October 23, 2026
Friday, October 23, 2026
spot_img

ಡ್ರೋನ್, ಎಐ ಯುದ್ಧಕ್ಕೆ ಭಾರತೀಯ ಸೇನೆ ಸಜ್ಜು: ಹೊಸ ‘ಭೂ ಸಮರ ಸಿದ್ಧಾಂತ’ ಬಿಡುಗಡೆ ಮಾಡಿದ ರಾಜನಾಥ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬದಲಾಗುತ್ತಿರುವ ಯುದ್ಧತಂತ್ರ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆಯನ್ನು ಸಜ್ಜುಗೊಳಿಸುವ ಉದ್ದೇಶದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ‘ಭೂ ಸಮರ ಸಿದ್ಧಾಂತ–2026’ (Land Warfare Doctrine 2026) ಬಿಡುಗಡೆ ಮಾಡಿದ್ದಾರೆ.

ಡ್ರೋನ್‌ಗಳು, ಕೃತಕ ಬುದ್ಧಿಮತ್ತೆ (ಎಐ), ನಿಖರ ದಾಳಿಗಳು ಹಾಗೂ ವಿವಿಧ ಕಾರ್ಯಾಚರಣಾ ವಲಯಗಳ ಸಮನ್ವಯಕ್ಕೆ ಈ ಹೊಸ ಸಿದ್ಧಾಂತದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಭವಿಷ್ಯದ ಯುದ್ಧಕ್ಕೆ ತಂತ್ರಜ್ಞಾನದ ಬಲ

ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದ ದೊರೆತ ಅನುಭವಗಳನ್ನು ಆಧರಿಸಿ ಹೊಸ ಮಾರ್ಗಸೂಚಿ ರೂಪಿಸಲಾಗಿದೆ. ಶತ್ರು ಚಲನವಲನಗಳ ನಿರಂತರ ನಿಗಾ, ಸಂವಹನ ವ್ಯವಸ್ಥೆಗಳ ಮೇಲಿನ ದಾಳಿ, ಮಾನವರಹಿತ ಯುದ್ಧವಿಮಾನಗಳ ಬಳಕೆ ಮತ್ತು ಮಾಹಿತಿ ಸಮರದಂತಹ ಅಂಶಗಳು ಇಂದಿನ ಯುದ್ಧಗಳಲ್ಲಿ ನಿರ್ಣಾಯಕವಾಗುತ್ತಿವೆ. ಇಂತಹ ಸವಾಲುಗಳನ್ನು ಎದುರಿಸಲು ಸೇನೆಯ ಕಾರ್ಯತಂತ್ರ, ತರಬೇತಿ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆ ತರಲು ಈ ಸಿದ್ಧಾಂತ ಒತ್ತು ನೀಡುತ್ತದೆ.

ಇದನ್ನೂ ಓದಿ:

ಆತ್ಮನಿರ್ಭರತೆಗೆ ವಿಶೇಷ ಆದ್ಯತೆ

ದೇಶೀಯ ರಕ್ಷಣಾ ಉತ್ಪಾದನೆ ಹಾಗೂ ಸ್ವಾವಲಂಬನೆಯನ್ನು ಬಲಪಡಿಸುವುದು ಹೊಸ ಸಿದ್ಧಾಂತದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಭವಿಷ್ಯದ ಸಂಘರ್ಷಗಳಲ್ಲಿ ಸೇನೆಯೊಂದೇ ಅಲ್ಲದೆ, ರಾಷ್ಟ್ರೀಯ ಮೂಲಸೌಕರ್ಯ ಮತ್ತು ಇತರ ಸಂಸ್ಥೆಗಳ ಸಹಕಾರವೂ ಅಗತ್ಯ ಎಂಬ ಸಮಗ್ರ ರಾಷ್ಟ್ರೀಯ ದೃಷ್ಟಿಕೋನವನ್ನು ಇದು ಪ್ರತಿಪಾದಿಸುತ್ತದೆ.

ತರಬೇತಿ ವ್ಯವಸ್ಥೆಯಲ್ಲೂ ಬದಲಾವಣೆ

ಬಹುವಲಯ ಕಾರ್ಯಾಚರಣೆಗಳಿಗಾಗಿ ಐದು ವರ್ಷಗಳ ತರಬೇತಿ ರೂಪುರೇಷೆ, ಅಧಿಕಾರಿಗಳಿಗೆ ಮೂರು ಹಂತದ ಎಐ ಕೌಶಲ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಸೇನೆಯ ಎಲ್ಲ ವಿಭಾಗಗಳಲ್ಲೂ ಡ್ರೋನ್ ಕಾರ್ಯಾಚರಣೆಯನ್ನು ಹೆಚ್ಚುವರಿ ಕೌಶಲವಾಗಿ ಬೆಳೆಸುವ ಯೋಜನೆಗಳನ್ನು ಸೇನೆ ಮುಂದುವರಿಸುತ್ತಿದೆ. ಭೂಪ್ರದೇಶ, ಬೆದರಿಕೆ ಮತ್ತು ಕಾರ್ಯಾಚರಣೆಯ ಅಗತ್ಯಕ್ಕೆ ತಕ್ಕಂತೆ ತಂತ್ರ ಬದಲಿಸಲು ಕಮಾಂಡರ್‌ಗಳಿಗೆ ಅವಕಾಶ ಕಲ್ಪಿಸುವುದೂ ಇದರ ಉದ್ದೇಶವಾಗಿದೆ.

2018ರ ಸಿದ್ಧಾಂತಕ್ಕೆ ಹೊಸ ರೂಪ

ಭಾರತೀಯ ಸೇನೆಯ ಹಿಂದಿನ ಭೂ ಸಮರ ಸಿದ್ಧಾಂತವನ್ನು 2018ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಚೀನಾ ಗಡಿಯಲ್ಲಿ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿನ ಉದ್ವಿಗ್ನತೆ ಸೇರಿದಂತೆ ಹಲವು ಬೆಳವಣಿಗೆಗಳು ಭಾರತದ ರಕ್ಷಣಾ ಯೋಜನೆಗಳ ಮೇಲೆ ಪ್ರಭಾವ ಬೀರಿವೆ.

Must Read