September 8, 2026
Tuesday, September 8, 2026
spot_img

ಪದೇ ಪದೆ ಬರುವ ಬೆನ್ನು ನೋವಿಗೆ ಕಾರಣವೇನು? ಸ್ವಲ್ಪ ಹೊತ್ತು ರೆಸ್ಟ್‌ ಮಾಡಿದ್ರೆ ಎಲ್ಲವೂ ಸರಿಹೋಗತ್ತಾ?

ಈಗಿನ ಕೆಲಸದ ಪದ್ಧತಿಯಲ್ಲಿ ಅನೇಕರು ಕುಳಿತಲ್ಲೇ ಗಂಟೆಗಟ್ಟಲೆ ಕುಳಿತು ಅಥವಾ ನಿಂತಲ್ಲೇ ಗಂಟೆಗಟ್ಟಲೆ ನಿಂತು ದಿನಕಳೆಯುತ್ತಾರೆ. ಇನ್ನೇನು ಬೆನ್ನು ನೋವು ತಡೆಯೋಕೆ ಆಗೋದೇ ಇಲ್ಲ ಎನ್ನುವಾಗ ಕೆಲವು ದಿನಗಳ ದೀರ್ಘ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ವಿಶ್ರಾಂತಿ ತೆಗೆದುಕೊಂಡ ನಂತರ ಬೆನ್ನು ನೋವು ಕಡಿಮೆಯಾಗುತ್ತದೆ, ಆದರೆ ಕೆಲವು ವಾರಗಳ ನಂತರ ಮತ್ತೆ ಅದೇ ನೋವು ಶುರುವಾಗುತ್ತದೆ. ಇದನ್ನೇ Recurring Back Pain ಎಂದು ಕರೆಯುತ್ತಾರೆ. “ವಿಶ್ರಾಂತಿ ತೆಗೆದುಕೊಂಡರೆ ಸರಿ ಹೋಗುತ್ತದೆ” ಎನ್ನುವುದು ತಪ್ಪು ಕಲ್ಪನೆ.

ಪದೇ ಪದೇ ಬೆನ್ನು ನೋವು ಬರಲು ಕಾರಣಗಳೇನು?

ದುರ್ಬಲವಾದ ಕೋರ್ ಸ್ನಾಯುಗಳು: ನಮ್ಮ ಬೆನ್ನುಮೂಳೆಯನ್ನು ಹಿಡಿದು ನಿಲ್ಲಿಸುವುದು ಹೊಟ್ಟೆ ಮತ್ತು ಬೆನ್ನಿನ ಸ್ನಾಯುಗಳು. ಈ ಸ್ನಾಯುಗಳು ದುರ್ಬಲವಾದರೆ, ಸ್ವಲ್ಪ ಕೆಲಸ ಮಾಡಿದರೂ ಬೆನ್ನಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ.

ತಪ್ಪು ಭಂಗಿ (Bad Posture): ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು, ಮೊಬೈಲ್ ಅನ್ನು ಬಗ್ಗಿ ನೋಡುವುದು, ತಪ್ಪಾಗಿ ಮಲಗುವುದು – ಇವೆಲ್ಲವೂ ಡಿಸ್ಕ್ ಮತ್ತು ಸ್ನಾಯುಗಳ ಮೇಲೆ ನಿರಂತರ ಒತ್ತಡವನ್ನು ಉಂಟು ಮಾಡುತ್ತದೆ.

ಡಿಸ್ಕ್ ಮತ್ತು ಕೀಲುಗಳ ಸಮಸ್ಯೆ: ಸ್ನಾಯು ಸೆಳೆತ ಮಾತ್ರವಲ್ಲ, ಡಿಸ್ಕ್ ಬಲ್ಜ್, ಸಯಾಟಿಕಾ, ಸ್ಪಾಂಡಿಲೋಸಿಸ್ ನಂತಹ ಸಮಸ್ಯೆಗಳು ವಿಶ್ರಾಂತಿಯಿಂದ ಗುಣವಾಗುವುದಿಲ್ಲ.

ಚಲನೆಯ ಕೊರತೆ: ನೋವಿನ ಭಯದಿಂದ ಚಲನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರೆ, ಸ್ನಾಯುಗಳು ಇನ್ನಷ್ಟು ಬಿಗಿಯಾಗುತ್ತವೆ ಮತ್ತು ರಕ್ತ ಸಂಚಾರ ಕಡಿಮೆಯಾಗಿ ನೋವು ಹೆಚ್ಚಾಗುತ್ತದೆ.

    ಕೇವಲ ವಿಶ್ರಾಂತಿ ಏಕೆ ಪರಿಹಾರವಲ್ಲ?

    ವಿಶ್ರಾಂತಿಯು ನೋವನ್ನು ತಾತ್ಕಾಲಿಕವಾಗಿ ಮರೆಮಾಚುತ್ತದೆ, ಮೂಲ ಕಾರಣವನ್ನು ಸರಿಪಡಿಸುವುದಿಲ್ಲ. ನಿರಂತರ ವಿಶ್ರಾಂತಿಯಿಂದ ಸ್ನಾಯುಗಳು ದುರ್ಬಲಗೊಳ್ಳುತ್ತವೆ, ಬೆನ್ನುಮೂಳೆ ಗಟ್ಟಿಯಾಗುತ್ತದೆ ಮತ್ತು ನೋವು ಪದೇ ಪದೇ ಬರುವ ಚಕ್ರ (Pain-Spasm-Pain Cycle) ಶುರುವಾಗುತ್ತದೆ. ಅದಕ್ಕಾಗಿಯೇ ವೈದ್ಯರು ಈಗ “Active Recovery” ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

    ಫಿಸಿಯೋಥೆರಪಿ ಹೇಗೆ ಶಾಶ್ವತ ಪರಿಹಾರ ನೀಡುತ್ತದೆ?

    ಫಿಸಿಯೋಥೆರಪಿ ನೋವಿನ ಮೂಲ ಕಾರಣವನ್ನು ಹುಡುಕಿ ಅದನ್ನು ಸರಿಪಡಿಸುತ್ತದೆ.

    ನೋವು ಮತ್ತು ಬಿಗಿತವನ್ನು ಕಡಿಮೆ ಮಾಡುತ್ತದೆ: IFT, Ultrasound, TENS ನಂತಹ ಅತ್ಯಾಧುನಿಕ ಚಿಕಿತ್ಸೆಯಿಂದ ಉರಿಯೂತವನ್ನು ಕಡಿಮೆ ಮಾಡಲಾಗುತ್ತದೆ.

    ಸ್ನಾಯುಗಳನ್ನು ಬಲಪಡಿಸುತ್ತದೆ: ವೈಜ್ಞಾನಿಕ ವ್ಯಾಯಾಮಗಳ ಮೂಲಕ ಕೋರ್ ಸ್ನಾಯುಗಳು, ಬೆನ್ನಿನ ಸ್ನಾಯುಗಳನ್ನು ಬಲಪಡಿಸಿ ಬೆನ್ನುಮೂಳೆಗೆ ಸರಿಯಾದ ಆಧಾರ ನೀಡಲಾಗುತ್ತದೆ.

    ಭಂಗಿಯನ್ನು ಸರಿಪಡಿಸುತ್ತದೆ: ತಪ್ಪು ಭಂಗಿಯನ್ನು ಸರಿಪಡಿಸಿ, ಕುಳಿತುಕೊಳ್ಳುವ, ನಿಲ್ಲುವ, ವಸ್ತುಗಳನ್ನು ಎತ್ತುವ ಸರಿಯಾದ ವಿಧಾನವನ್ನು ಕಲಿಸಲಾಗುತ್ತದೆ.

    ಮರುಕಳಿಸುವುದನ್ನು ತಡೆಯುತ್ತದೆ: ಕೇವಲ ನೋವು ಕಡಿಮೆ ಮಾಡುವುದಲ್ಲ, ಮುಂದೆ ನೋವು ಬರದಂತೆ ತಡೆಯಲು ದೀರ್ಘಕಾಲೀನ ವ್ಯಾಯಾಮ ಯೋಜನೆಯನ್ನು ನೀಡಲಾಗುತ್ತದೆ.

      ನೆನಪಿಡಿ, ಬೆನ್ನು ನೋವಿಗೆ ವಿಶ್ರಾಂತಿ ತಾತ್ಕಾಲಿಕ, ಫಿಸಿಯೋಥೆರಪಿ ಶಾಶ್ವತ.

      • ಡಾ.ಶ್ರೀ ಕಲ್ಯಾಣಿ, ಹಿರಿಯ ಫಿಸಿಯೋಥೆರಪಿ ತಜ್ಞರು, ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಶೃಂಗೇರಿ

      Must Read

      error: Copy ಬೇಡ, Coffee ಜೊತೆ ಹಂಚಿಕೊಳ್ಳಿ !