September 8, 2026
Tuesday, September 8, 2026
spot_img

‘5 ದಿನ ಕೆಲಸ, 2 ದಿನ ರಜೆ’ ಬೇಡಿಕೆ: ಬ್ಯಾಂಕ್ ಯೂನಿಯನ್‌ಗಳಿಂದ ಸೆ.11ಕ್ಕೆ ದೇಶವ್ಯಾಪಿ ಮುಷ್ಕರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐದು ದಿನಗಳ ಬ್ಯಾಂಕಿಂಗ್ ವಾರ ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆಪ್ಟೆಂಬರ್ 11ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ.

ಪ್ರಮುಖ ಬ್ಯಾಂಕ್ ಉದ್ಯೋಗಿ ಮತ್ತು ಅಧಿಕಾರಿ ಸಂಘಟನೆಗಳನ್ನು ಒಳಗೊಂಡಿರುವ UFBU, ಸರ್ಕಾರದ ಮುಂದೆ ಹಲವು ಬಾರಿ ಬೇಡಿಕೆಗಳನ್ನು ಮಂಡಿಸಿದ್ದರೂ ಸೂಕ್ತ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದೆ.

ಇದನ್ನೂ ಓದಿ:

ಸರ್ಕಾರದ ಅನುಮೋದನೆ ಬಾಕಿ

ಐದು ದಿನಗಳ ಬ್ಯಾಂಕಿಂಗ್ ವಾರ ಜಾರಿಗೆ ಸಂಬಂಧಿಸಿದ ಪ್ರಸ್ತಾವನೆ 2024ರಿಂದಲೂ ಸರ್ಕಾರದ ಅನುಮೋದನೆಗಾಗಿ ಬಾಕಿ ಉಳಿದಿದೆ ಎಂದು UFBU ತಿಳಿಸಿದೆ. ಬ್ಯಾಂಕ್‌ಗಳ ಬೇಡಿಕೆಯಂತೆ ವಾರದ ಇತರ ದಿನಗಳಲ್ಲಿ ಹೆಚ್ಚುವರಿ ಕೆಲಸದ ಅವಧಿಯನ್ನು ಹೊಂದಾಣಿಕೆ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದರೂ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಸಂಘಟನೆ ಹೇಳಿದೆ.

ಸೆಪ್ಟೆಂಬರ್ 11ರ ಮುಷ್ಕರದ ಬಳಿಕ ಸೆಪ್ಟೆಂಬರ್ 28, 29 ಮತ್ತು 30ರಂದು ಮೂರು ದಿನಗಳ ಮುಷ್ಕರಕ್ಕೂ ಕರೆ ನೀಡಲಾಗಿದೆ. ಬೇಡಿಕೆಗಳು ಈಡೇರದಿದ್ದರೆ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ದೇಶವ್ಯಾಪಿ ಮುಷ್ಕರ ನಡೆಸುವ ಎಚ್ಚರಿಕೆಯನ್ನೂ ಸಂಘಟನೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !