ಮೈದಾ ಹಿಟ್ಟು
ಸಕ್ಕರೆ
ಬೆಣ್ಣೆ ಅಥವಾ ಅಡುಗೆ ಎಣ್ಣೆ
ಹಾಲು
ಮೊಟ್ಟೆ
ರೆಡ್ ಚೆರ್ರಿಗಳು
ಬೇಕಿಂಗ್ ಪೌಡರ್
ಬೇಕಿಂಗ್ ಸೋಡಾ
ವೆನಿಲ್ಲಾ ಎಸೆನ್ಸ್
ಉಪ್ಪು
ಮೊದಲು ಹೆಚ್ಚಿಟ್ಟುಕೊಂಡ ಚೆರ್ರಿ ತುಂಡುಗಳಿಗೆ ಅರ್ಧ ಚಮಚ ಮೈದಾ ಹಿಟ್ಟು ಹಾಕಿ ಮಿಕ್ಸ್ ಮಾಡಿ ಪಕ್ಕಕ್ಕೆ ಇಡಿ. ಹೀಗೆ ಮಾಡೋದ್ರಿಂದ ಕೇಕ್ ಬೇಕಿಂಗ್ ಆಗುವಾಗ ಚೆರ್ರಿಗಳು ತಳಕ್ಕೆ ಹೋಗಿ ಕೂರಲ್ಲ, ಕೇಕ್ ತುಂಬಾ ಚೆನ್ನಾಗಿ ಹರಡಿಕೊಳ್ಳುತ್ತವೆ. ಒಂದು ಅಗಲವಾದ ಬೌಲ್ಗೆ ಬೆಣ್ಣೆ ಮತ್ತು ಪುಡಿ ಮಾಡಿದ ಸಕ್ಕರೆ ಹಾಕಿ ಚೆನ್ನಾಗಿ ವಿಸ್ಕ್ ಮಾಡಿ. ನಂತರ ಎರಡು ಮೊಟ್ಟೆಗಳನ್ನು ಹೊಡೆದು ಹಾಕಿ, ಜೊತೆಗೆ ವೆನಿಲ್ಲಾ ಎಸೆನ್ಸ್ ಸೇರಿಸಿ ಕ್ರೀಮ್ ಥರ ಬರೋವರೆಗೂ ಮಿಕ್ಸ್ ಮಾಡಿ. ಈಗ ಅದೇ ಬೌಲ್ಗೆ ಮೈದಾ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಮತ್ತು ಉಪ್ಪನ್ನು ಜರಡಿ ಹಿಡಿದು ಹಾಕಿ. ಜರಡಿ ಹಿಡಿಯೋದ್ರಿಂದ ಕೇಕ್ ಸಾಫ್ಟ್ ಆಗಿ ಬರುತ್ತೆ. ಬೌಲ್ಗೆ ಸ್ವಲ್ಪ ಸ್ವಲ್ಪವೇ ಹಾಲು ಸೇರಿಸುತ್ತಾ ಮೆಲ್ಲಗೆ ಕಲಿಸಿ. ಹಿಟ್ಟು ಜಾಸ್ತಿ ಗಟ್ಟಿಯೂ ಇರಬಾರದು. ಕೊನೆಯಲ್ಲಿ ಚೆರ್ರಿಗಳನ್ನು ಹಾಕಿ ಮಿಕ್ಸ್ ಮಾಡಿ.
ಕುಕ್ಕರ್ನಲ್ಲಿ ಮಾಡೋದಾದ್ರೆ ಒಳಗಡೆ ಸ್ವಲ್ಪ ಉಪ್ಪು ಅಥವಾ ಮರಳು ಹಾಕಿ, ಅದರ ಮೇಲೆ ಒಂದು ಸ್ಟ್ಯಾಂಡ್ ಇಡಿ. ವಿಷಲ್ ಮತ್ತು ರಬ್ಬರ್ ತೆಗೆದು 10 ನಿಮಿಷ ಹೈ ಫ್ಲೇಮ್ನಲ್ಲಿ ಪ್ರೀ-ಹೀಟ್ ಮಾಡಿ. ಪಾತ್ರೆಗೆ ಸ್ವಲ್ಪ ಎಣ್ಣೆ ಸವರಿ, ಮೈದಾ ಉದುರಿಸಿ ಹಿಟ್ಟನ್ನು ಅದಕ್ಕೆ ಹಾಕಿ. ಕುಕ್ಕರ್ ಒಳಗಿಟ್ಟು ಸಣ್ಣ ಉರಿಯಲ್ಲಿ 35-40 ನಿಮಿಷ ಬೇಯಿಸಿ.
ಒಂದು ಟೂತ್ಪಿಕ್ ಅಥವಾ ಚಾಕು ಚುಚ್ಚಿ ನೋಡಿ ಅದು ಕ್ಲೀನ್ ಆಗಿ ಹೊರಗೆ ಬಂದರೆ ನಿಮ್ಮ ಸ್ಪಾಂಜಿ ಚೆರ್ರಿ ಕೇಕ್ ರೆಡಿ!



