October 9, 2026
Friday, October 9, 2026
spot_img

ಬಾಕ್ಸಾಫೀಸ್‌ನಲ್ಲಿ ಮತ್ತೆ ಸಾಲ್ಗಾಂವ್ಕರ್ ಹವಾ: ಸೆ.9ಕ್ಕೆ ಬರ್ತಿದೆ ‘ದೃಶ್ಯಂ: ದಿ ಕನ್‌ಕ್ಲೂಷನ್’ ಟ್ರೇಲರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಜಯ್ ದೇವಗನ್ ಅವರ ಕ್ರೈಮ್ ಥ್ರಿಲ್ಲರ್ ಸಿನಿಮಾದ ಮೂರನೇ ಭಾಗ, ‘ದೃಶ್ಯಂ: ದಿ ಕನ್‌ಕ್ಲೂಷನ್’ ಬಗ್ಗೆ ಬಿಗ್ ಅಪ್ಡೇಟ್ ಒಂದನ್ನು ಚಿತ್ರತಂಡ ಹೊರಹಾಕಿದೆ. ವಿಜಯ್ ಸಾಲ್ಗಾಂವ್ಕರ್ ಮತ್ತು ಆತನ ಫ್ಯಾಮಿಲಿ ಕಥೆಯ ಕ್ಲೈಮ್ಯಾಕ್ಸ್ ನೋಡೋಕೆ ಕಾಯ್ತಿರೋ ಫ್ಯಾನ್ಸ್‌ಗೆ ಈಗ ಖುಷಿಯ ಸುದ್ದಿ ಸಿಕ್ಕಿದೆ.

ಈ ಸಿನಿಮಾದ ಬಹುನಿರೀಕ್ಷಿತ ಟ್ರೇಲರ್ ಇದೆ ಸೆಪ್ಟೆಂಬರ್ 9 ರಂದು ರಿಲೀಸ್ ಆಗ್ತಿದೆ. ಈ ವಿಷಯವನ್ನು ಖುದ್ದು ಅಜಯ್ ದೇವಗನ್ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಸವಾಲುಗಳು ಇವತ್ತಿಗೂ ಅವೇ ಇವೆ, ಆದ್ರೆ ಉತ್ತರ ಮಾತ್ರ ಇನ್ನು ಹತ್ತಿರದಲ್ಲಿದೆ. ಸೆಪ್ಟೆಂಬರ್ 9ಕ್ಕೆ ಟ್ರೇಲರ್ ಔಟ್!” ಎಂದು ಕ್ಯಾಪ್ಷನ್ ಕೊಟ್ಟು ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದ್ದಾರೆ.

ಅಭಿಷೇಕ್ ಪಾಠಕ್ ನಿರ್ದೇಶನದ ಈ ಸಿನಿಮಾಗೆ ಅಮೀಲ್ ಕಿಯಾನ್ ಖಾನ್ ಮತ್ತು ಪರ್ವೇಜ್ ಶೇಖ್ ಜೊತೆಗೂಡಿ ಕಥೆ ಬರೆದಿದ್ದಾರೆ. ಅಲೋಕ್ ಜೈನ್, ಅಜಿತ್ ಅಂಧಾರೆ, ಕುಮಾರ್ ಮಂಗತ್ ಪಾಠಕ್ ಹಾಗೂ ಅಭಿಷೇಕ್ ಪಾಠಕ್ ನಿರ್ಮಾಣ ಮಾಡಿದ್ದು, ‘ಸ್ಟಾರ್ ಸ್ಟುಡಿಯೋ18’ ಹಾಗೂ ‘ಪನೋರಮಾ ಸ್ಟುಡಿಯೋಸ್’ ಕಡೆಯಿಂದ ಅದ್ದೂರಿಯಾಗಿ ಪ್ರೆಸೆಂಟ್ ಆಗ್ತಿದೆ.

ಇನ್ನು ತಾರಾಗಣದ ವಿಷಯಕ್ಕೆ ಬಂದ್ರೆ, ಅಜಯ್ ದೇವಗನ್ ಜೊತೆಗೆ ಹಳೆಯ ಖಡಕ್ ಪಾತ್ರಗಳಾದ ಟಬು, ಶ್ರಿಯಾ ಶರಣ್, ಇಶಿತಾ ದತ್ತಾ ಮತ್ತು ರಜತ್ ಕಪೂರ್ ಮತ್ತೆ ತೆರೆಮೇಲೆ ಅಬ್ಬರಿಸಲಿದ್ದಾರೆ. ಇದರ ಜೊತೆಗೆ ಈ ಬಾರಿ ಕಥೆಗೆ ಮತ್ತಷ್ಟು ಕಿಕ್ ಕೊಡೋಕೆ ನಟ ಪ್ರಕಾಶ್ ರಾಜ್ ಹಾಗೂ ಜೈದೀಪ್ ಅಹ್ಲಾವತ್ ಕೂಡ ಎಂಟ್ರಿ ಕೊಟ್ಟಿದ್ದಾರೆ.

ಅಕ್ಟೋಬರ್ 2, 2026 ರಂದು ‘ದೃಶ್ಯಂ: ದಿ ಕನ್‌ಕ್ಲೂಷನ್’ ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಗ್ರಾಂಡ್ ರಿಲೀಸ್ ಆಗಲಿದೆ. ಸಾಲ್ಗಾಂವ್ಕರ್ ಕುಟುಂಬದ ರಹಸ್ಯ ಕೊನೆಗೂ ಬಯಲಾಗುತ್ತಾ ಅಥವಾ ವಿಜಯ್ ಮತ್ತೆ ಪೊಲೀಸರಿಗೆ ಮಣ್ಣೆರಚ್ತಾನಾ ಅನ್ನೋದನ್ನು ನೋಡೋಕೆ ಅಕ್ಟೋಬರ್ 2ರವರೆಗೆ ಕಾಯಲೇಬೇಕು.

Must Read