September 7, 2026
Monday, September 7, 2026
spot_img

ತೂಕ ಇಳಿಸೋಕೆ ಕಷ್ಟ ಪಡ್ತಿದ್ದೀರಾ? ಈ ‘ವೆಜ್-ಓಟ್ಸ್ ಬ್ರೋತ್’ ಸೂಪ್ ಒಮ್ಮೆ ಕುಡಿದು ನೋಡಿ

ದೇಹಕ್ಕೆ ಲೈಟ್ ಅನಿಸೋ ಹಾಗೂ ಹೊಟ್ಟೆ ಫುಲ್ ಮಾಡೋ ಶಕ್ತಿಶಾಲಿ ಉಪಹಾರ ಬೇಕು ಅನ್ಸಿದ್ರೆ ಈ ವೆಜಿಟೇಬಲ್ ಓಟ್ಸ್ ಬ್ರೋತ್ ಸೂಪರ್ ಆಪ್ಷನ್.

ರೋಲ್ಡ್ ಓಟ್ಸ್

ಕ್ಯಾರೆಟ್, ಬೀನ್ಸ್, ಹಸಿ ಬಟಾಣಿ

ಈರುಳ್ಳಿ

ಟೊಮೆಟೊ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಹಸಿಮೆಣಸಿನಕಾಯಿ

ಪೆಪ್ಪರ್ ಪೌಡರ್

ಜೀರಿಗೆ ಪುಡಿ

ಅರಿಶಿನ ಪುಡಿ

ಸಾಸಿವೆ, ಜೀರಿಗೆ

ಒಣಮೆಣಸಿನಕಾಯಿ

ಕರಿಬೇವು & ಕೊತ್ತಂಬರಿ ಸೊಪ್ಪು

ಎಣ್ಣೆ

ಉಪ್ಪು

ನೀರು

ಒಂದು ಬಾಣಲೆಗೆ ಓಟ್ಸ್ ಹಾಕಿ, ಸಣ್ಣ ಉರಿಯಲ್ಲಿ 2 ನಿಮಿಷ ರೋಸ್ಟ್ ಮಾಡಿ ಪಕ್ಕಕ್ಕೆ ಇಡಿ. ಈಗ ಅದೇ ಪಾತ್ರೆಗೆ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ. ನಂತರ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ. ಆಮೇಲೆ ಟೊಮೆಟೊ, ಸಾಲ್ಟ್, ಅರಿಶಿನ, ಜೀರಿಗೆ ಪುಡಿ ಹಾಕಿ ಟೊಮೆಟೊ ಮೆತ್ತಗಾಗುವ ತನಕ ಬೇಯಿಸಿ. ಈಗ ಹೆಚ್ಚಿಟ್ಟುಕೊಂಡ ಕ್ಯಾರೆಟ್, ಬೀನ್ಸ್, ಬಟಾಣಿ ಹಾಕಿ 2 ನಿಮಿಷ ಬೇಯಿಸಿ.

ಈಗ ಅದಕ್ಕೆ 3 ರಿಂದ 4 ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ತರಕಾರಿಗಳನ್ನು ಬೇಯಲು ಬಿಡಿ. ನೀರು ಕುದಿಯಲು ಶುರುವಾದಾಗ ಹುರಿದಿಟ್ಟುಕೊಂಡ ಓಟ್ಸ್ ಅನ್ನು ಕುದಿಯುವ ನೀರಿಗೆ ಹಾಕಿ ಚೆನ್ನಾಗಿ ಕೈಯಾಡಿಸಿ. ಓಟ್ಸ್ ಬೇಗ ಬೇಯುತ್ತದೆ, ಹಾಗಾಗಿ 3-4 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿದರೆ ಸಾಕು. ಕೊನೆಯಲ್ಲಿ ಪೆಪ್ಪರ್ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ, ಗ್ಯಾಸ್ ಆಫ್ ಮಾಡಿ.

ಈಗ ಬಿಸಿ ಬಿಸಿಯಾದ ವೆಜಿಟೇಬಲ್ ಓಟ್ಸ್ ಬ್ರೋತ್ ಸವಿಯಲು ಸಿದ್ದ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !