ಸಾಮಾಗ್ರಿಗಳು
ಬಾಳೆಕಾಯಿ
ಉಪ್ಪು
ಕೊಬ್ಬರಿ ಎಣ್ಣೆ
ಪೆಪ್ಪರ್ ಪುಡಿ
ಅರಿಶಿನ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಡಿ. ಸಣ್ಣ ಉರಿಯಲ್ಲಿ ಎಣ್ಣೆ ಬಿಸಿಯಾಗಲಿ. ತದನಂತರ ಬಾಳೆಕಾಯಿ ಸಿಪ್ಪೆ ತೆಗೆದು ಎಣ್ಣೆಗೆ ಚಿಕ್ಕ ಪೀಸ್ಗಳಂತೆ ಕಟ್ ಮಾಡಿ ಹಾಕಿ
ಇನ್ನೊಂದು ಕಡೆ ನೀರಿಗೆ ಉಪ್ಪು, ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ. ಆ ನೀರನ್ನು ಚಿಪ್ಸ್ ಬೇಯುವಾಗ ಮಧ್ಯ ಮಧ್ಯ ಚುಮುಕಿಸಿ.
ಕ್ರಿಸ್ಪಿ ಆದ ನಂತರ ಚಿಪ್ಸ್ ಒಂದು ಬಟ್ಟಲಿಗೆ ಹಾಕಿ. ಮೇಲೆ ಪೆಪ್ಪರ್ ಪುಡಿ ಉದುರಿಸಿ ಮಿಕ್ಸ್ ಮಾಡಿದ್ರೆ ರುಚಿಯಾದ ಚಿಪ್ಸ್ ರೆಡಿ



