September 7, 2026
Monday, September 7, 2026
spot_img

‘ಟಾಕ್ಸಿಕ್’ ಬಾಕ್ಸಾಫೀಸ್ ಕಲೆಕ್ಷನ್ ಕ್ಲೋಸ್: ಭಾರತೀಯ ಸಿನಿಮಾರಂಗದಲ್ಲೇ ಬಿಗ್ ಲಾಸ್ ಸಿನಿಮಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕೆಜಿಎಫ್’ ಸಿನಿಮಾ ಬಂದಾಗ ಇಡೀ ದೇಶವೇ ತಿರುಗಿ ನೋಡಿತ್ತು. ರಾಕಿ ಭಾಯ್ ಅಂದ್ರೆ ಜನ ಹುಚ್ಚೆದ್ದು ಕುಣಿತಿದ್ರು. ಅದೇ ಹವಾ ಇಟ್ಟುಕೊಂಡು ಬಂದಿದ್ದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಮೇಲೆಯೂ ಬೆಟ್ಟದಷ್ಟು ನಿರೀಕ್ಷೆ ಇತ್ತು. ನಿರ್ದೇಶಕಿ ಗೀತು ಮೋಹನ್‌ದಾಸ್, ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಅಂತ ದೊಡ್ಡ ತಾರಾಗಣವೇ ಇತ್ತು. ಆದ್ರೆ, ಥಿಯೇಟರ್‌ಗೆ ಬಂದ್ಮೇಲೆ ಕಥೆಯೇ ಬೇರೆಯಾಯ್ತು.

ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇನೋ ‘ಟಾಕ್ಸಿಕ್’ ಭರ್ಜರಿ ಸೌಂಡ್ ಮಾಡ್ತು. ಮೊದಲ ವಾರದಲ್ಲೇ ಬರೋಬ್ಬರಿ 256.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ಆದ್ರೆ, ಆ ಖುಷಿ ಎರಡನೇ ವಾರಕ್ಕೆ ಇರಲಿಲ್ಲ. ಸೆಕೆಂಡ್ ವೀಕೆಂಡ್ ಬರುವಷ್ಟರಲ್ಲಿ ಕಲೆಕ್ಷನ್ ಬರೋಬ್ಬರಿ ಶೇಕಡಾ 96ರಷ್ಟು ಬಿದ್ದುಹೋಯ್ತು. ಎರಡನೇ ವೀಕೆಂಡ್‌ನಲ್ಲಿ ಬಂದಿದ್ದು 6.75 ಕೋಟಿ ರೂಪಾಯಿ ಮಾತ್ರ. ಅಲ್ಲಿಗೆ ಈವರೆಗಿನ ಒಟ್ಟು ಕಲೆಕ್ಷನ್ ಭಾರತೀಯ ಬಾಕ್ಸಾಫೀಸ್‌ನಲ್ಲಿ ಸುಮಾರು 263 ಕೋಟಿ ರೂಪಾಯಿಗೆ ಬಂದು ನಿಂತಿದೆ.

ದಕ್ಷಿಣ ಭಾರತದಲ್ಲಂತೂ ಈ ಸಿನಿಮಾ ಮೊದಲ ದಿನ ಮಾತ್ರ ಓಡ್ತು, ಆಮೇಲೆ ಕಲೆಕ್ಷನ್ ಪೂರ್ತಿ ಕ್ರ್ಯಾಶ್ ಆಗಿಹೋಯ್ತು. ಸೌತ್‌ನಲ್ಲಿ ಬಿಸಿನೆಸ್ ಮುಗಿದುಹೋಗಿದ್ದರೂ, ಹಿಂದಿ ಡಬ್ ವರ್ಷನ್ ಮಾತ್ರ ಇನ್ನು ಸ್ವಲ್ಪ ಉಸಿರಾಡುತ್ತಿದೆ. ಎಲ್ಲಾ ಮಾರ್ಕೆಟ್‌ನಲ್ಲೂ ಆಟ ಮುಗಿದಿರುವುದರಿಂದ, ಇನ್ಮೇಲೆ ಈ ಸಿನಿಮಾ ಜಾಸ್ತಿ ಅಂದ್ರೆ ಇನ್ನೊಂದು 5 ರಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು. ಅಂದರೆ, ಭಾರತದಲ್ಲಿ ಇದರ ಲೈಫ್‌ಟೈಮ್ ಕಲೆಕ್ಷನ್ 270 ರಿಂದ 275 ಕೋಟಿ ರೂಪಾಯಿಗೆ ಕ್ಲೋಸ್ ಆಗುವ ಲಕ್ಷಣ ಎದ್ದು ಕಾಣುತ್ತಿದೆ.

250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಮೇಲೆಯೂ ಇದನ್ನ ಫ್ಲಾಪ್ ಎಂದು ಯಾಕೆ ಕರೀತಿದ್ದಾರೆ ಗೊತ್ತಾ? ಮೇಲ್ನೋಟಕ್ಕೆ 263 ಕೋಟಿ ದೊಡ್ಡ ಮೊತ್ತದಂತೆ ಕಾಣಬಹುದು, ಆದ್ರೆ ಈ ಸಿನಿಮಾದ ಬಜೆಟ್ ಮತ್ತು ಮೇಕಿಂಗ್ ವೆಚ್ಚ ಅತಿಯಾಗಿತ್ತು. ಅದಕ್ಕಿಂತ ಹೆಚ್ಚಾಗಿ, ಥಿಯೇಟರ್ ಅಲ್ಲದ ಹಕ್ಕುಗಳ ಮಾರಾಟದಲ್ಲೂ ಸಿನಿಮಾ ಅಂದುಕೊಂಡಷ್ಟು ದುಡ್ಡು ಮಾಡಲಿಲ್ಲ. ಇದರಿಂದಾಗಿ ನಿರ್ಮಾಪಕರಿಗೆ ಉಂಟಾಗಿರುವ ನಷ್ಟ ಅಷ್ಟಿಷ್ಟಲ್ಲ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ನಷ್ಟ ಅನುಭವಿಸಿದ ಸಿನಿಮಾಗಳ ಪಟ್ಟಿಗೆ ‘ಟಾಕ್ಸಿಕ್’ ಸೇರುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಒಟ್ಟಿನಲ್ಲಿ, ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ತೀವ್ರ ನಿರಾಶೆ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !