ಮೈದಾ ಹಿಟ್ಟು
ಸಕ್ಕರೆ ಪುಡಿ
ಬೆಣ್ಣೆ ಅಥವಾ ತುಪ್ಪ
ಪೈನಾಪಲ್ ಎಸೆನ್ಸ್
ಪೈನಾಪಲ್ ಪಲ್ಪ್
ಬೇಕಿಂಗ್ ಪೌಡರ್
ಯೆಲ್ಲೋ ಫುಡ್ ಕಲರ್
ಹಾಲು
ಒಂದು ಅಗಲವಾದ ಪಾತ್ರೆಯಲ್ಲಿ ಅರ್ಧ ಕಪ್ ಕರಗಿದ ಬೆಣ್ಣೆ ಮತ್ತು ಅರ್ಧ ಕಪ್ ಸಕ್ಕರೆ ಪುಡಿಯನ್ನು ಹಾಕಿ. ಇವೆರಡನ್ನೂ ವಿಸ್ಕ್ ಅಥವಾ ಚಮಚದಿಂದ ಚೆನ್ನಾಗಿ ಕಲಸಿ. ಅದು ಕ್ರೀಮ್ ಥರ ಬಿಳಿಯಾಗಿ, ಹಗುರವಾಗುವವರೆಗೆ ಒಂದೆರಡು ನಿಮಿಷ ಚೆನ್ನಾಗಿ ತಿರುಗಿಸಿ. ಈಗ ಆ ಕ್ರೀಮ್‌ಗೆ ಪೈನಾಪಲ್ ಎಸೆನ್ಸ್ ಮತ್ತು ಒಂದೇ ಒಂದು ಚಿಟಿಕೆ ಯೆಲ್ಲೋ ಫುಡ್ ಕಲರ್ ಹಾಕಿ ಕಲಸಿ. ಬೇಕಿದ್ದರೆ ಸಣ್ಣಗೆ ಹೆಚ್ಚಿದ ಪೈನಾಪಲ್ ಚೂರುಗಳನ್ನು ಅಥವಾ ಪಲ್ಪ್ ಅನ್ನು ಸೇರಿಸಿ. ಇದು ಕುಕೀಸ್ ತಿನ್ನುವಾಗ ಮಧ್ಯ ಮಧ್ಯ ಸಿಕ್ಕಿ ಸಖತ್ ಟೇಸ್ಟ್ ಕೊಡುತ್ತದೆ.
ಈಗ ಒಂದು ಜರಡಿ ತೆಗೆದುಕೊಂಡು ಮೈದಾ ಹಿಟ್ಟು ಮತ್ತು ಬೇಕಿಂಗ್ ಪೌಡರ್ ಹಾಕಿ ಜರಡಿಸಿ. ಜರಡಿಸುವುದರಿಂದ ಕುಕೀಸ್ ಸಖತ್ ಸಾಫ್ಟ್ ಆಗಿ ಬರುತ್ತವೆ. ಎಲ್ಲವನ್ನು ಚಪಾತಿ ಹಿಟ್ಟಿಗಿಂತ ಕೊಂಚ ಮೆದುವಾಗಿ ನಾದಿಕೊಳ್ಳಿ. ಹಿಟ್ಟು ಗಟ್ಟಿಯಾದರೆ 2-3 ಚಮಚ ಹಾಲು ಸೇರಿಸಿ. ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ನಿಮ್ಮ ಅಂಗೈಯಲ್ಲಿ ಇಟ್ಟು ಒತ್ತಿ. ಒಂದು ಕುಕ್ಕರ್‌ಗೆ 1 ಕಪ್ ಉಪ್ಪು ಅಥವಾ ಮರಳು ಹಾಕಿ, ಅದರ ಮೇಲೆ ಒಂದು ಸ್ಟ್ಯಾಂಡ್ ಇಡಿ. 10 ನಿಮಿಷ ಮುಚ್ಚಳ ಮುಚ್ಚಿ ಮೀಡಿಯಂ ಉರಿಯಲ್ಲಿ ಬಿಸಿ ಮಾಡಿ.
ಒಂದು ಪ್ಲೇಟ್‌ಗೆ ತುಪ್ಪ ಹಚ್ಚಿ, ಮಾಡಿಟ್ಟ ಕುಕೀಸ್ ಅನ್ನು ಇಡಿ. ನಂತರ ಈ ಪ್ಲೇಟ್ ಅನ್ನು ಕುಕ್ಕರ್ ಒಳಗಿನ ಸ್ಟ್ಯಾಂಡ್ ಮೇಲೆ ಇಟ್ಟು, ಮುಚ್ಚಳ ಮುಚ್ಚಿ. ಸಣ್ಣ ಉರಿಯಲ್ಲಿ 15 ರಿಂದ 20 ನಿಮಿಷ ಬೇಯಿಸಿ. ಕುಕೀಸ್ ತಳಭಾಗ ತಿಳಿ ಕಂದು ಬಣ್ಣಕ್ಕೆ ತಿರುಗಿದರೆ ಕುಕೀಸ್ ರೆಡಿಯಾಗಿದೆ ಎಂದರ್ಥ.
ಈಗ ಬೇಕರಿ ಶೈಲಿಯ ಪೈನಾಪಲ್ ಕುಕೀಸ್ ಸವಿಯಲು ಸಿದ್ಧ!



