್ದಾರೆ. ಸಿನಿಮಾ ಮುಗಿದು ಆಚೆ ಬರ್ತಿದ್ದಂಗೆ, ಅಬ್ಬಾ… ಏನ್ ಸಿನಿಮಾ ಇದು ಎಂದು ದಿಲ್ ಖುಷ್ ಆಗಿ ತಕ್ಷಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

“ದಯವಿಟ್ಟು ಎಲ್ಲರೂ ಥಿಯೇಟರ್‌ಗೆ ಹೋಗಿ ಈ ‘ಹನುಮಾನ್ ಅಂಶ’ ಸಿನಿಮಾ ನೋಡಿ. ನಾನು ನಮ್ಮ ಅಮ್ಮನ ಜೊತೆ ಹೋಗಿದ್ದೆ, ಸೂಪರ್ ಎಕ್ಸ್‌ಪೀರಿಯನ್ಸ್! ನಿಮಗೂ ಹೇಳ್ತೀನಿ, ನಿಮ್ಮ ಅಪ್ಪ-ಅಮ್ಮ, ಫ್ರೆಂಡ್ಸ್ ಎಲ್ಲರನ್ನೂ ಕರ್ಕೊಂಡು ಹೋಗಿ. ನನಗೆ ಈ ವಿಡಿಯೋ ಮಾಡಿ ಎಂದು ಯಾರೂ ದುಡ್ಡು ಕೊಟ್ಟಿಲ್ಲ, ಫೋನ್ ಮಾಡಿ ಹೇಳಿಲ್ಲ, ನನ್ನಷ್ಟಕ್ಕೆ ನಾನೇ ಮಾಡ್ತಿದ್ದೀನಿ. ಚಿಕ್ಕಂದಿನಿಂದ ನಂಗೆ ಆಂಜನೇಯ ಅಂದ್ರೆ ತುಂಬಾ ಭಕ್ತಿ, ಆದ್ರೆ ಈ ಸಿನಿಮಾ ನೋಡಿದ್ಮೇಲೆ ಆ ಫೀಲಿಂಗೇ ಬೇರೆ. ಇದನ್ನ ಸಿನಿಮಾ ಅನ್ನೋಕಿಂತ ಒಂದು ‘ದೈವಿಕ ಅನುಭವ’ ಎಂದು ಹೇಳಬಹುದು” ಎಂದು ವರುಣ್ ಮನಸಾರೆ ಹೊಗಳಿದ್ದಾರೆ.

ಯಾವ ಪ್ರಚಾರವೂ ಇಲ್ಲದೆ, ಬರೀ ಜನರ ಬಾಯಿಂದ ಬಾಯಿಗೆ ಹರಡಿದ ಸುದ್ದಿ ಇವತ್ತು ಈ ಪುಟ್ಟ ಸಿನಿಮಾನ ಇಷ್ಟೊಂದು ದೊಡ್ಡ ಮಟ್ಟಕ್ಕೆ ತಂದು ನಿಲ್ಲಿಸಿದೆ. ಕಂಟೆಂಟ್ ಚೆನ್ನಾಗಿದ್ರೆ ಜನ ಖಂಡಿತ ಗೆಲ್ಲಿಸ್ತಾರೆ ಅನ್ನೋದಕ್ಕೆ ಈ ‘ಹನುಮಾನ್ ಅಂಶ್’ ಬೆಸ್ಟ್ ಎಕ್ಸಾಂಪಲ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !