ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ಯಾಷನ್ ಲೋಕದಲ್ಲಿ 40 ವರುಷ ಪೂರೈಸುವುದು ಅಂದ್ರೆ ತಮಾಷೆಯ ಮಾತಲ್ಲ. ಭಾರತದ ಅತ್ಯಂತ ಪ್ರಸಿದ್ಧ ಡಿಸೈನರ್ ಜೋಡಿ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ತಮ್ಮ 40 ವರುಷದ ಫ್ಯಾಷನ್ ಜರ್ನಿಯನ್ನು ಭರ್ಜರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮಕ್ಕೆ ಬಾಲಿವುಡ್ ಮಂದಿ ಹಾಗೂ ಫ್ಯಾಷನ್ ವರ್ಲ್ಡ್‌ನ ದಿಗ್ಗಜರು ಮಿಂಚಿದ್ದಾರೆ. ಅದ್ರಲ್ಲೂ ಅಂಬಾನಿ ಫ್ಯಾಮಿಲಿಯ ಲೇಡೀಸ್ ಬಂದಿದ್ದೇ ತಡ, ಕ್ಯಾಮೆರಾ ಕಣ್ಣುಗಳೆಲ್ಲ ಅವರ ಮೇಲೆಯೇ ನೆಟ್ಟಿದ್ದವು.
ಕಾರ್ಯಕ್ರಮಕ್ಕೆ ನೀತಾ ಅಂಬಾನಿ ಅವರು ತಮ್ಮ ಮಗಳು ಇಶಾ ಅಂಬಾನಿ, ಸೊಸೆಯಂದಿರಾದ ಶ್ಲೋಕಾ ಹಾಗೂ ರಾಧಿಕಾ ಮರ್ಚೆಂಟ್ ಜೊತೆ ಎಂಟ್ರಿ ಕೊಟ್ಟರು. ಪ್ರತಿಯೊಬ್ಬರ ಡ್ರೆಸ್ಸಿಂಗ್ ಸೆನ್ಸ್ ನೋಡುಗರನ್ನು ಹುಬ್ಬೇರಿಸುವಂತಿತ್ತು.

ಅಂಬಾನಿ ಲೇಡೀಸ್ ಫ್ಯಾಷನ್ ಜಾದೂ
ನೀತಾ ಅಂಬಾನಿ ಕಡು ಕೆಂಪು ಬಣ್ಣದ ಕ್ಲಾಸಿಕ್ ಸೀರೆಯಲ್ಲಿ ಬಂದು ಪಕ್ಕಾ ಟ್ರೆಡಿಷನಲ್ ರಾಯಲ್ ಲುಕ್ ಕೊಟ್ಟರು. ಮಗಳು ಇಶಾ ಅವರು ಚಂದದ ಬೆಳ್ಳಿ-ಬಿಳಿ ಬಣ್ಣದ ಸಿಲ್ವರ್ ಶೈನಿಯಿಂಗ್ ಗೌನ್ ಮಾದರಿಯ ಡ್ರೆಸ್‌ನಲ್ಲಿ ಕಂಗೊಳಿಸಿದರು. ಅದಕ್ಕೆ ತಕ್ಕಂತೆ ಕತ್ತಿನಲ್ಲಿ ಡೈಮಂಡ್ ನೆಕ್ಲೇಸ್ ಹಾಕಿ ಸಿಂಪಲ್ ಆಗಿ ಗ್ರ್ಯಾಂಡ್ ಲುಕ್ ತಂದಿದ್ದರು. ಸೊಸೆಯಾದ ಶ್ಲೋಕಾ ಮೆಹ್ತಾ ಐವರಿ ಮತ್ತು ಗೋಲ್ಡ್ ಕಾಂಬಿನೇಷನ್ ಡ್ರೆಸ್‌ನಲ್ಲಿ ಕ್ಲಾಸ್ ಆಗಿ ಕಾಣಿಸಿಕೊಂಡರು. ಅಗಲವಾದ ಗೋಲ್ಡನ್ ಬಾರ್ಡರ್ ಇದ್ದ ದುಪಟ್ಟಾ ಅವರ ಸಾಂಪ್ರದಾಯಿಕ ಶೈಲಿಗೆ ಬೆಸ್ಟ್ ಟಚ್ ನೀಡಿತ್ತು. ರಾಧಿಕಾ ಮರ್ಚೆಂಟ್ ವೈಟ್ ಮತ್ತು ಪರ್ಪಲ್ ಕಾಂಬಿನೇಷನ್‌ನ ಫ್ಲೋರಲ್ ವರ್ಕ್ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ, ಡಿಫರೆಂಟ್ ಆಗಿ ಕಂಗೊಳಿಸುತ್ತಿದ್ದರು.

ಬಾಲಿವುಡ್ ತಾರೆಯರ ಮೆರಗು
ಕೇವಲ ಅಂಬಾನಿ ಕುಟುಂಬ ಮಾತ್ರವಲ್ಲದೆ ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳು ಈ ಈವೆಂಟ್‌ಗೆ ಆಗಮಿಸಿದ್ದರು. ಹಿರಿಯ ನಟಿಯರಾದ ಡಿಂಪಲ್ ಕಾಪಾಡಿಯಾ, ಆಶಾ ಪರೇಖ್ ಮತ್ತು ನಟಿ ಮಧೂ ಷಾ ತಮ್ಮ ಹಳೆಯ ದಿನಗಳ ಗ್ಲಾಮರ್ ನೆನಪಿಸುವಂತೆ ಆಗಮಿಸಿದರು. ಇನ್ನು ಬಾಲಿವುಡ್ ಫ್ಯಾಷನ್ ಐಕಾನ್ ಸೋನಮ್ ಕಪೂರ್ ತಮ್ಮದೇ ಆದ ಸೈಲ್‌ನಲ್ಲಿ ಮಿಂಚಿದರೆ, ನಟ ಅಲಿ ಫಜಲ್ ಹಾಗೂ ಅವರ ಧರ್ಮಪತ್ನಿ ರಿಚಾ ಚಡ್ಡಾ ಜೋಡಿಯಾಗಿ ಬಂದು ಗಮನ ಸೆಳೆದರು. ನಟ ರಾಹುಲ್ ದೇವ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


40 ವರುಷಗಳ ಫ್ಯಾಷನ್ ಕೈಚಳಕ
ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅಂದ್ರೆ ನೆನಪಾಗುವುದೇ ನಮ್ಮ ಭಾರತದ ನೈಜ ಜರ್ದೋಜಿ, ಚಿಕ್ಕನ್‌ಕಾರಿ, ರೇಷ್ಮೆ ಹಾಗೂ ಮಿರರ್ ವರ್ಕ್ಸ್. ಕಳೆದ ನಾಲ್ಕು ದಶಕಗಳಿಂದ ನಮ್ಮ ದೇಶದ ಸಾಂಪ್ರದಾಯಿಕ ನೇಯ್ಗೆ ಮತ್ತು ಎಂಬ್ರಾಯ್ಡರಿ ಕಲೆಯನ್ನು ಆಧುನಿಕ ಟ್ರೆಂಡ್‌ಗೆ ತಕ್ಕಂತೆ ಬದಲಾಯಿಸಿ, ಜಗತ್ತಿನಾದ್ಯಂತ ಹೆಮ್ಮೆ ತಂದಿದ್ದಾರೆ. ಈ 40ನೇ ವರುಷದ ಸಂಭ್ರಮವು ಕೇವಲ ಪಾರ್ಟಿಯಾಗಿರದೆ, ಭಾರತೀಯ ಉಡುಪುಗಳ ಶ್ರೀಮಂತಿಕೆಗೆ ಸಾಕ್ಷಿಯಾಯಿತು.



