ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಸಿನಿಮಾ ರಂಗದಲ್ಲಿ ತಮ್ಮದೇ ಆದ ದೊಡ್ಡ ಫ್ಯಾನ್ ಬೇಸ್ ಹೊಂದಿರೋ ಸೂಪರ್ಸ್ಟಾರ್ ದುಲ್ಕರ್ ಸಲ್ಮಾನ್, ‘I’m Game’ ಅನ್ನೋ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡೋಕೆ ಬಂದ್ರು. ಸಿನಿಮಾ ರಿಲೀಸ್ ಆಗೋಕು ಮುಂಚೆ ಹೈಪ್ ಮಾತ್ರ ಬೇರೆ ಲೆವೆಲ್ನಲ್ಲಿತ್ತು. ಆದ್ರೆ ಥಿಯೇಟರ್ಗೆ ಬಂದ್ಮೇಲೆ ಕಥೆಯೇ ಬೇರೆಯಾಯ್ತು. ಕ್ರಿಟಿಕ್ಸ್ ಮತ್ತು ಆಡಿಯನ್ಸ್ ಕಡೆಯಿಂದ ರಿಸ್ಪಾನ್ಸ್ ಮಿಕ್ಸ್ಡ್ ಆಗಿ ಬಂತು. ಕೆಲವರಿಗೆ ಮಾಸ್ ಅನಿಸಿದ್ರೆ, ಇನ್ನು ಕೆಲವರಿಗೆ ‘ಏನಪ್ಪಾ ಇದು’ ಅನಿಸಿಬಿಡ್ತು. ಇದರ ನೇರ ಪೆಟ್ಟು ಈಗ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಬಿದ್ದಿದೆ.

ಸಿನಿಮಾ ರಿಲೀಸ್ ಆದ ಫಸ್ಟ್ ವೀಕೆಂಡ್ನಲ್ಲಿ ‘I’m Game’ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡ್ತು. ಸ್ಯಾಕ್ನಿಲ್ಕ್ ರಿಪೋರ್ಟ್ ಪ್ರಕಾರ, ಫಸ್ಟ್ ವೀಕೆಂಡ್ನಲ್ಲೇ ಸುಮಾರು 8.70 ಕೋಟಿ ಕಲೆಕ್ಷನ್ ಮಾಡ್ತು. ಸಿನಿಮಾ ಸೂಪರ್ ಹಿಟ್ ಆಗ್ಬಿಡ್ತು ಎಂದು ದುಲ್ಕರ್ ಫ್ಯಾನ್ಸ್ ಖುಷಿಯಾಗಿದ್ರು. ಆದ್ರೆ ಸೋಮವಾರ ಬರ್ತಿದ್ದ ಹಾಗೆ ಥಿಯೇಟರ್ನಲ್ಲಿ ಜನ ಕಮ್ಮಿಯಾಗಿ, ಕಲೆಕ್ಷನ್ ದಿಢೀರನೆ ಕೆಳಗೆ ಬಿತ್ತು. ಸೋಮವಾರ ಕಲೆಕ್ಟ್ ಆಗಿದ್ದು ಬರಿ 1.50 ಕೋಟಿ. ಇನ್ನು ಮಂಗಳವಾರ ಅಷ್ಟೋ ಇಷ್ಟೋ ಅಂದುಕೊಂಡ್ರೆ, ಬಂದಿದ್ದು ಜಸ್ಟ್ 1.12 ಕೋಟಿ. ಅಂದರೆ, ವೀಕ್ಡೇಸ್ನಲ್ಲಿ ಸಿನಿಮಾ ಗಟ್ಟಿಯಾಗಿ ನಿಲ್ಲೋಕೆ ಆಗದೆ ಒದ್ದಾಡ್ತಿದೆ.

ಈ ಸಿನಿಮಾ ಓಣಂ ಹಬ್ಬಕ್ಕೇ ಬರಬೇಕಿತ್ತು. ಅಲ್ಲಿ ಪೃಥ್ವಿರಾಜ್ ಸುಕುಮಾರನ್ರ ‘ಖಲೀಫಾ: ದಿ ರೂಲರ್’ ಮತ್ತು ನಿವಿನ್ ಪೌಲಿ ಅವರ ‘ಬೆತ್ಲಹೇಮ್ ಕುಟುಂಬ ಯುನಿಟ್’ ಜೊತೆ ಕ್ಲಾಶ್ ನಡೀಬೇಕಿತ್ತು. ಆದ್ರೆ ರಿಲೀಸ್ ಲೇಟ್ ಆಯ್ತು. ತಡವಾಗಿ ಬಂದ್ರೂ ದುಲ್ಕರ್ ಸಿನಿಮಾ, ಪೃಥ್ವಿರಾಜ್ ಅವರ ‘ಖಲೀಫಾ’ ಲೈಫ್ಟೈಮ್ ಕಲೆಕ್ಷನ್ ದಾಟಿ ಮುನ್ನುಗ್ಗಿದೆ. ಆದ್ರೆ ನಿವಿನ್ ಪೌಲಿ ಅವರ ‘ಬೆತ್ಲಹೇಮ್ ಕುಟುಂಬ ಯುನಿಟ್’ ಮಾಡಿದ ಭರ್ಜರಿ ಬಿಸಿನೆಸ್ ಮುಟ್ಟೋಕೆ ‘I’m Game’ಗೆ ಸಾಧ್ಯವೇ ಆಗ್ಲಿಲ್ಲ.
ಇನ್ನೊಂದೆಡೆ, ದುಲ್ಕರ್ ಅವರ ಹಿಂದಿನ ಹಿಟ್ ಸಿನಿಮಾ ‘ಕಾಂತಾ’ ಇಂಡಿಯಾದಲ್ಲಿ 22 ಕೋಟಿ ಗಳಿಸಿತ್ತು. ಈಗ ‘I’m Game’ 21.62 ಕೋಟಿಯಲ್ಲಿದ್ದು, ‘ಕಾಂತಾ’ ರೆಕಾರ್ಡ್ ಮುರಿಯೋಕೆ ಇನ್ನು ಸ್ವಲ್ಪ ದಿನವೇ ಬಾಕಿ ಇದೆ.

ಸೋಮವಾರದಿಂದ ಶುಕ್ರವಾರದವರೆಗೆ ಬಿದ್ದಿರೋ ಪೆಟ್ಟನ್ನು ಸರಿದೂಗಿಸೋಕೆ ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ನಡೆಯಬೇಕಿದೆ. ದುಲ್ಕರ್ ಆಕ್ಷನ್ ಮ್ಯಾಜಿಕ್ ಸೆಕೆಂಡ್ ವೀಕೆಂಡ್ನಲ್ಲಾದ್ರೂ ವರ್ಕೌಟ್ ಆಗುತ್ತಾ, ಕಾದು ನೋಡಬೇಕು.



