September 8, 2026
Tuesday, September 8, 2026
spot_img

8ನೇ ದಿನಕ್ಕೆ ಕಾಲಿಟ್ಟ ‘ಬಳ್ಳಾರಿ ಚಲೋ’: ಬಿರು ಬಿಸಿಲಿನಲ್ಲಿ ವಿಜಯೇಂದ್ರ ಜತೆ ಹೆಜ್ಜೆ ಹಾಕಿದ ಬಿಜೆಪಿ ನಾಯಕರು

ಹೊಸದಿಗಂತ ವರದಿ ಬಳ್ಳಾರಿ:

ಒಬಿಸಿ ವರ್ಗಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ, ಬರ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ, ವಾಲ್ಮೀಕಿ ನಿಗಮಕ್ಕೆ ಹಗರಣದ 187 ಕೋಟಿ ವಾಪಸ್ಸಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂರು ನಿಂದ ಪ್ರಾರಂಭವಾದ ಬೃಹತ್ ಬಳ್ಳಾರಿ ಚಲೋ ಪಾದಯಾತ್ರೆ ಮಂಗಳವಾರ 8ನೇ ದಿನಕ್ಕೆ ಕಾಲಿಟ್ಟಿದೆ.

ಇಂದು ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭೆ ಕ್ಷೇತ್ರದ ಹಳೆ ದರೋಜಿ ಗ್ರಾಮದಿಂದ ಬೃಹತ್ ಪಾದಯಾತ್ರೆ ಪ್ರಾರಂಭವಾಯಿತು. ಪಾದಯಾತ್ರೆಯಲ್ಲಿ  ಬಿಜೆಪಿ ನಾಯಕರಾದ ಸಿ.ಟಿ.ರವಿ, ಬಿ.ವೈ.ರಾಘವೇಂದ್ರ, ಶ್ರೀರಾಮುಲು, ಅಶ್ವಥ್ ನಾರಾಯಣ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಶ್ರೀವತ್ಸ, ಟಿ.ಎಚ್.ಸುರೇಶ್ ಬಾಬು, ಕೆ.ಎಸ್. ದಿವಾಕರ್, ಬಂಗಾರು ಹನುಮಂತು ಸೇರಿದಂತೆ ವಿವಿಧ ನಾಯಕರು, ಸಾವಿರಾರು ಕಾರ್ಯಕರ್ತರು ವಿಜಯೇಂದ್ರ ಅವರೊಂದಿಗೆ ಬಿರು ಬಿಸಿಲನ್ನೂ ಲೆಕ್ಕಿಸದೇ ಹೆಜ್ಜೆ ಹಾಕಿದರು.

ಇದನ್ನೂ ಓದಿ:

ಸಂಡೂರು ತಾಲೂಕಿನ ಹಳೇ ದರೋಜಿ ಮೂಲಕ ಮಧ್ಯಾಹ್ನ ಹೊಸ ದರೋಜಿ ತಲುಪಲಿದೆ. ಊಟ ಸವಿದು ಅಲ್ಲಿಂದ ಕುಡುತಿನಿ ಪಟ್ಟಣಕ್ಕೆ ನಾಯಕರು ಹೆಜ್ಜೆ ಹಾಕಲಿದ್ದು, ಸಂಜೆ ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ದೇಗುಲ ಬಳಿ ಬೃಹತ್ ಬಹಿರಂಗ ಸಭೆ ನಡೆಯಲಿದೆ. ನಾಯಕರು ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !